
ಚನ್ನಮ್ಮನ ಕಿತ್ತೂರ,ಸೆ.೨೦: ಮುಖ್ಯಮಂತ್ರಿ ಕನಸಿನ ಕೂಸಾದ ಪ್ರಜಾಸೇವಾ ಆಂದೋಲನಾ ಕಾರ್ಯಕ್ರಮದ ಮೂಲಕ ರಾಜ್ಯದ-ಜಿಲ್ಲೆ-ತಾಲೂಕುಗಳ ಗ್ರಾಪಂ ವ್ಯಾಪ್ತಿಗಳಲ್ಲಿ ಜನಪ್ರತಿನಿಧಿಗಳು ಪ್ರತಿ ಶನಿವಾರ ಜನರ ಬಳಿಗೆ ತೆರಳಿ ಸಮಸ್ಯೆ ತಿಳಿದು ಸ್ಥಳದಲ್ಲಿ ಪರಿಹಾರ ಕಂಡುಕೊAಡು ಜನರಿಗೆ ಅನುಕೂಲ ಮಾಡಲು ಅಧಿಕಾರಿಗಳು ಆಗಮಿಸಿದ್ದು ಜನತೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಎಂಕೆಹುಬ್ಬಳ್ಳಿ ಪಟ್ಟಣದ ಪಿಎಂಶ್ರೀ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನ ಸಭೆ ಅಧ್ಯಕ್ಷತೆ ವಹಿಸಿ ತಹಶೀಲ್ದಾರ ಕಲ್ಲನಗೌಡ ಪಾಟೀಲ ಮಾತನಾಡಿದರು.
ಇದೇ ವೇಳೆ ಸುಕನ್ಯಾ ಸಮೃದ್ದಿ ಯೋಜನೆಯಡಿ ಫಲಾನುಭವಿಗಳಿಗೆ ಪಾಸ್‌ಬುಕ್ ಹಾಗೂ ಅರ್ಹರಿಗೆ ವಿವಿಧ ಯೋಜನೆಯಡಿ ಮಂಜೂರಾದ ಪಿಂಚಣಿ ಆದೇಶ ಪತ್ರ ನೀಡಲಾಯಿತು.
ಈ ವೇಳೆ ಪಪಂ ಅಧ್ಯಕ್ಷ ಸುರೇಶ ಮುತ್ನಾಳ, ಮಾಜಿ ಜಿಪಂ ಸದಸ್ಯ ಮ.ಸ.ಸ.ಕಾ. ಸದಸ್ಯ ಫಕ್ಕೀರಪ್ಪ ಸಕ್ರೇನ್ನವರ, ಸಣ್ಣ ನೀರಾವರಿ ಅಧಿಕಾರಿ ಮಹೇಶ ಪಾಟೀಲ, ಬಿಇಓ ಚನ್ನಬಸಪ್ಪ ತುಬಾಕಿ, ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಸ್ವಾಗತಿಸಿದರು. ತಾಪಂ ಇಓ ಮಹೇಶ ಹೂಲಿ, ವಿಶೇಷ ತಹಶೀಲ್ದಾರ ಪ್ರಕಾಶ ಕೋರಿ, ಶಿರಸ್ತೆದಾರ ಸವಿತಾ ಹರಿಜನ, ಕಂದಾಯ ನಿರೀಕ್ಷಕ ಎಂ.ಎA. ನೀರಲಗಿ, ಸರ್ವೇ ಅಧಿಕಾರಿ ಅಶೋಕ ಹೊಸಗೇರಿ, ಸಿಡಿಪಿಓ ಅರುಣಕುಮಾರ, ಶ್ರೀದೇವಿ ಕುಂತೋಜಿ, ಆರ್‌ಎಫ್‌ಓ ಶಿವಾನಂದ ಕೋತ, ಪಿಡಬ್ಲೂಡಿ ಅಭಿಯಂತರ ಜಯಂತ ಗುಂಜಟ್ಕರ ಪಾಟೀಲ, ಗ್ರಾಮಲೆಕ್ಕಿಗ ರಾಜು ಕೊಂಡಿಕೊಪ್ಪ, ಕೆಇಬಿ ಎಇಇ ಶಿವಾನಂದ ಬಾಗಲಕೋಟ, ಪಶುವೈದ್ಯಾಧಿಕಾರಿ ಕದಂ ಸರ್, ದೊಡ್ಡಪ್ಪ ಗಣಾಚಾರಿ, ಅಶಪಾಕ ಹವಾಲ್ದಾರ, ಅನಿಲ್ ಎಮ್ಮಿ, ಪುಟ್ಟು ಪಟ್ಟಣಶೆಟ್ಟಿ, ಪಪಂ ಸರ್ವ ಸದಸ್ಯರು, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತರು, ಕಾಂದಾಯ-ಪಪA ಸಿಬ್ಬಂದಿ, ತಾಲೂಕಮಟ್ಟದ ಎಲ್ಲ ಅಧಿಕಾರಿಗಳು,





























