
ಭಾಲ್ಕಿ:ಜೂ.೬: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಹೊಂದುವುದರಿAದ ಅಸಾಧ್ಯ ಎಂಬುದನ್ನು ಸುಲಭವಾಗಿ ಸಾಧಿಸಲು ಸಹಕಾರಿ ಆಗುತ್ತದೆ ಎಂದು ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪ್ಪಳ್ಳಿ ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಚನ್ನಬಸವೇಶ್ವರ ಪಬ್ಲಿಕ್ ಶಾಲೆಯ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ಟೇಟ್ ಮತ್ತು ಸಿಬಿಎಸ್‌ಇ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಖಿನ್ನತೆ, ನಕಾರಾತ್ಮಕ ಧೋರಣೆಗೆ ಒಳಗಾಗಬಾರದು. ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ ಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ಮನಸ್ಸು, ಭಾವ, ಶರೀರ ಶುದ್ಧವಾಗಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ತಿಳಿಸಿದರು.ಡಳಿತಾಧಿಕಾರಿ ಮೋಹನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ ಕೋಸಂಬೆ, ಯುವ ಮುಖಂಡ ಶಿವಕುಮಾರ ಲೋಖಂಡೆ, ಹಿರಿಯ ಮುಖಂಡ ಅಶೋಕ ಬಾವುಗೆ, ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ದಾನಾ, ಡಾ.ಸಜ್ಜಲ್ ಬಳತೆ, ಪಾಲಕರಾದ ಮಹೇಶಕುಮಾರ ಬಡಿಗೇರ್, ಶಂಕರ ಪಾಟೀಲ್ ಸೇರಿದಂತೆ ಹಲವರು ಇದ್ದರು.ಪ್ರಾಚಾರ್ಯ ಎನ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಜಯಕುಮಾರ ಎಚ್ ಸ್ವಾಗತಿಸಿದರು. ಮಧುಕರ್ ಗಾಂವಕರ್ ನಿರೂಪಿಸಿ, ವಂದಿಸಿದರು.ಹೆತ್ತವರನ್ನು ಎಂದಿಗೂ ಮರೆಯದಿರಿ
ಹೆತ್ತವರು ತಮ್ಮ ಇಡೀ ಸುಖವನ್ನು ತ್ಯಾಗ ಮಾಡಿ ಮಕ್ಕಳ ಬೆಳವಣಿಗೆಗೆ ಶ್ರಮಿಸುತ್ತಾರೆ. ಮಕ್ಕಳಾದವರೂ ಹೆತ್ತವರನ್ನು ಜೀವನದ ಕೊನೆಯ ವರೆಗೂ ಸುಖದಿಂದ ನೋಡಿಕೊಳ್ಳಬೇಕು ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾAವಿ ಹೇಳಿದರು.ಮಕ್ಕಳು ಉತ್ತಮ ಶಿಕ್ಷಣ, ಸಂಸ್ಕಾರ ಪಡೆದು ಹೆತ್ತವರ ಕನಸು ಈಡೇರಿಸಿ ಅವರ ಋಣ ತೀರಿಸುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಕೇವಲ ರ‍್ಯಾಂಕ್ ಶಿಕ್ಷಣ ಪಡೆದರೇ ಜೀವನ ಪರಿಪೂರ್ಣ ಆಗುವುದಿಲ್ಲ. ಶಿಕ್ಷಣದ ಜತೆಗೆ ಬುದ್ಧಿವಂತಿಕೆ ಬೆಳೆಸಿ ಕೊಂಡು ಜೀವನವನ್ನು ಸಾರ್ಥಕತೆ ಪಡಿಸಿ ಕೊಳ್ಳಬೇಕು ಎಂದರು. ಹೆತ್ತವರು ಕೂಡ ಮಕ್ಕಳು ಶೈಕ್ಷಣಿಕ ಪ್ರಗತಿ ಸೇರಿ ಜೀವನದಲ್ಲಿ ಮುಂದೆ ಬರುವ ವರೆಗೂ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಸನ್ಮಾನ
ಇದೇವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಕರಣ ಶಿವಕುಮಾರ, ಅರ್ಪಿತ ನಾಗಪ್ಪ, ಶ್ರೀಶೈಲ್ ಲಕ್ಷö್ಮಣ, ವರುಣ ಸಂತೋಷ, ಸರ್ವೇಶ ಸಂತೋಷ ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಪರಮ ಪೂಜ್ಯರು, ಗಣ್ಯರು ಸನ್ಮಾನಿಸಿ, ಅಭಿನಂದಿಸಿದರು.
ಇAದಿನ ಎಐ ಜಗತ್ತಿನಲ್ಲಿ ಎಲ್ಲರೂ ಜ್ಞಾನವಂತರಾಗುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳಾದವರೂ ನಡೆ, ನುಡಿ, ಆಚಾರ, ವಿಚಾರ ಉತ್ತಮವಾಗಿಸಿ ಕೊಂಡು ಸಾರ್ಥಕ ಜೀವನ ತಮ್ಮದಾಗಿಸಿ ಕೊಳ್ಳಬೇಕು.
- ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ
ಗ್ರಾಮೀಣ ಭಾಗದಲ್ಲಿ ಚನ್ನಬಸವೇಶ್ವರ ಗುರುಕುಲ ಮಕ್ಕಳ ಪಾಲಿನ ಆಶಾಕಿರಣವಾಗಿದೆ. ಇಲ್ಲಿ ಕಲಿತ ಮಕ್ಕಳು ದೇಶದ ನೀಟ್-ಜೆಇಇ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆದು ದೇಶಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಮಾದರಿ.
- ಸೂರ್ಯಕಾಂತ ನಾಗಮಾರಪ್ಪಳ್ಳಿ ಅಧ್ಯಕ್ಷರು ನಾರಂಜಾ ಸಕ್ಕರೆ ಕಾರ್ಖಾನೆ

























