Home ಜಿಲ್ಲೆ ತಿಂಗಳಲ್ಲಿ ೧೦ ಸಾವಿರ ಸಸಿ ನೆಡುವಿಕೆ: ಡಾ. ಅಬ್ದುಲ್ ಖದೀರ್

ತಿಂಗಳಲ್ಲಿ ೧೦ ಸಾವಿರ ಸಸಿ ನೆಡುವಿಕೆ: ಡಾ. ಅಬ್ದುಲ್ ಖದೀರ್

ಬೀದರ್: ಬೀದರ್ ನಗರವನ್ನು ಹಸಿರಾಗಿಸಲು ಬೀದರ್ ನಾಗರಿಕ ಸನ್ಮಾರ್ಗ
ಸಮಿತಿ(ಬಿಎನ್‌ಎಸ್‌ಎಸ್)ಯು ಜಿಲ್ಲಾ ಆಡಳಿತ, ೧೦೦ ಸ್ವಯಂ ಸೇವಾ ಸಂಸ್ಥೆ ಹಾಗೂ ಶಿಕ್ಷಣ
ಸಂಸ್ಥೆಗಳ ಸಹಯೋಗದಲ್ಲಿ ‘ಹಸಿರು ಬೀದರ್ ಚಳವಳಿ’ ಹಮ್ಮಿಕೊಂಡಿದೆ ಎಂದು ಸಮಿತಿಯ
ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಭಾಂಗಣದಲ್ಲಿ
ಶುಕ್ರವಾರ ಹಸಿರು ಬೀದರ್ ಚಳವಳಿ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದು ಗಿಡ ಪೀಳಿಗೆ ಹೆಸರಿನಲ್ಲಿ’ ಘೋಷವಾಕ್ಯದ ಅಡಿಯ ಚಳವಳಿಯ ಅಂಗವಾಗಿ ಒಂದು ತಿಂಗಳ
ಅವಧಿಯಲ್ಲಿ ಬೀದರ್ ನಗರದಲ್ಲಿ ೧೦ ಸಾವಿರ ಸಸಿಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು
ತಿಳಿಸಿದರು.
ರಸ್ತೆ ಬದಿ, ಖಾಲಿ ಸ್ಥಳ, ಹಳೆಯ ಹಾಗೂ ಹೊಸ ಸಾರ್ವಜನಿಕ ಉದ್ಯಾನಗಳಲ್ಲಿ ವಿವಿಧ ಬಗೆಯ
ಸಸಿಗಳನ್ನು ನೆಡಲಾಗುವುದು. ಸಸಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆಗೆ ಎರಡು ವರ್ಷಗಳ
ವರೆಗೆ ಸಾಥ್ ಕೂಡ ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕರಿಗೆ ಸಸಿ ನೆಡಲು ಉತ್ತೇಜಿಸಲು ನಗರದ ಎಂಟು ಸ್ಥಳಗಳಲ್ಲಿ ಸಂಸ್ಥೆಯಿAದ
ತಾತ್ಕಾಲಿಕ ಸಸಿ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಸಮಿತಿ ರೂ. ೬ಕ್ಕೆ ಒಂದರAತೆ
ಖರೀದಿಸಿದ ಸಸಿಗಳನ್ನು ಈ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ರೂ. ೫ಕ್ಕೆ ಕೊಡಲಾಗುವುದು
ರೂ. ೧೩೦ಕ್ಕೆ ಪ್ಲಾಸ್ಟಿಕ್ ಟ್ರೀ ಗಾರ್ಡ್, ರೂ. ೧,೧೦೦ಕ್ಕೆ ಸ್ಟೀಲ್ ಟ್ರೀ
ಗಾರ್ಡಗಳು ಕೇಂದ್ರಗಳಲ್ಲಿ ಸಿಗಲಿವೆ ಎಂದು ತಿಳಿಸಿದರು.
ಹಸಿರು ಬೀದರ್ ಚಳವಳಿಯ ಆಪ್ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ಹೆಸರು
ನೋಂದಾಯಿಸಿ, ಅದರೊಳಗೆ ತಾವು ನೆಟ್ಟು ಪೋಷಿಸಿದ ಸಸಿಯ ಒಂದು ತಿಂಗಳ ನಂತರದ ಛಾಯಾಚಿತ್ರ
ಹಾಕಿದರೆ ಇ ಪ್ರಮಾಣ ಪತ್ರ, ಆರು ತಿಂಗಳ ನಂತರದ ಛಾಯಾಚಿತ್ರ ಹಾಕಿದರೆ ವಿಶೇಷ ಗಿಫ್ಟ್
ಹಾಗೂ ೧ ವರ್ಷದ ನಂತರದ ಭಾವಚಿತ್ರ ಹಾಕಿದವರಿಗೆ ಪರಿಸರ ರಕ್ಷಕ ಪ್ರಶಸ್ತಿ
ನೀಡಲಾಗುವುದು ಎಂದು ಹೇಳಿದರು.
ಸಕಾಲಕ್ಕೆ ಮಳೆ, ಬೆಳೆ, ಉತ್ತಮ ಪರಿಸರಕ್ಕಾಗಿ ಸಸಿ ನೆಡುವುದು ಬಹಳ ಅವಶ್ಯಕವಾಗಿದೆ.
ಮಂದಿರ, ಮಸೀದಿ, ಚರ್ಚಗಳ ಧಾರ್ಮಿಕ ಗುರುಗಳು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ
ಸಸಿ ನೆಡಲು ಪ್ರೇರಣೆ ನೀಡಬೇಕು. ಸಂಘ ಸಂಸ್ಥೆಗಳು, ದಾನಿಗಳು ಹಾಗೂ ಸಾರ್ವಜನಿಕರು
ನೆಟ್ಟ ಸಸಿಗಳಿಗೆ ಸಂರಕ್ಷಣೆಗೆ ಅಳವಡಿಸಲು ಟ್ರೀ ಗಾರ್ಡಗಳನ್ನು ಬಿಎನ್‌ಎಸ್‌ಎಸ್‌ಗೆ
ಕೊಡುಗೆಯಾಗಿ ನೀಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಉದ್ಯಾನಗಳ ಸಂರಕ್ಷಣೆಗೆ ಸ್ಥಳೀಯರ ಸಮಿತಿ ರಚನೆ, ಉದ್ಯಾನಗಳಲ್ಲಿ ತೆರೆದ
ಜಿಮ್ ಅಳವಡಿಕೆ ಹಾಗೂ ನಗರದ ಮುಲ್ತಾನಿ ಬಾಷಾ ದರ್ಗಾ ಸಮೀಪದ ಉದ್ಯಾನದಲ್ಲಿ
ಮಹಿಳೆಯರಿಗಾಗಿ ವಾಕಿಂಗ್ ಟ್ರ‍್ಯಾಕ್ ನಿರ್ಮಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಗ್ರೀನ್ ಇಂಡಿಯಾ ಪ್ರೊಜೆಕ್ಟ್ ಸಂಸ್ಥೆಯ ಅಧ್ಯಕ್ಷ ಸರ್ದಾರ್ ಮ???ಮೀತ್ ಸಿಂಗ್,
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಯರಡೋನಿ, ವಲಯ
ಅರಣ್ಯ ಅಧಿಕಾರಿ ಶಿವಕುಮಾರ ಮಾತನಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ
ಅಧ್ಯಕ್ಷ ಸುರೇಶ ಚನಶೆಟ್ಟಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಹಾವಶೆಟ್ಟಿ
ಪಾಟೀಲ, ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಪ್ರಧಾನ ಕಾಯದರ್ಶಿ ಅಶೋಕ ವಡಗಾವೆ,
ಟ್ರಸ್ಟಿಗಳಾದ ವೀರೇಶ ಖೇಳಗಿ, ರಫಿಕ್ ಸಾಬ್ ಗಾದಗಿ, ಡಾ. ರಾಜಶೇಖರ ಸೇಡಂಕರ್, ಡಾ.
ಶ್ವೇತಾ ಪಾಟೀಲ, ಪ್ರಾಚಾರ್ಯ ಖಾಜಾ ಪಟೇಲ್ ಮತ್ತಿತರರು ಇದ್ದರು.


ಸಸಿಗಳಲ್ಲೇ ಬೀದರ್ ಅರಳಿಸುವ ಕನಸು

ಬೀದರ್: ಬರುವ ದಿನಗಳಲ್ಲಿ ಸಸಿಗಳಲ್ಲೇ ಬೀದರ್ ಅಕ್ಷರ ಅರಳಿಸುವ ಕನಸು ತಮ್ಮದಾಗಿದೆ
ಎಂದು ಜಿಲ್ಲೆಯವರೇ ಆದ ಗ್ರೀನ್ ಇಂಡಿಯಾ ಪ್ರೊಜೆಕ್ಟ್ ಸಂಸ್ಥೆಯ ಅಧ್ಯಕ್ಷ, ಗ್ರೀನ್
ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಸರ್ದಾರ್ ಮನ್‌ಮೀತ್ ಸಿಂಗ್ ಹೇಳಿದರು.
ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸಹಕಾರ ನೀಡಿದರೆ ವಿಮಾನದಲ್ಲಿ ಹೋಗುವವರಿಗೆ
ಕಾಣುವಂತೆ ೧.೫ ಲಕ್ಷದಿಂದ ೨ ಲಕ್ಷ ಸಸಿಗಳಲ್ಲಿ ಇಂಗ್ಲಿಷನಲ್ಲಿ ಬೀದರ್ ಅಕ್ಷರ
ಅರಳಿಸುವ ಅಪೇಕ್ಷೆ ಇದೆ ಎಂದು ತಿಳಿಸಿದರು.
ವಾಹನದಲ್ಲಿ ಭಾರತ್ ಕೀ ಪರ್ಯಾವರಣ ಯಾತ್ರೆ ನಡೆಸಿ, ಸಾರ್ವಜನಿಕರ ಸಹಕಾರದೊಂದಿಗೆ
ದೇಶದಾದ್ಯAತ ೫ ಲಕ್ಷ ಸಸಿ ನೆಟ್ಟಿರುವೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಅಂಗವಾಗಿ ೭೫
ಸಾವಿರ ಸಸಿ ನೆಟ್ಟು, ಅವುಗಳನ್ನು ಹುತಾತ್ಮರಿಗೆ ಸಮರ್ಪಿಸಿರುವೆ ಎಂದು ಹೇಳಿದರು.
ಪ್ರತಿಯೊಬ್ಬರೂ ಸಸಿ ನೆಟ್ಟರೆ ಮುಂದಿನ ಐದು ವರ್ಷಗಳಲ್ಲಿ ಬೀದರ್ ಹಸಿರು ಬೀದರ್
ಆಗಲಿದೆ. ಮೃತಪಟ್ಟವರ ಸಮಾಧಿ ಬಳಿ ಸಸಿ ನೆಡುವ ಪರಿಪಾಠ ಬೆಳೆಯಬೇಕಾಗಿದೆ. ಶಿಕ್ಷಣ
ತಜ್ಞರೂ ಆದ ಡಾ. ಅಬ್ದುಲ್ ಖದೀರ್ ಅವರ ನೇತೃತ್ವದಲ್ಲಿ ಹಸಿರು ಬೀದರ್ ಚಳವಳಿ
ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.