Home ಜಿಲ್ಲೆ ಗ್ರಾ ಪಂ ಮಲಘಾಣದಲ್ಲಿ ‘ಸ್ವಚ್ಛತಾ ರೈಡ್’ ಚಾಲನೆ ನೀಡಿದ ಪಿಡಿಒ; ಚಕ್ರವರ್ತಿ

ಗ್ರಾ ಪಂ ಮಲಘಾಣದಲ್ಲಿ ‘ಸ್ವಚ್ಛತಾ ರೈಡ್’ ಚಾಲನೆ ನೀಡಿದ ಪಿಡಿಒ; ಚಕ್ರವರ್ತಿ

ಕೊಲ್ಹಾರ;ಜೂ.8: ಸಮೀಪದ ಮಲಘಾಣ ಗ್ರಾಮದಲ್ಲಿ ಫಿಟ್ ಇಂಡಿಯಾ ಆಂದೋಲನದ ಅಡಿಯಲ್ಲಿ ನಿನ್ನೆ ಭಾನುವಾರ ಸೈಕಲ್ ಚಾಲನಾ ಅಭಿಯಾನ ನಡೆಯಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ಸೈಕಲ್ ಜಾತಾಕೆ ಚಾಲನೆ ನೀಡಿದರು.

ಸೈಕಲ್ ಜಾತಾ ಆರಂಭದ ಸಂದರ್ಭದಲ್ಲಿ ವಿವಿಧ ವಯೋಮಾನದವರನ್ನು ಆಕರ್ಷಿಸಲು ಯೋಗ ,ಜುಂಬಾ, ಅಥವಾ ಸೈಕಲ್ ರೋಪ್ ಗಳಂತಹ ವಿವಿಧ ಪೂರಕ ಫಿಟ್ನೆಸ್ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.
ವಿಷಯಾಧಾರಿತ ಬೃಹತ್ ಸೈಕಲ್ ಚಾಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಿಡಿಓ ರಾಘವೇಂದ್ರ ಮಾತನಾಡಿ, ದೈನಂದಿನ ಜೀವನಶೈಲಿಯಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಭಾರತ ಸರಕಾರ ಜೂನ್ 1 ರಿಂದ 14 ರವರೆಗೆ ಪಾಕ್ಷಿಕ ಅಭಿಯಾನವನ್ನು ಆಚರಿಸಲು ನಿರ್ಧರಿಸಿದ್ದು ಆ ಮೂಲಕ ಬೃಹತ್ ಸೈಕಲ್ ಜಾತಾವನ್ನು ಆಯೋಜಿಸಿದೆ. ಈ ಮಹತ್ವದ ಯೋಜನೆಯ ಲಾಭವನ್ನು ಸಾರ್ವಜನಿಕರು, ಗ್ರಾಮ ಪಂಚಾಯತ್ ಮಲಗಾಣದ ಮೂಲಕ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಲಾಖಾ ಸಿಬ್ಬಂದಿ, ಸಾರ್ವಜನಿಕರು ಮತ್ತು ಸ್ವಯಂಸೇವಕರನ್ನು ಅಧಿಕೃತ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಲಾಯಿತು. ಕೊನೆಯಲ್ಲಿ ಸೈಕಲ್ ಜಾತಕೆ ಆಗಮಿಸಿದ ಸಾರ್ವಜನಿಕರನ್ನ ಸ್ವಯಂಸೇವಕರನ್ನ ಹಾಗೂ ಶಾಲಾ-ಕಾಲೇಜು ಮುಖ್ಯಸ್ಥರನ್ನು ಅಭಿನಂದಿಸಲಾಯಿತು.