Home ಜಿಲ್ಲೆ ಅನ್ನಪ್ರಸಾದ ಸೇವೆ

ಅನ್ನಪ್ರಸಾದ ಸೇವೆ

ಲಕ್ಷೆ÷್ಮÃಶ್ವರ,ಅ೧೫: ತಾಲೂಕಿನ ಗೊಜನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾ ನವಮಿಯ ಪ್ರಯುಕ್ತ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ನಂತರ ಅನ್ನಪ್ರಸಾದ ಸೇವೆ ಜರುಗುತ್ತದೆ.


ವಿಶೇಷವೆಂದರೆ ಈ ಗ್ರಾಮದ ಅಜುಮನ್ ಎ ಇಸ್ಲಾಂ ಸಮಿತಿಯ ಸರ್ವ ಸದಸ್ಯರು ಮುಸ್ಲಿಂ ಸಮಾಜ ಬಾಂಧವರು ಒಂದು ದಿನದ ಅನ್ನಪ್ರಸಾದ ಸೇವೆಯನ್ನು ಸಲ್ಲಿಸುತ್ತಾರೆ.
ಹಿಂದೂ ಮುಸ್ಲಿಂ ಭಾವೈಕ್ಯತೆಯ ಈ ದಸರಾ ಬಹುತೇಕ ವಿಶೇಷವೆಂದೆ ಹೇಳಬೇಕು ಕಳೆದ ನಾಲ್ಕು ವರ್ಷಗಳಿಂದಲೂ ಯಾವುದೇ ಸದ್ದಿಲ್ಲದೆ ಜಾತಿ ಮತ ಪಂಥ ಮೀರಿ ಗ್ರಾಮಸ್ಥರೆಲ್ಲರೂ ಸಹೋದರತೆ ಸಹ ಬಾಳ್ವೆಯಿಂದ ಬದುಕುವುದಕ್ಕೆ ಇದೊಂದು ಉದಾಹರಣೆ.


ಅಂಜುಮನ್ ಎ ಇಸ್ಲಾಂ ಸಮಿತಿಯ ಬಾಬಾಜಾನ್ ದೊಡ್ಮನಿ, ದಾದಾಸಾಹೇಬ್ ದೊಡ್ಮನಿ, ಅಬ್ದುಲ್ ಸಾಬ್ ಆನಿ, ಮಾಬುಸಾಬ ಆನಿ, ರಸೂಲ್‌ಸಾಬ್ ಬೆಂತೂರು, ಕಾಶಿಮ್‌ಸಾಬ್ ಹತ್ತಿಕಟ್ಟಿಗೆ, ಹಜರೇಸಾಬ್ ಬಂದೇನವರ, ಅಲ್ಲಾಸಾಬ್ ಆನಿ, ಬಸನಗೌಡ ಪಾಟೀಲ, ಸುಭಾಷ್ ಕಮಾರ ನೀಲಪ್ಪಗೌಡ ಪಾಟೀಲ, ವಿನಾಯಕ ಗಾಳಿ, ಶಂಕರಗೌಡ ಪಾಟೀಲ್, ಮಹಾಂತಪ್ಪ ಕಲ್ಲೂರ್, ಮರಿಗೌಡ ಪಾಟೀಲ್ ಸೇರಿದಂತೆ ಹಿಂದೂ ಮುಸ್ಲಿಂ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳತ್ತಾರೆ.