
ಬೀದರ:ಜೂ.೬:ಗಿಡವೊಂದು ಮನುಷ್ಯನಿಗೆ ಸದಾ ಹೀಗೆ ಹೇಳುತ್ತದೆ, ಮೂರು ವರ್ಷ ನನ್ನನ್ನು ಬೆಳೆಸು ನಾನು ನಿನ್ನನ್ನು ನೂರು ವರ್ಷ ಬೆಳೆಸುತ್ತೇನೆ. ನಾವೆಲ್ಲರೂ ಒಂದೊAದು ಮರವನ್ನ ೩ ವರ್ಷ ನೋಡಿಕೊಂಡರೆ ಅದು ನಮ್ಮನ್ನು ನೂರು ವರ್ಷದವರೆಗೆ ಕಾಪಾಡುವುದಲ್ಲದೆ ಶುದ್ಧ ಗಾಳಿಯನ್ನು ನೀಡುತ್ತದೆ ಎಂದು ಬಸವಕಲ್ಯಾಣ ಪ್ರಿನ್ಸಿಪಲ್ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀ ಹನುಮಂತ ರಾವ್ ಕುಲಕರ್ಣಿ ಎಂದು ಹೇಳಿದರು.
ಬಸವಕಲ್ಯಾಣ ತಾಲೂಕಿನ ಜವಾಹರ್ ನವೋದಯ ವಿದ್ಯಾಲಯ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕ ವಕೀಲರ ಸಂಘ ಬಸವಕಲ್ಯಾಣ, ವಲಯ ಅರಣ್ಯ ಅಧಿಕಾರಿಗಳ ಕಾರ್ಯಾಲಯ ಬಸವಕಲ್ಯಾಣ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಿಡವೊಂದನ್ನು ನೆಟ್ಟು ಮಕ್ಕಳಿಗೆ ಈ ಮೇಲಿನಂತೆ ತಿಳಿಸಿದರು.
ಮುಂದುವರೆದ ಮಾತನಾಡುತ್ತಾ ಅವರು ವಿಶ್ವ ಪರಿಸರ ದಿನಾಚರಣೆಯು ೧೯೭೨ ರಿಂದ ವಿಶ್ವಸಂಸ್ಥೆಯು ಒಂದು ನಿರ್ಧಾರವನ್ನು ಪ್ರಕಟಿಸಿ ಇನ್ನು ಮುಂದೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆಯನ್ನಾಗಿ ಆಚರಿಸಬೇಕು. ಮರಗಳನ್ನು ಬೆಳೆಸಿ ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡಬೇಕು ಎಂಬ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆ ಆರಂಭಗೊAಡಿತು ಎಂದು ಸವಿಸ್ತಾರವಾಗಿ ಮಕ್ಕಳಿಗೆ ತಿಳಿಹೇಳಿದರು.
ಇನ್ನೋರ್ವ ಅತಿಥಿಗಳಾದ ಗೌರವಾನ್ವಿತ ನ್ಯಾಯಾಧೀಶರು ಶ್ರೀ ಜ್ಞಾನೇಶ್ವರ ವಿಠಲ್ ಮಾಳಗಿ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ತಮ್ಮ ತಮ್ಮ ಹೆಸರಿನಲ್ಲಿ ಗಿಡವನ್ನು ನೆಟ್ಟು ಕಾಪಾಡಿ, ಪರಿಸರಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಡಬೇಕೆಂದು ಕರೆಕೊಟ್ಟರು.
ಬಾಲಾಜಿ ಆದೆಪ್ಪ ಸರ್ಕಾರಿ ಅಭಿಯೋಜಕರು ಬಸವಕಲ್ಯಾಣ ಇವರು ಮಾತನಾಡುತ್ತಾ ಪರಿಸರ ಕಾಳಜಿಯನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂಬ ಕಿವಿಮಾತು ವಿದ್ಯಾರ್ಥಿಗಳಿಗೆ ಹೇಳಿದರು.
ಶ್ರೀ ಪ್ರೇಮ್ ಶೇಖರ್ ವಲಯ ಅರಣ್ಯ ಅಧಿಕಾರಿಗಳು ಸಾಮಾಜಿಕ ವಲಯ ಬಸವಕಲ್ಯಾಣ ಇವರು ಮಾತನಾಡಿ ವಿಶ್ವದಲ್ಲಿ ಅರಣ್ಯ ನಾಶವಾಗುತ್ತಿದೆ ಪರಿಸರ ಹಾಳಾಗುತ್ತಿದೆ ಪ್ರತಿಯೊಬ್ಬ ವ್ಯಕ್ತಿ ಕೈಜೋಡಿಸಿದರೆ ಅದರ ಸಂರಕ್ಷಣೆ ಸಾಧ್ಯವಿದೆ. ಪ್ರತಿ ವರ್ಷ ಪರಿಸರ ಸಂರಕ್ಷಣೆಯ ಘನೊದ್ದೇಶವನ್ನು ಗಿಡ ನೆಡುವುದರ ಮೂಲಕ ಅದನ್ನು ನೆರವೇರಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.ಅಧ್ಯಕ್ಷತೆ ವಹಿಸಿರತಕ್ಕಂಥ ವಿದ್ಯಾಲಯದ ಪ್ರಾಚಾರ್ಯರಾದ ನಾಗರಾಜನ್ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಹಿರಿಯ ನ್ಯಾಯಾಧೀಶರು ಪ್ರಾಚಾರ್ಯರಿಗೆ ಸಸಿ ಒಂದನ್ನು ವಿತರಿಸುವದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಬಂದಿರುವ ಎಲ್ಲಾ ತಿಥಿಗಳಿಗೆ ನ್ಯಾಯಾಧೀಶರು ಒಂದೊAದು ಸಸಿ ನೀಡಿ ಇದನ್ನು ಬೆಳೆಸುವಂತೆ ಕರೆ ಕೊಟ್ಟರು.
ಶ್ರೀ ಶಿವಕುಮಾರ್ ವಲಯ ಅರಣ್ಯ ಇಲಾಖೆ ಬಸವಕಲ್ಯಾಣ ಇವರುಗಳ ವಿಶೇಷ ಕಾಳಜಿ ವಹಿಸಿ ವಿದ್ಯಾಲಯಕ್ಕೆ ಉಚಿತವಾಗಿ ಸಸಿಗಳನ್ನು ವಿತರಿಸುವುದಲ್ಲದೆ , ತಮ್ಮ ಸಿಬ್ಬಂದಿಯೊಡನೆ ವಿದ್ಯಾಲಯಕ್ಕೆ ಬಂದು ತಾವೇ ಸ್ವತಃ ಗಿಡ ನೆಡುವ ವ್ಯವಸ್ಥೆಯನ್ನು ನೋಡಿಕೊಂಡರು.
ಕಾರ್ಯಕ್ರಮದಲ್ಲಿ ರೇಣುಕಾ ಮಠಪತಿ ಉಪಾಧ್ಯಕ್ಷರು ವಕೀಲರ ಸಂಘ, ಜಗದೇವಿ ಚೊಂಡೆ ಸಹಾಯಕ ಅಭಿಯೋಜಕರು ಬಸವಕಲ್ಯಾಣ ಪ್ರೇಮ್ ಶೇಖರ್ ವಲಯ ಅರಣ್ಯ ಅಧಿಕಾರಿಗಳು ಸಾಮಾಜಿಕ ವಲಯ ಬಸವಕಲ್ಯಾಣ. ವಿದ್ಯಾಲಯದ ಉಪನ್ಯಾಸಕರಾದ, ಲಕ್ಷ್ಮಿಕಾಂತ್ ದುದ್ದಣಿಗಿ, ಕೆ ರಾಜೇಶಂ, ಪಿ.ಡಿ.ಶಹಾ, ಮದನ್ ಲಾಮತುರೆ, ಬಾಲಾಜಿ, ಅಲ್ಕಾದೇವಿ, ಸತೀಶ್ ಕುಮಾರ್ ಸ್ವಾಮಿ, ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಶ್ರೀ ಲಕ್ಷ್ಮಿಕಾಂತ್ ಮಾಡಿದರೆ ನಿರೂಪಣೆ ಧರ್ಮಣ್ಣ ಚಿಟ್ಟಾ, ಮದನ್ ಲಾಮತುರೆ ವಂದಿಸಿದರು.

























