
ಕಲಬುರಗಿ,ಆ 21: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣಾ ವಿಭಾಗದ ವತಿಯಿಂದ ‘ನವರಂಗ 2026 – 17ನೇ ಎಂ.ಬಿ.ಎ ಬ್ಯಾಚ್‍ನ ಸ್ವಾಗತ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಪಯಣಕ್ಕೆ ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಪ್ರಧಾನಿಯವರ ಆಶಯದಂತೆ ವಿಕಸಿತ ಭಾರತ@2047 ಸಾಕಾರಗೊಳಿಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಜೀವನಪಯರ್ಂತ ಕಲಿಕೆಯ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಗೆ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಹಾಗೂ ನಿರಂತರವಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಓರಿಯಂಟ್ ಸಿಮೆಂಟ್ ಲಿಮಿಟೆಡ್ (ಅದಾನಿ ಸಿಮೆಂಟ್)ನ ಜನರಲ್ ಮ್ಯಾನೇಜರ್‍ಪೆÇ್ರಕ್ಯೂರ್‍ಮೆಂಟ್ ರಾಜಶೇಖರ ಎಸ್. ಸರಸಂಬಿ ಅವರು ಮಾತನಾಡಿ, ಪಠ್ಯಾಧಾರಿತ ಶಿಕ್ಷಣದ ಜೊತೆಗೆ ಸಂಶೋಧನೆ, ನಾವೀನ್ಯತೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ ಮತ್ತು ಮೌಲ್ಯ ಸೃಷ್ಟಿಸುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಮಾಹಿತಿ ಮತ್ತು ತಂತ್ರಜ್ಞಾನವನ್ನು ವಿವೇಕಯುತವಾಗಿ, ಜವಾಬ್ದಾರಿಯುತವಾಗಿ ಬಳಸಬೇಕು ಹಾಗೂ ಜೀವನದಲ್ಲಿ ಎದುರಾಗುವ ವೈಫಲ್ಯಗಳನ್ನು ಯಶಸ್ಸಿನ ಪಾಠವನ್ನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪೆÇ್ರ. ಪಾಂಡುರಂಗ ವಿ. ಪತ್ತಿ, ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥ ಪೆÇ್ರ.ಎ.ಎನ್. ವಿಜಯಕುಮಾರ್, ಕಾರ್ಯಕ್ರಮ ಸಂಯೋಜಕರಾದ ಡಾ. ಶಿವಕುಮಾರ ಎಂ. ಬೆಳ್ಳಿ, ಪ್ರಾಧ್ಯಾಪಕರಾದ ಪೆÇ್ರ. ಮೊಹಮ್ಮದ್ ಜೊಹೇರ್, ಡಾ. ಸಫಿಯಾ ಪರ್ವಿನ್, ಡಾ. ನಿರಂಜನ ಪೂಜಾರ್, ಡಾ.ಜೈಪಾಲ ರಾಠೋಡ, ಡಾ.ಬಿ.ವಾಣಿ, ಡಾ.ಶ್ರೀಲಕ್ಷ್ಮೀ ಸೇರಿದಂತೆ ಬೋಧಕ ಸಿಬ್ಬಂದಿ ಮತು ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದದಲ್ಲಿ ವಿಶೇಷವಾಗಿ ಎಂಬಿಎ ಮತತು ಬಿಬಿಎ ವಿದ್ಯಾರ್ಥಿಗಳು ‘ಕಿಸ್ ತರಫ್? ಎ ಟೇಲ್ ಆಫ್ ಟು ಪಾಥ್ಸ್’ ನಾಟಕವನ್ನು ಪ್ರದರ್ಶಿಸಿದರು. ಕಠೋಪನಿಷತ್ತಿನ ಪರಿಕಲ್ಪನೆಯನ್ನು ಆಧರಿಸಿದ ಈ ನಾಟಕವನ್ನು ವಿಭಾಗದ ಪ್ರಾಧ್ಯಾಪಕರಾದ ಡಾ. ಶಿವಕುಮಾರ ಎಂ. ಬೆಳ್ಳಿ ಅವರು ರಚಿಸಿ ನಿರ್ದೇಶಿಸಿದ್ದರು. ಕಾರ್ಯಕ್ರಮವು ವಂದೇ ಮಾತರಂ ಗಾಯನದೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.






























