Home ಜಿಲ್ಲೆ ರಾಷ್ಟಿçÃಯ ಶಿಕ್ಷಣ ದಿನಾಚರಣೆ

ರಾಷ್ಟಿçÃಯ ಶಿಕ್ಷಣ ದಿನಾಚರಣೆ

ನವಲಗುಂದ, ನ೧೨: ಭಾರತ ದೇಶದ ಮೊದಲ ಶಿಕ್ಷಣ ಸಚಿವರಾದ ಭಾರತರತ್ನ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಲಗುಂದದಲ್ಲಿ ರಾಷ್ಟಿçÃಯ ಶಿಕ್ಷಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವಲಗುಂದದ ಐಕ್ಯೂಎಸಿ, ಸಾಂಸ್ಕöÈತಿಕ ವಿಭಾಗ, ರಾಷ್ಟಿçÃಯ ಸೇವಾ ಯೋಜನೆ (ಓSS) ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ. ಸಂತೋಷ ಹುಬ್ಬಳ್ಳಿ ಅವರು ಮಾತನಾಡಿ, ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶದ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ನೀಡಿದ ಕೊಡುಗೆ, ಶಿಕ್ಷಣದ ಸಾರ್ವತ್ರಿಕೀಕರಣ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಹಿಸಿದ ಪಾತ್ರವನ್ನು ಸ್ಮರಿಸಿದರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಬದಲಾಗಿ ವ್ಯಕ್ತಿತ್ವ ವಿಕಸನ, ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟç ನಿರ್ಮಾಣದ ಪ್ರಮುಖ ಸಾಧನವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಬಿ. ಬಾಗಡಿ ಅವರು ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದ್ದು, ಸಮಾಜದಲ್ಲಿ ಸಮಾನತೆ, ಸಹೋದರತೆ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ. ಮೌಲಾನಾ ಆಜಾದ್ ಅವರ ಶೈಕ್ಷಣಿಕ ಚಿಂತನೆಗಳು ಇಂದಿನ ಯುವಜನತೆಗೆ ದಾರಿದೀಪವಾಗಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು, ಶಿಸ್ತು, ಜವಾಬ್ದಾರಿ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜೀವನ, ಸ್ವಾತಂತ್ರ÷್ಯ ಹೋರಾಟದಲ್ಲಿನ ಕೊಡುಗೆ ಹಾಗೂ ಸ್ವತಂತ್ರ ಭಾರತದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅವರು ಹಾಕಿಕೊಟ್ಟ ಭದ್ರ ಬುನಾದಿಯನ್ನು ಸ್ಮರಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆಯನ್ನು ಮಂಜುನಾಥ ಶಿರಗುಪ್ಪಿ ಅವರು ನಿರ್ವಹಿಸಿದರು. ವೀರಣ್ಣ ಬ್ಯಾಳಿ ಅವರು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರೊ ಆಯ್ ಬಿ ಸಾತಿಹಾಳ, ಡಾ ವಾದಿರಾಜ ಇನಾಮಾದಾರ, ಗಣೇಶ್ ಧೋoಗಡಿ,ಗಂಗಾಧರ ಗೌಡರ, ಡಾ ನಾಗರತ್ನ ಕುರಡೇಕರ, ಶ್ರೀಧರ ಲೋನಕರ, ಸಮೀರ ನಧಾಪ, ಪ್ರತಿಭಾ ನಿಡಗುಂದಿ, ಡಾ ಗುಲಗಂಧಿ, ಶ್ರೀನಿವಾಸ ಹರ್ಲಾಪುರ, ಡಾ ಗುಡ್ಡಪ್ಪ ಹೊಂಕಣ, ನಿಂಗಪ್ಪ ವಂಕನ್ನವರ, ರವಿ ಬ್ಯಾಹಟ್ಟಿ,ಡಾ ಸುರಳಿಕೇರಿ, ಮಂಜುನಾಥ ಮಂಗೋಣಿ, ಜೋತಿಭಾ ದೊಡಮನಿ, ರಮೇಶ್ ಚವ್ಹಾಣ, ರಾಚನಗೌಡ ಚಿನ್ನಪ್ಪಗೌಡರ, ಕಾವ್ಯ ಎಸ್ ಎನ್, ರೇಣುಕಾ ಬಾಜಿರಾಹುತ ಮುಂತಾದ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.