Home ಜಿಲ್ಲೆ ಬೆಂಗಳೂರು ನಮೋ-ಬಿ.ಎಸ್.ವೈ ಕ್ರಿಕೆಟ್ ಕಪ್ ಅಯೋಜನೆ

ನಮೋ-ಬಿ.ಎಸ್.ವೈ ಕ್ರಿಕೆಟ್ ಕಪ್ ಅಯೋಜನೆ

filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 138.07399;aec_lux_index: 0;albedo: ;confidence: ;motionLevel: 0;weatherinfo: null;temperature: 42;

ಭಾಗ್ಯನಗರ,ಜೂ೨೯: ಪ್ರಧಾನಿ ನರೇಂದ್ರ ಮೋದಿ ದೇಶದ ಸುಧೀರ್ಘ ಪ್ರಧಾನ ಮಂತ್ರಿಯಾಗಿ ಹಾಗೂ ಬಿ.ಎಸ್.ಯಡಿಯೂರಪ್ಪ ರಾಜಕೀಯ ಪಯಣ ೫೦ ವರ್ಷ ಪೂರೈಸಿದ ಪ್ರಯುಕ್ತ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಟೆನ್ನೀಸ್ ಬಾಲ್ ಕ್ರಿಕೆಟ್ ಟೂರ್ನಿ ನಮೋ ಬಿ.ಎಸ್.ವೈ ಕ್ರಿಕೆಟ್ ಕಪ್-೨೦೨೬ನ್ನು ಅಯೋಜನೆ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲ್ಲೂಕುಗಳ ೩೩ ಪಂಚಾಯಿತಿಗಳಲ್ಲಿ ನಮೋ ಬಿಎಸ್.ವೈ ಕ್ರಿಕೆಟ್ ಕಪ್ ಹೆಸರಿನಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರಿಕೆಟ್ ಟೂರ್ನಿ ಆಯೋಜನ ಮಾಡಲಾಗಿದೆ. ಇದರ ಸದುಪಯೋಗವನ್ನು ಯುವಕರ ಪಡೆದು ಬಾಗೇಪಲ್ಲಿ ವಿಧಾನ ಸಭಾಕ್ಷೇತ್ರಕ್ಕೆ ಒಳ್ಳೆಯ ಹೆಸರನ್ನು ತರಬೇಕು ಎಂದು ಕರೆ ನೀಡಿದರು.


ಕ್ಷೇತ್ರದ ೩೩ ಪಂಚಾಯಿತಿ ಮಟ್ಟದ ಟೂರ್ನಿಯನ್ನು ಆಯೋಜಿಸಿ ಆ ಪಂಚಾಯಿತಿ ವಿಜೇತರಾದವರಿಗೆ ನಗದು ಬಹುಮಾನ ಅಂದರೇ ಮೊದನೇ ಬಹುಮಾನ ೧೫೦೦೦ ಎರಡನೇ ಬಹುಮಾನ ೧೦೦೦೦ ಮೂರನೇ ಬಹುಮಾನ ೫೦೦೦ ನೀಡಲಾಗುವುದು. ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಗೆದ್ದ ೩ ತಂಡಗಳಿಗೆ ಟಿ- ಶರ್ಟ್,ಟ್ರೋಪಿ ಮತ್ತು ಕ್ರಿಕೆಟ್ ಕಿಟ್ ನೀಡಲಾಗುವುದು. ಬಾಗೇಪಲ್ಲಿ ವಿಧಾನ ಸಭಾಕ್ಷೇತ್ರ ೩೩ ಪಂಚಾಯಿತಿಗಳಿಂದ ಗೆದ್ದ ತಂಡಗಳಿಗೆ ಬಾಗೇಪಲ್ಲಿ ಯಲ್ಲಿ ನಡೆಯುವ ಮೆಗಾ ಟೂರ್ನಿಯಲ್ಲಿ ಆಡಲು ಅವಕಾಶ ನೀಡಲಾಗುವುದು.ಈ ಮೆಗಾ ಟೂರ್ನಿಯಲ್ಲಿ ಮೊದಲನೇ ಬಹುಮಾನ ೨ ಲಕ್ಷ, ಎರಡನೇ ಬಹುಮಾನ ೧೫೦೦೦೦ ಲಕ್ಷ ಮೂರನೇ ಬಹುಮಾನ ೧ ಲಕ್ಷ, ನಾಲ್ಕನೇ ಬಹುಮಾನ ೫೦ ಸಾವಿರ ರೂಪಾಯಿ ನಗದು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ಮಂಡಲ ಅಧ್ಯಕ್ಷ ಆರ್. ಪ್ರತಾಪ್, ಗುಡಿಬಂಡೆ

ಮಂಡಲ ಅಧ್ಯಕ್ಷ ಗಂಗರೆಡ್ಡಿ, ಲೋಕೇಶ್, ವೆಂಕಟೇಶ್, ದೇವರಾಜ್, ಚಿಕ್ಕಪೂಜಪ್ಪ, ಶ್ರೀ ನಿವಾಸ್ ಮತ್ತಿತರರು ಹಾಜರಿದ್ದರು.