
ಮಧುಗಿರಿ, ಜೂ. ೬- ರಾಜರ ಸಾಧನೆ ಜನಮುಖಿಯಾಗಿದ್ದರೆ ಅವರ ಕಾರ್ಯಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ ಎಂದು ಹಿರಿಯ ಸಾಹಿತಿ ಪ್ರೊ ಮ.ಲ.ನ ಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಸಹೃದಯಬಳಗ ಟಿ.ವಿ.ವಿ ಬಿ.ಎಡ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೀಸಲಾತಿಯ ಜನಕ, ರಾಜರ್ಷಿ, ನಾಲ್ವಡಿ ಕೃಷ್ಣರಾಜ ಒಡೆಯರ ೧೪೨ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾಲ್ವಡಿಕೃಷ್ಣರಾಜ ಒಡೆಯರವರ ಕೊಡುಗೆ ಅಪಾರ, ಅನನ್ಶ, ಅವರು ಮೈಸೂರು ವಿಶ್ವವಿದ್ಶಾನಿಲಯ ತೆರೆದು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಮೈಸೂರು ಸ್ಶಾಂಡಲ್ ಫ್ಶಾಕ್ಚರಿ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೃಷ್ಣರಾಜ ಸಾಗರ ಜಲಾಶಯ, ಕೃಷಿಗೆ ವಿದ್ಶುತ್ ಉತ್ಪಾದನೆ, ಜನಪ್ರತಿನಿಧಿ ಸಭೆ, ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಶಕ್ಕೆ ಅಪಾರ ಪ್ರೋತ್ಸಾಹ ,ಕನ್ನಡ ಸಾಹಿತ್ಶ ಪರಿಷತ್, ಭಾರತೀಯ ವಿಜ್ಞಾನ ಸಂಸ್ಥೆ ,ಬಾಲ್ಶವಿವಾಹ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ ಮುಂತಾದುವುಗಳನ್ನು ಮರೆತವರುಂಟೆ ಎಂದರು.
ಗ್ರಂಥಪಾಲಕ ಜಿ.ಎಸ್. ನಾಗಭೂಷಣ ಮಾತನಾಡಿ, ಅವರ ದೂರದೃಷ್ಟಿಯ ಫಲ ಇಂದು ಕರ್ನಾಟಕ ಏಳ್ಗೆಗೆ ಬುನಾದಿಯಾಗಿದೆ. ಬೀದಿ ದೀಪ ಬೆಳಗಿಸಿ ಅದ್ಭುತ ಸಾಧನೆ ಮಾಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹೃದಯ ಬಳಗದ ಸದಸ್ಶರಾದ ಶಾಜಿಯಾಭಾನು, ಮೆಹಬೂಬ್ ಪಾಷಾ ಒಡೆಯರ ಆಡಳಿತ ಶೈಲಿಯನ್ನು ನೆನಪಿಸಿ ಮೆಚ್ಚುಗೆ ಸೂಚಿಸಿದರು.
ವಿದ್ಶಾರ್ಥಿಗಳಾದ ಮುತ್ತುರಾಜ, ನಾಗರಾಜಯ್ಶ, ಜಗದೀಶ್, ಭೀಮರಾಜ, ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದ ಬಗ್ಗೆ ಸಂವಾದ ನಡೆಸಿದರು.
ರಾಜೇಶ್, ಪ್ರವೀಣ್ ಕುಮಾರ್ ಪ್ರಾರ್ಥಿಸಿದರು. ವಿರೂಪಾಕ್ಷಿ ಸ್ವಾಗತಿಸಿದರು. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ನಾಗರಾಜಯ್ಯ ವಂದಿಸಿದರು.


































