
ಕಲಬುರಗಿ,ಜೂ 12: ನಗರದ ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ನಲ್ಸಾ -ಸ್ಪøಹಾ 2025ನ ಯೋಜನೆ ಯ ಅನುಷ್ಠಾನ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿಯ ಸದಸ್ಯ ಹಿರಿಯ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಯೋಜನೆ ಅನುಷ್ಠಾನ ಕುರಿತು ಮಾತನಾಡುತ್ತಾ, ಬಂದಿಗಳ ಅವಲಂಬಿತ ಕುಟುಂಬ ಸದಸ್ಯರಿಗೆ ಬಂದಿಗಳು ಕಾರಾಗೃಹಕ್ಕೆ ದಾಖಲಾದ ನಂತರ ಅವರ ಮಕ್ಕಳ ಶಿಕ್ಷಣ, ಉದ್ಯೋಗ, ಕೌಶಲ್ಯ ತರಬೇತಿ ವೈದ್ಯಕೀಯ ಚಿಕಿತ್ಸೆ ಇತ್ಯಾಧಿ ಅವಶ್ಯಕತೆಗಳ ಕೊರತೆಯಾಗದಂತೆ ಹಾಗೂ ಬಂದಿಗಳು ಬಿಡುಗಡೆಯಾದ ನಂತರ ಪುನಃ ಅಪರಾಧ ಚಟುವಟಿಕೆಗಳಲ್ಲಿ ತೊಡಗದೇ ಇರುವುದನ್ನು ತಡೆಯುವ ಹಿತದೃಷ್ಟಿಯಿಂದ ಸ್ಫ್ರೂಹ 2025 ಯೋಜನೆಯು ಅನುಷ್ಠಾನಕ್ಕೆ ತರಲಾಗಿದೆ ಈ ಯೋಜನೆಯು ಮುಂಚೆ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಮತ್ತು ಯೋಜನೆಯನ್ನು ನೀಡಲಾಗುತ್ತಿತ್ತು. ಆದರೆ ಈಗ ಈ ಯೋಜನೆಯ ಅಡಿಯಲ್ಲಿ ಅಪರಾಧ ಮಾಡಿ ಕಾರಾಗೃಹದಲ್ಲಿ ದಾಖಲಾದ ಬಂದಿಗೆ ಕುಟುಂಬದ ಹೊಣೆಗಾರಿಕೆ ಆತನ ಮೇಲೆ ಅವಲಂಭಿತವಾಗಿರುತ್ತದೆ. ಆದರೆ ಆತನು ಕಾರಾಗೃಹದಲ್ಲಿ ದಾಖಲಾಗಿರುವುದರಿಂದ ಕುಟುಂಬದ ಸದಸ್ಯರ ಜೀವನ ನಡೆಸುವುದಕ್ಕೆ ಕಷ್ಟಕರವಾಗಿರುತ್ತದೆ. ಹಾಗಾಗಿ ಈ ಯೋಜನೆಯ ಅಡಿಯಲ್ಲಿ ಅಂತಹ ಕುಟುಂಬ ಸದಸ್ಯರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದೆ. ಅಲ್ಲದೇ ಕಾರಾಗೃಹದ ಹೊರಗಡೆ ಈ ಮುಲಖಾತ್ ಕೂಡ ಸ್ಥಾಪಿಸಲಾಗಿದ್ದು, ನಿಮ್ಮ ಕುಟುಂಬ ಸದಸ್ಯರು ಸಮಸ್ಯೆಯನ್ನು ತಿಳಿಸಿದ್ದಲ್ಲಿ ತೊರಿತವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸಂಸ್ಥೆಯ ಮುಖ್ಯಸ್ಥ ರಾಕೇಶ್ ಕಾಂಬಳೆ ರವರು ಮಾತನಾಡುತ್ತಾ, ಈ ಯೋಜನೆಯು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಸಂಬಂಧಿಸಿದ ಬಂದಿಗಳಿಂದ ಮಾಹಿತಿಯನ್ನು ಕಲೆ ಹಾಕಿ ಅನುಬಂಧ-ಎ ಅಡಿಯಲ್ಲ ಭರ್ತಿ ಮಾಡಿ ಶೀಘ್ರದಲ್ಲಿ ಪ್ರಾಧಿಕಾರಕ್ಕೆ ಒಪ್ಪಿಸಲಾಗುವುದು ಹಾಗೂ ಈ ಯೋಜನೆಯು ಅನುಷ್ಠಾನಗೊಳ್ಳಲು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಜೈಲರ್ ಶ್ರೀಮಂತಗೌಡ ಪಾಟೀಲ್, ಹಾಗೂ ಎಲ್ಲಾ ಅಧಿಕಾರಿ,ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶಿಕ್ಷಕ ನಾಗರಾಜ ಮುಲಗೆ ನಡೆಸಿಕೊಟ್ಟರು.






















