
ಕಲಬುರಗಿ,ಜೂ.9-ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೇಳಕುಂದಾ (ಬಿ), ಮೇಳಕುಂದಾ (ಕೆ), ಮಳನಿ, ಕಣ್ಣಿ, ಉದನೂರ್ ಸೇರಿದಂತೆ ಹಲವು ಗ್ರಾಮೀಣ ಸಂಪರ್ಕ ರಸ್ತೆ ಕಾಮಗಾರಿಗಳನ್ನು 12 ಕೋಟಿ ರು ಅನುದಾನದಲ್ಲಿ ಕೈಗೆತ್ತಿಕೊಂಡು ಹಳ್ಳಿ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಸೋಮವಾರ ಮೇಳಕುಂದಾ ಬಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಭವನ, ಅಂಬೇಡ್ಕರ್ ಸಮದಾಯ ಭವನಗಳಿಗೆ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೇಳಕುಂದಾ ಹಾಗೂ ಸುತ್ತಿಲನ ಗಾಮಗಳಲ್ಲಿ ಮೂಲ ಸವಲತ್ತು ನಿರ್ಮಾಣಕ್ಕೆ ತಾವು ಬದ್ಧ ಎಂದರಲ್ಲದೆ ಈಗಾಗಲೇ ಮೇಳಕುಂದಾ- ಭೈರಾಮಡಗಿ, ರಸ್ತೆಗೆ 2 ಕೋಟಿ ರು, ಕೆಕಆರ್‍ಡಿಬಿ ಅಡಿಯಲ್ಲಿ ಸಂಪರ್ಕ ರಸ್ತೆಗೆ 35 ಲಕ್ಷ ರು, ಸಣ್ಣ ನೀರಾವರಿ ಚೆಕ್ ಡ್ಯಾಂಗೆ 1 ಕೋಟಿ ರು, ಮೇಳಕಿಂದಾ ಕೆ- ಮೇಳಕುಂದಾ ಬಿರಸ್ತೆ ಕಾಮಗಾರಿಗೆ 1 ಕೋಟಿರು,ಕಳವೆ ಬಾವಿಗಳು, ಹೈ ಮಾಸ್ಕ್ ದೀಪಗಳು, ಕನಕ ಭವನಕ್ಕೆ 20 ಲಕ್ಷ ರು, ಅಂಬಿಗರ ಚೌಡಯ್ಯ ಭವನಕ್ಕೆ 35 ಲಕ್ಷ ರು, ಅಂಬೇಡ್ಕರ್ ಸಮುದಾಯ ಭವನದ ಆವರಣ ಗೋಡೆ ಇತರೆ ಕೆಲಸಗಳಿಗೆ 40 ಲಕ್ಷ ರು ಅನುದಾನ ನೀಡಲಾಗಿದೆ ಎಂದು ಶಾಸಕ ಅಲ್ಲಂಪ್ರಭು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆಯವರ ಚಿಂತನೆಯ ಫಲವಾಗಿ ಕಲ್ಯಾಣ ಪಥ, ಪ್ರಗತಿ ಪಥದಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ 4 ಕಿ.ಮೀ. ರಸ್ತೆ ಅಭಿವೃದ್ಧಿ ಸಾಗಿದೆ. ಮೇಳಕುಂದಾ- ಗುಡೂರ್ ಪ್ರಗತಿ ಪಥದಲ್ಲಿ ಅಭಿವೃದ್ಧಿಯಾಗುತ್ತಿದೆ. ಸಾವಳಗಿ, ಕಮ್ಣಿ, ಉದನೂರ್ ಇಲ್ಲೆಲ್ಲಾ ಪ್ರಗತಿಗೆ ಒತ್ತು ನೀಡಲಾಗಿದೆ ಎಂದರು.
ನೀವು ಮತ ಕೊಟ್ಟು ಆರಿಸಿ ಕಳುಹಿಸಿದದೀರಿ, ನಿಮ್ಮ ಕೆಲಸ ಮಾಡಲು ನಾನು ಸಿದ್ಧನೆಂದು ಇದೇ ವೇಳೆ ಹೇಳಿದ ಶಾಸಕರು, ಅಭಿವೃದ್ಧಿ ಕೆಲಸಗಳಿಗೆ ಅಡೆತಡೆ ಮಾಡದೆ ಸಹಕರಿಸಲು ಕೋರಿದರು.
ಕಾಮಗಾರಿಗಳನನ್ನು ಮಾಡುವಾಗ ಕೆಲವು ಸಮಸ್ಯೆಗಳು ಬಂದರೂ ಕೂಡಾ ಊರವರೆಲ್ಲರೂ ಸೇರಿಕೊಂಡು ಬಗೆಹರಿಸಿಕೊಂಡು ಅಭಿವೃದ್ಧಿ ಯೋಜನೆಗಳ ಮೇಲೆ ಜನ ಕಣ್ಣಿಡಬೇಕು. ಗುಣಣಟ್ಟದ ಕೆಲಸಗಳನ್ನು ತಮ್ಮೂರಲ್ಲಿ ಆಗುವಂತೆ ನೋಡಿಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮರಾಯಗೌಡ ಕೊಳ್ಳೂರ, ಲಿಂಗರಾಜ ಕಣ್ಣಿ,ಶರಣು, ಮಹಾದೇವಪ್ಪ, ಶಾಂತಕುಮಾರ್ ಸೇರಿದಂತೆ ಗ್ರಾಮದ ಮುಖಂಡರು, ಸುತ್ತಲಿನ ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

























