
ಬೀದರ್: ಎಂ.ಡಿ.ಅನಸ್ತೇಶಿಯಾ (ಅರಿವಳಿಕೆ) ಸ್ನಾತಕೋತ್ತರ ಪದವಿಯಲ್ಲಿ ಬೀದರ್ ಪ್ರತಿಭೆ ಡಾ.ರೇಣುಕಾ ರಮೇಶ ಕುಲಕರ್ಣಿ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ಇನ್ಸಿ ್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಕಿಮ್ಸ್) ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ನಡೆದ ಎಂಡಿ ಅನಸ್ತೇಶಿಯಾ ಪರೀಕ್ಷೆಯಲ್ಲಿ ಡಾ.ರೇಣುಕಾ ಶೇ.75.6 ಅಂಕಗಳೊಂದಿಗೆ ಅಗ್ರಶ್ರೇಣಿ ಪಡೆದು ಅರಿವಳಿಕೆ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿ ಪ್ರತಿಭೆ ಪ್ರದರ್ಶಿಸುವ ಮೂಲಕ ಬೀದರ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಡಾ.ರೇಣುಕಾ ಅಪ್ಪಟ ಪ್ರತಿಭಾನ್ವಿತ ವಿದ್ಯಾರ್ಥಿನಿ. ಬೀದರ್ನ ಮಾತಾ ಮಾಣಿಕೇಶ್ವರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ನೀಟ್ನಲ್ಲಿ ಸಾಧನೆ ಮಾಡಿ, ಬ್ರಿಮ್ಸ್ನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರು. ಬಳಿಕ ಪಿಜಿ ನೀಟ್ನಲ್ಲೂ ಉತ್ತಮ ರ್ಯಾಂಕ್ ಗಳಿಸಿ ಸರ್ಕಾರಿ ಕೋಟಾದಲ್ಲಿ ಕಿಮ್ಸ್ನಲ್ಲಿ ಎಂಡಿ ಅನಸ್ತೇಶಿಯಾ ಸೀಟು ಪಡೆದು, ಅಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಡಾ.ರೇಣುಕಾ ಇಲ್ಲಿನ ಶ್ರೀ ಮಾತಾ ಮಾಣಿಕೇಶ್ವರಿ ಪಿಯುಸಿ ಕಾಲೇಜಿನ ಅಧ್ಯಕ್ಷರಾದ ಈ ಭಾಗದ ಶೈಕ್ಷಣಿಕ ಚಿಂತಕ ರಮೇಶ ಕುಲಕರ್ಣಿ ಅವರ ಪುತ್ರಿಯಾಗಿದ್ದಾರೆ.
ಡಾ.ರೇಣುಕಾ ಸಾಧನೆ ಪಾಲಕರಿಗೆ ಎಲ್ಲಿಲ್ಲದ ಖುಷಿ ತಂದಿದೆ. ಅನಸ್ತೇಶಿಯಾ ಚಿಕಿತ್ಸೆ ವೈದ್ಯಕೀಯ ಕ್ಷೇತ್ರದಲ್ಲಿ ಬಲು ಮಹತ್ವದ ವಿಭಾಗಗಳಲ್ಲಿ ಒಂದಾಗಿದೆ. ಸರ್ಜರಿ ವೇಳೆ ಅನಸ್ತೇಶಿಯಾ ತಜ್ಞರ ಸೇವೆ ಮುಖ್ಯವಾಗಿರುತ್ತದೆ. ಈ ಕ್ಷೇತ್ರದಲ್ಲಿ ಮಗಳು ಇನ್ನಷ್ಟು ಸಾಧನೆ ಮಾಡಲಿ. ಈಕೆ ಸಾಧನೆ ಜಿಲ್ಲೆಯ ಡಾಕ್ಟರ್ ಕನಸು ಕಾಣುವ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಲಿ ಎಂದು ತಂದೆ ರಮೇಶ ಕುಲಕರ್ಣಿ, ತಾಯಿ ಆರತಿ ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ. ರಮೇಶ ಅವರ ಮಗ ಸಾಯಿಕಿರಣ ಹೈದರಾಬಾದ್ ಏಮ್ಸ್ನಲ್ಲಿ ಇತ್ತೀಚೆಗೆ ಎಂಬಿಬಿಎಸ್ ಮುಗಿಸಿ, ಇಂಟರ್ನ್ಶಿಪ್ ಮಾಡುತ್ತಿದ್ದಾರೆ. ನೀಟ್ನಲ್ಲಿ ಸಾಯಿಕಿರಣ ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಬಂದಿದ್ದರು.























