
ಕಲಬುರಗಿ,ಅ.21-ನಗರ ಹೊರವಲಯದ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬೌದ್ಧಧಮ್ಮ ಸ್ವೀಕರಿಸಿದ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಕಾರ್ಯಕ್ರಮದಲ್ಲಿ ಮಹೇಂದ್ರ ಫೌಂಡೇಶನ್ ವತಿಯಿಂದ ಪ್ರಕಾಶನಗೊಂಡ ವಿಜಯ ಕಾಂಬಳೆ ಬರೆದ ಬೌದ್ಧ ವಿಧಿ ಸಂಸ್ಕಾರ ಮತ್ತು ಮಾರ್ಗದರ್ಶಕ ಎಂಬ ಮರಾಠಿ ಭಾಷೆಯ ಪುಸ್ತಕವನ್ನು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ವಸಂತ್ ಕುಮಾರ್, ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪಾಟೀಲ್ ಹರವಾಳ, ಕೆಪಿಸಿಸಿ ಕಲಬುರಗಿ ಜಿಲ್ಲಾಧ್ಯಕ್ಷರಾದ ಡಾ. ಕಿರಣ್ ದೇಶಮುಖ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದ ಅರಳಿ, ಶಾಂತಪ್ಪ ಸೂರನ್, ಸಾಹಿತಿ ಡಾ.ನಟರಾಜ್ ಹುಳಿಯಾರ್,ಡಾ. ಚಂದ್ರಶೇಖರ್ ದೊಡ್ಡಮನಿ, ಅನಿಲಕುಮಾರ ಸುಗಂಧಿ ಮತ್ತು ಮಿಲಿಂದ್ ಗುರೂಜಿ ಮುಂತಾದವರು ಉಪಸ್ಥಿತರಿದ್ದರು






















