Home ಜಿಲ್ಲೆ ಕಲಬುರಗಿ ಕಸಾಪದಲ್ಲಿ ಮಹಿಳಾ ಪ್ರಾತಿನಿಧ್ಯ ದೊರೆಯಲಿ

ಕಸಾಪದಲ್ಲಿ ಮಹಿಳಾ ಪ್ರಾತಿನಿಧ್ಯ ದೊರೆಯಲಿ

ಕಲಬುರಗಿ,ಜೂ 2: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಇದ್ದು, ಧೈರ್ಯದಿಂದ ಮುನ್ನುಗ್ಗಿದಾಗ ಮಾತ್ರ ಶಕ್ತಿ ಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಬೇಕು ಎಂದು ಪೆÇ್ರ.ನೀಲಾಂಬಿಕಾ ಪೆÇಲೀಸ್ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‍ನಿಂದ ಏರ್ಪಡಿಸಿದ್ದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ, ಕವಿಗೋಷ್ಠಿ ಹಾಗೂ ಕಲಬುರಗಿ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ತನ್ನದೇ ಸ್ಥಾನ ಹೊಂದಿದ್ದು, ಕಸಾಪದಂತ ಸಂಸ್ಥೆಯಲ್ಲಿ ಅಧಿಕಾರ ದೊರಕಿದರೆ ಇನ್ನಷ್ಟು ಪ್ರಾಧಾನ್ಯತೆ ದೊರೆಯಲಿದೆ ಎಂದರು.
ಕದಳಿ ಸಿರಿ ಆಸ್ಪತ್ರೆ ವೈದ್ಯ ಡಾ.ಭಾಗ್ಯಶ್ರೀ ಪಾಟೀಲ್,ನಾಲ್ಕು ಚಕ್ರ ಟ್ರಸ್ಟ್ ಮುಖ್ಯಸ್ಥೆ ಮಾಲಾ ಕಣ್ಣಿ , ಲೇಖಕಿ ಡಾ. ಕಾವ್ಯಶ್ರೀ ಮಹಾಗಾಂವಕರ್,ಮಹಾನಗರ ಪಾಲಿಕೆ ಉಪ ಆಯುಕ್ತರಾದ ಪ್ರಮೀಳಾ ಎಮ್‍ಕೆ ಅವರು ಮಾತನಾಡಿದರು.
ಪಾಳಾದ ಗುರುಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ದಿಶಾ ಕಾಲೇಜಿನ ಅಧ್ಯಕ್ಷ ಶಿವಾನಂದ ಖಜೂರ್ಗಿ, ಪ್ರಮುಖರಾದ ರಮೇಶ ತಿಪನೂರ, ಉಮೇಶ ಶೆಟ್ಟಿ, ಶರಣು ಪಾಟೀಲ್ ಇತರರಿದ್ದರು. ಅಂಬುಜಾ ಎಂ.ಡಿ. ನಿರೂಪಣೆ ಮಾಡಿದರು.


ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರಿಗೆ ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಡಾ.ಸೀಮಾ ಪಾಟೀಲ್ (ಶಿಕ್ಷಣ), ರೇಣುಕಾ ಹೆಳವರ (ಪೆÇಲೀಸ್‍ಇಲಾಖೆ), ಮಂಜುಳಾ ಬಿರಾದಾರ (ಸಹಕಾರ ಕ್ಷೇತ್ರ), ಬಾಬುಮೀಯ ಪುಲಾರಿ (ಸಾಹಿತ್ಯ ಮತ್ತು ಸಂಟನೆ), ರವಿ ದೇಗಾಂವ (ಕನ್ನಡ ಪರ ಹೋರಾಟಗಾರ), ಬಿ.ಎಚ್.ನಿರಗುಡಿ (ಸಾಹಿತ್ಯ), ಕಲ್ಯಾಣರಾವ ಶೀಲವಂತ (ಶಿಕ್ಷಣ), ಅಂಬುಜಾ ಮಳಖೇಡಕರ್ (ಸಾಹಿತ್ಯ), ಶಾಂತಮಲ್ಲಪ ಕರೆಕಲ್ (ಸಾಹಿತ್ಯ), ರೇಣುಕಾ ಸರಡಗಿ (ಮಹಿಳಾ), ಪವನಕುಮಾರ ವಳಕೇರಿ (ಸಾಮಾಜಿಕ) ಅವರಿಗೆ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗೋಷ್ಠಿಯಲ್ಲಿ ರಾಜಕುಮಾರ ಉದನೂರ, ಕೆ.ಗಿರಿಮಲ್ಲ. ಡಾ.ಪ್ರವಿಣ ಸುಲ್ತಾನ್, ಡಾ.ರಾಜಶೇಖರ ಮಾಂಗ್?, ರೇಣುಕಾ ಡಾಂಗೆ, ಬಾಬು ಜಾಧವ್ ಕವನ ವಾಚಿಸಿದರು.