Home ಜಿಲ್ಲೆ ತುಮಕೂರು ಜ್ಞಾನ ವಿಕಾಸ ಕೇಂದ್ರಗಳು ಸರ್ವತೋಮುಖ ಜ್ಞಾನ ಪ್ರಸಾರದ ಕೇಂದ್ರ ಬಿಂದುಗಳಾಗಲಿ: ಕವಿತಾ

ಜ್ಞಾನ ವಿಕಾಸ ಕೇಂದ್ರಗಳು ಸರ್ವತೋಮುಖ ಜ್ಞಾನ ಪ್ರಸಾರದ ಕೇಂದ್ರ ಬಿಂದುಗಳಾಗಲಿ: ಕವಿತಾ

ಹುಳಿಯಾರು, ಆ. ೮- ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸ ಕೇಂದ್ರಗಳು ಸದಸ್ಯರಲ್ಲಿ ಜಾಗೃತಿ ಮೂಡಿಸುವ ಜತೆಗೆ, ಸರ್ವತೋಮುಖವಾದ ಜ್ಞಾನವನ್ನು ಪ್ರಸಾರ ಮಾಡುವ ಪ್ರಮುಖ ಕೇಂದ್ರ ಬಿಂದುಗಳಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಕವಿತಾ ಹೇಳಿದರು.


ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಶಾರದಾ ಜ್ಞಾನ ವಿಕಾಸ ಕೇಂದ್ರದಲ್ಲಿ ಏರ್ಪಡಿಸಿಸಿದ್ದ ಮಾಸಿಕ ಸಭೆಉದ್ಘಾಟಿಸಿ ಅವರು ಮಾತನಾಡಿದರು.


ಗ್ರಾಮೀಣ ಭಾಗದ ಜನರಿಗೆ ಸಂಸ್ಥೆಯ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ ಹಾಗೂ ಆಧ್ಯಾತ್ಮಿಕ ವಿಷಯಗಳ ಕುರಿತು ಆಯ್ದ ಸಂಪನ್ಮೂಲ ವ್ಯಕ್ತಿಗಳಿಂದ ಈ ಕೇಂದ್ರ ಸಭೆಗಳಲ್ಲಿ ಉಪಯುಕ್ತ ಮಾಹಿತಿ ನೀಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ.ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು, ಬ್ಯಾಂಕಿಂಗ್ ಸೌಲಭ್ಯಗಳು ಹಾಗೂ ಪ್ರಸ್ತುತ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು. ಜತೆಗೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಸ್ವ-ರಕ್ಷಣೆ ಕುರಿತು ಮಾಹಿತಿ ನೀಡಿದರು.


ಸಭೆಯ ಅಧ್ಯಕ್ಷತೆಯನ್ನು ಶಾರದಾ ಜ್ಞಾನ ವಿಕಾಸ ಕೇಂದ್ರದ ರಂಗಮ್ಮ ವಹಿಸಿದ್ದರು.


ಸೇವಾ ಪ್ರತಿನಿಧಿ ತಿಮ್ಮಣ್ಣ ಸ್ವಾಗತಿಸಿದರು, ಗೌರಮ್ಮ ಕಾರ್ಯಕ್ರಮ ನಿರೂಪಿಸಿದರು. ಲಕ್ಕಮ್ಮ ವಂದಿಸಿದರು.