
ಕೊರಟಗೆರೆ, ಜು. ೨೭- ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-೨೦೨೬ ರಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ೨,೦೯,೪೯೫ ಮಂದಿ ಮತದಾರರಿಗೆ ಗಣತಿ ಫಾರಂಗಳನ್ನು ವಿತರಿಸಿ ಶೇ.೧೦೦ ರಷ್ಟು ಪ್ರಗತಿ ಸಾದಿಸಿದ್ದು ಈಗಾಗಲೇ ೧.೬೮,೪೮೨ ಫಾರಂಗಳನ್ನು ಡಿಜಿಟಲೈಸಿಂಗ್ ಮಾಡುವ ಮೂಲಕ ಶೇ.೮ಂ.೨೫ ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ಸಮಗ್ರ ಪರಿಷ್ಕರಣೆಯ-೨೦೨೬ ಮಾಹಿತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಮತ್ತು ಪಟ್ಟಣದಲ್ಲಿ ವೇಗವಾಗಿ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿಧಾನ ಮತ್ತು ಗೊಂದಲವಿರುವ ಕಡೆ ಮತ್ತೊರ್ವ ಹೆಚ್ಚುವರಿ ಬಿಎಲ್‌ಓ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮುಂದಿನ ೮ ದಿನಗಳೊಳಗೆ ಮತದಾರರ ಡಿಜಿಟಲ್ ಕಾರ್ಯ ಶೇ ೧೦೦ ರಷ್ಟು ಪ್ರಗತಿ ಸಾಧಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಜನಪ್ರತಿನಿಧಿಗಳ ಸಹಕಾರ ಅತಿ ಮುಖ್ಯವಾಗಿದ್ದು, ಮನೆ ಮನೆಗೆ ಭೇಟಿ ನಿಡುವ ಅಧಿಕಾರಿಗಳಿಗೆ ಮತದಾರರು ಸ್ಥಳಾಂತರ ಹೊಂದಿರುವವರ, ಸಾವಾಗಿರುವವರ ಹಾಗೂ ನಕಲಿ, ಗೈರಿನ ಬಗ್ಗೆ ಮಾಹಿತಿಯನ್ನು ಆಧಿಕಾರಿಗಳಿಗೆ ನೀಡಬೇಕಿದೆ, ಇದರ ಬಗ್ಗೆ ಗೊಂದಲ ಇದ್ದಲ್ಲಿ ಸಹಾಯವಾಣಿಗೆ ಸಂರ್ಕಿಸಲು ಮನವಿ ಮಾಡಿದರು.
ಸಹಾಯವಾಣಿ ಕೊರಟಗೆರೆ ಗ್ರಾಮಿಣ ಭಾಗದ ದೂರವಾಣಿ ಸಂಖ್ಯೆ-೦೮೧೩೮-೨೩೨೧೫೩, ಕೊರಟಗೆರೆ ಪಟ್ಟಣಕ್ಕೆ ದೂರವಾಣಿ ಸಂಖ್ಯೆ ೦೮೧೩೮-೨೯೫೫೪೬ ಗೆ ಕರೆ ಮಾಡಿ ಮತದಾರರ ಸಮಸ್ಯೆ ಏನೇ ಇದ್ದರೂ ಪತ್ರಿ ನಿತ್ಯ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ರವರೆಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಮನವಿ ಮಾಡಿದರು.
ಪಟ್ಟಣದ ೩ನೇ ವಾರ್ಡ್‌ಡನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಬಿಎಲ್‌ಓ ಅವರು ಮನೆ ಮನೆಗೆ ಬೇಟಿ ನೀಡುವ ಸ್ಥಳಕ್ಕೆ ಚುನಾವಣಾಧಿಕಾರಿ ಸೋಮಪ್ಪ ಕಡಕೋಳ ಮತ್ತು ತಹಶೀಲ್ದಾರ್ ಮಂಜುನಾಥ್ ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.
ಈ ಸಂದರ್ಭಧಲ್ಲಿ ಪುರಸಭೆಯ ಮುಖ್ಯಾಧಿಕಾರಿ ಉಮೇಶ್, ಚುನಾವಣಾ ಶಿರಸ್ತೇದಾರ್ ಮಂಜುನಾಥ್, ಕಂದಾಯ ಅಧಿಕಾರಿ ಬಸವರಾಜು ನಕುಲ್, ಅರಣ್, ಕಾಂಗ್ರೆಸ್ ಪಕ್ಷದ ಅರವಿಂದ್, ಜೆಡಿಎಸ್ ಪಕ್ಷದ ಕಾರ್ಯದರ್ಶಿ ಲಕ್ಷ್ಮಣ್, ಚಿಕ್ಕರಂಗಯ್ಯ, ರಂಗಣ್ಣ, ಬಿಜೆಪಿ ಪಕ್ಷದ ಮಾರುತಿ ಮತ್ತಿತರರು ಉಪಸ್ಥಿತರಿದ್ದರು.































