Home ಜಿಲ್ಲೆ ಕಲಬುರಗಿ ರೈತರಿಗೆ ಎಸ್‍ಐಆರ್ ಬಗ್ಗೆ ಮಾರ್ಗದರ್ಶನ ನೀಡಲು: ಕರವೇ ಒತ್ತಾಯ

ರೈತರಿಗೆ ಎಸ್‍ಐಆರ್ ಬಗ್ಗೆ ಮಾರ್ಗದರ್ಶನ ನೀಡಲು: ಕರವೇ ಒತ್ತಾಯ

ಕಲಬುರಗಿ:ಜು.2: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಗ್ರಾಮೀಣ ಭಾಗದಲ್ಲಿನ ಕೃಷಿ ಕೂಲಿ ಕಾರ್ಮಿಕರು, ಅನಕ್ಷರಸ್ಥರು, ಸೇರಿದಂತೆ ಬಹುತೇಕರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ ಅವರು ಒತ್ತಾಯಿಸಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಮತಗಟ್ಟೆ ಅಧಿಕಾರಿಗಳು ಮತದಾರರಿಗೆ ಎನ್ಯೂಮರೇಷನ್ ನಮೂನೆಗಳನ್ನು ನೀಡಿದ ನಂತರ, ಅವುಗಳ ಮಹತ್ವದ ಕುರಿತು, ಜನರಿಗೆ ತಿಳಿವಳಿಕೆ ಮೂಡಿಸಬೇಕು,45 ವರ್ಷ ಮೇಲ್ಪಟ್ಟವರು,ಯಾವ ಭಾಗದಲ್ಲಿ ಅರ್ಜಿ ನಮೂನೆ ಭರ್ತಿ ಮಾಡಬೇಕು, 45 ವರ್ಷದೊಳಗಿನವರು ಯಾವ ಭಾಗದಲ್ಲಿ ಭರ್ತಿ ಮಾಡಬೇಕು ಎನ್ನುವ ಕುರಿತು, ಪಟ್ಟಣದಲ್ಲಿ ಪ್ರತಿಯೊಂದು ವಾರ್ಡ್‍ಗಳಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸಿ, ಮಾದರಿ ನಮೂನೆಗಳನ್ನು ಸಿದ್ಧಪಡಿಸಿ, ಪ್ರಾತ್ಯಕ್ಷಿಕೆ ಕೊಡಬೇಕು.ಹಳ್ಳಿಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಯೊಂದು ಹಳ್ಳಿಯಲ್ಲೂ ಜನರಿಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಬೇಕಿದೆ ಎಂದರು. ಅನಕ್ಷರಸ್ಥರು ಜನನ ಪ್ರಮಾಣ ಪತ್ರಗಳನ್ನು ಮಾಡಿಸಿರುವುದಿಲ್ಲ. ಅಂತವರಿಗೆ ಮಾಹಿತಿ ನೀಡಬೇಕು ಎಂದರು.