ಶಹಾಬಾದ: ತಾಲೂಕಿನ ಹೊನಗುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಹಳ್ಳಿ ಗ್ರಾಮದ ಭೀಮಾ ನದಿಯಲ್ಲಿ ಅಕ್ರಮ ಮರಳು ಬಳಕೆ ಮತ್ತು ಸಾಗಾಣಿಕೆ ಮಾಡಲಾಗುತ್ತಿದೆ.ಅಕ್ರಮ ಮರಳುಗಾರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುರುವಾರ ಕರವೇ ವತಿಯಿಂದ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕಾಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ್ ಮಾತನಾಡಿ, ತಾಲೂಕಿನ ಹೊನಗುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿಹಳ್ಳಿ ಗ್ರಾಮದ ಭೀಮಾ ನದಿಯಲ್ಲಿ ಜವಳಿ ಪಾರ್ಕ್ಗೆ ನೀರು ಸರಬರಾಜು ಯೋಜನೆಯಡಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಗುತ್ತಿಗೆದಾರರು ಸ್ಥಳೀಯ ಆಡಳಿತದ ಅಗತ್ಯ ಅನುಮತಿ ಇಲ್ಲದೆ ನದಿ ಪಾತ್ರದಿಂದ ಮರಳನ್ನು ತೆಗೆದು ಕಾಮಗಾರಿಗೆ ಬಳಸುತ್ತಿದ್ದಾರೆ ಹಾಗೂ ಸಾಗಾಣಿಕೆ ಮಾಡುತಿದ್ದಾರೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿವೆ.
ಗುತ್ತಿಗೆದಾರರು ರಾಯಲ್ಟಿ ಪಾವತಿಸಿರುವುದಾಗಿ ಹೇಳಿಕೊಂಡರೂ, ಸಂಬAಧಪಟ್ಟ ಇಲಾಖೆಗಳ ಕಾನೂನುಬದ್ಧ ಅನುಮತಿಗಳು ಮತ್ತು ದಾಖಲೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ತಾಲ್ಲೂಕು ಆಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪರಿಶೀಲಿಸಬೇಕು. ಯಾವುದೇ ನಿಯಮ ಉಲ್ಲಂಘನೆ ಕಂಡುಬAದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಈ ಸಂಬAಧ ತಾಲ್ಲೂಕು ದಂಡಾಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯಲ್ಲಿ ಬಳಸುತ್ತಿರುವ ಮರಳಿನ ಮೂಲ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ ಕಂಡುಬAದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಕಾಚಾಪೂರ, ಸುರೇಶ ಹೈಯ್ಯಾಳಕರ್. ಸುರೇಶ್ ಡೊಡ್ಡಮನಿ, ಸೇರಿದಂತೆ ಅನೇಕರು ಇದ್ದರು.





























