Home ಜಿಲ್ಲೆ ಹೆರಿಗೆಗೆ ಹಣ ವಸೂಲಿ ಕ್ರಮಕ್ಕೆ ಕರವೇ ಆಗ್ರಹ

ಹೆರಿಗೆಗೆ ಹಣ ವಸೂಲಿ ಕ್ರಮಕ್ಕೆ ಕರವೇ ಆಗ್ರಹ

ಔರಾದ್ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರವೇ (ಪ್ರವೀಣಶೆಟ್ಟಿ ಬಣ) ಕಾರ್ಯಕರ್ತರು ತಾಲೂಕು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗಡಿ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ, ಒಂದು ಹೆರಿಗೆಗೆ ಇಂತಿಷ್ಟು ಅಂತ ಹಣ ಅಂತ ನಿಗದಿ ಮಾಡಲಾಗಿದೆ, ಹಣ ನೀಡದೆ ಇದಲ್ಲಿ ಬೀದರ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದೆ, ಬಡ ರೋಗಿಗಳೆ ಹೆಚ್ಚಾಗಿ ಬರುವ ಆಸ್ಪತ್ರೆಯಲ್ಲಿ ಈ ರೀತಿ ಹಣ ವಸೂಲಿಗೆ ನಿಂತಾಗ ಬಡ ರೋಗಿಗಳು ಎಲ್ಲಿ ಹೋಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಇಲ್ಲವಾದಲ್ಲಿ ಆಸ್ಪತ್ರೆ ಎದುರಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಅನಿಲ ದೇವಕತೆ, ಅರ್ಜುನ ಭಂಗೆ, ರಾಹುಲ, ಅಂಬಾದಾಸ, ಅಮರ, ಆಕಾಶ ಸೇರಿದಂತೆ ಇನ್ನಿತರರಿದ್ದರು.