Home ಜಿಲ್ಲೆ ಕನ್ನಡ ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವದ ಜಾಗೃತ ಕಾವಲುಗಾರ

ಕನ್ನಡ ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವದ ಜಾಗೃತ ಕಾವಲುಗಾರ

ವಿಶೇಷ ವರದಿ ಶಿವಕುಮಾರ ಸ್ವಾಮಿ:-
“ಪೆನ್ನು ಕತ್ತಿಗಿಂತ ಹರಿತವಾದದ್ದು” ಎಂಬ ಮಾತಿದೆ. ಸಮಾಜದ ಅಂಕು-ಡೊAಕುಗಳನ್ನು ತಿದ್ದಿ, ಜನಸಾಮಾನ್ಯರ ಧ್ವನಿಯಾಗಿ, ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಜವಾಬ್ದಾರಿಯುತ ಮಾಧ್ಯಮವೇ ಪತ್ರಿಕಾರಂಗ. ಕನ್ನಡಿಗರಿಗೆ ಜುಲೈ ೧ ಅತ್ಯಂತ ಹೆಮ್ಮೆಯ ದಿನ. ಏಕೆಂದರೆ, ೧೮೪೩ರ ಜುಲೈ ೧ ರಂದು ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಮಂಗಳೂರಿನಿAದ ‘ಮಂಗಳೂರು ಸಮಾಚಾರ’ ಎಂಬ ಮೊದಲ ಕನ್ನಡ ಪತ್ರಿಕೆಯನ್ನು ಹೊರತಂದರು. ಈ ಐತಿಹಾಸಿಕ ದಿನದ ನೆನಪಿಗಾಗಿ ನಾವು ‘ಕನ್ನಡ ಪತ್ರಿಕಾ ದಿನ’ವನ್ನು ಆಚರಿಸುತ್ತೇವೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ:

ಶಾಸಕಾAಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಜೊತೆಗೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಕರೆಯಲಾಗುತ್ತದೆ. ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲುವ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹಾನ್ ಶಕ್ತಿ ಪತ್ರಿಕೋದ್ಯಮಕ್ಕಿದೆ. ಸ್ವಾತಂತ್ರ‍್ಯ ಸಂಗ್ರಾಮದಿAದ ಹಿಡಿದು ಇಂದಿನವರೆಗೂ ಸಮಾಜದ ಬದಲಾವಣೆಯಲ್ಲಿ ಪತ್ರಕರ್ತರ ಪಾತ್ರ ಹಿರಿದಾದದ್ದು.

ಇಂದಿನ ಸವಾಲುಗಳು ಮತ್ತು ಪತ್ರಿಕಾ ಧರ್ಮ:

ಇಂದು ಡಿಜಿಟಲ್ ಯುಗದಲ್ಲಿ ಸುದ್ದಿಗಳು ಕ್ಷಣಾರ್ಧದಲ್ಲಿ ಹರಡುತ್ತವೆ. ಆದರೆ ಇದರ ಜೊತೆಯಲ್ಲೇ ‘ಸುಳ್ಳು ಸುದ್ದಿ’ಗಳ (ಈಚಿಞe ಓeತಿs) ಹಾವಳಿಯೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಿಷ್ಪಕ್ಷಪಾತವಾಗಿ ಹಾಗೂ ನಿರ್ಭೀತವಾಗಿ ನೈಜ ಸುದ್ದಿಯನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪತ್ರಕರ್ತರ ಅಗತ್ಯ ಸಮಾಜಕ್ಕೆ ಎಂದಿಗಿAತ ಹೆಚ್ಚಾಗಿದೆ. ಪತ್ರಿಕಾ ಧರ್ಮವನ್ನು ಮರೆಯದೆ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪತ್ರಕರ್ತನಿಗೂ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕಿದೆ.

?ಸತ್ಯದ ಪರವಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಾಡಿನ ಎಲ್ಲಾ ಪತ್ರಕರ್ತ ಮಿತ್ರರಿಗೂ ಹಾಗೂ ಪತ್ರಿಕಾ ಬಳಗಕ್ಕೂ ಕನ್ನಡ ಪತ್ರಿಕಾ ದಿನಾಚರಣೆಯ ಶುಭಾಶಯಗಳು!