
ಔರಾದ್ : ಪಟ್ಟಣದ ಮಾತಾ ಮಾಣಿಕೇಶ್ವರಿ ಬಡಾವಣೆಯ ಹಿಂದೂ ಮಹಾ ಗಣೇಶ ಮಂಡಳಿ ಸದಸ್ಯರು ಗಣೇಶ ಉತ್ಸವದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ನಿರ್ಮಳೆ ಅವರು ಮಾತನಾಡಿ ಗಣೇಶ ಉತ್ಸವ ಎಂದರೆ ಕೇವಲ ಪೂಜೆ, ಪ್ರಸಾದಕ್ಕೆ ಸೀಮಿತವಲ್ಲ ಇದರಿಂದ ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯ ಮೂಡಿಸುವ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನಿಟ್ಟಿನಲ್ಲಿ ವಿನೂತನವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷ, ಸ್ವತಂತ್ರ ಪೂರ್ವದಲ್ಲಿ ಬಾಲಗಂಗಾಧರ ತಿಲಕ್ ಹಾಗೂ ಕ್ರಾಂತಿಕಾರಿಗಳು ಸೇರಿ ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶ ಉತ್ಸವ ಆಚರಿಸಿ ಸ್ವತಂತ್ರ ಹೋರಾಟಗಾರರನ್ನು ಒಗ್ಗೂಡಿಸಿ ಹೋರಾಟ ನಡೆಸಿದರು. ಕಲ್ಯಾಣ ಕರ್ನಾಟಕ ಭಾಗವನ್ನು ನಿಜಾಮನ ಕಪಿ ಮುಷ್ಟಿಯಿಂದ ವಿಮೋಚನೆ ಗೊಳಿಸಲು ದೇಶದ ಮೊದಲ ಗೃಹ ಮಂತ್ರಿ ಸರ್ದಾರ ವಲ್ಲಭಭಾಯಿ ಪಟೇಲ ಅವರ ನೇತೃತ್ವದಲ್ಲಿ ಪೆÇಲೀಸ್ ಕಾರ್ಯಾಚರಣೆ ಎನ್ನುವ ಹೆಸರಿನಲ್ಲಿ ಹೋರಾಟ ನಡೆಸಿ 1948 ಸೆಪ್ಟೆಂಬರ್ 17 ರಂದು ವಿಮೋಚನೆಗೊಂಡಿತ್ತು, ಹಿಂದೂ ಮಹಾ ಗಣೇಶ ಮಂಡಳಿ ಸದಸ್ಯರು ಈ ಉತ್ಸವವನ್ನು ಬೆಳಿಗ್ಗೆಯ ಧ್ವಜಾರೋಹಣ ಧ್ವಜಾರೋಹಣಕ್ಕೆ ಸೀಮಿತವಾಗಿರಿಸದೆ ಕಾರ್ಯಕ್ರಮ ಆಯೋಜಿಸಿ ಎಲ್ಲರಿಗೂ ಅದರ ಮಹತ್ವ ತಿಳಿಸುವ ಕಾರ್ಯ ರಚನಾತ್ಮಕವಾದದ್ದು ಎಂದರು.
ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಮಾತನಾಡಿ ಭಾರತೀಯ ಸಂಸ್ಕøತಿ, ಸಂಪ್ರದಾಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಹಿಂದೂ ಸಮಾಜದ ಹಬ್ಬಗಳಾದ ಗಣೇಶ ಉತ್ಸವ, ರಕ್ಷಾ ಬಂಧನ, ದಸರಾ, ದೀಪಾವಳಿ, ಸಂಕ್ರಾಂತಿ ಸೇರಿದಂತೆ ಎಲ್ಲ ಹಬ್ಬಗಳು ಸಹಬಾಳ್ವೆ ಸಾಮರಸ್ಯದ ಸಂದೇಶ ನೀಡುತ್ತವೆ, ಹಿಂದೂ ಸಮಾಜ ಯಾವತ್ತು ಯಾವುದೇ ಧರ್ಮಕ್ಕೆ, ಸಂಸ್ಕೃತಿಗೆ ಹೀಯಾಳಿಸುವ ಕಾರ್ಯ ಮಾಡುವುದಿಲ್ಲ ಆದರೆ ನಮ್ಮಲ್ಲಿಯೆ ಕೆಲ ಕಮ್ಯುನಿಸ್ಟ್ ಬುದ್ಧಿಗೆ ಬಲಿಯಾಗಿ ಹಿಂದೂ ಸಮಾಜ ಒಡೆಯುವ ಕಾರ್ಯ ಮಾಡುತ್ತಿದ್ದಾರೆ ನಾವೆಲ್ಲರೂ ಈ ರೀತಿಯ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಸಮಾಜ ದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಅವರು ಮಾತನಾಡಿ ಭಾರತೀಯ ಸಂಸ್ಕೃತಿಯ ವಾರಸುದಾರರು ನಾವುಗಳು, ನಮ್ಮ ಕಲ್ಯಾಣ ಕರ್ನಾಟಕ ಬಹು ದೊಡ್ಡ ಇತಿಹಾಸ ಹೊಂದಿದೆ, ಜಗತ್ತಿಗೆ ಸಂಸತ್ತು ನೀಡಿದೆ, ಏಷ್ಯಾದ ಆಕರ್ಷಕ ಬೀದರ್ ಕೋಟೆ, ಹಂಪಿ ಸಾಮ್ರಾಜ್ಯ ಸೇರಿದಂತೆ ಅನೇಕ, ಕನ್ನಡ ಉಳಿಸಿ ಬೆಳೆಸಿದ ಮಠಗಳು ಹೀಗೆ ಬಹು ಶ್ರೀಮಂತಿಕೆ ಹೊಂದಿದೆ, ಆ ಇತಿಹಾಸವನ್ನು ನಾವುಗಳು ನಮ್ಮ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ, ಅದರಂತೆ ನಮ್ಮ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಮೂಲಕ ಸಂಸ್ಕೃತಿ, ಸಂಸ್ಕಾರ ಬಿತ್ತುವ ಕಾರ್ಯ ಪಾಲಕರು ಮಾಡಬೇಕಾಗಿದೆ ಎಂದರು.
ಈ ವೇಳೆ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ನಿವೃತ್ತ ಯೋಧರಾದ ಶರಣಪ್ಪ ವಲ್ಲೆಪೂರೆ, ರಾಜಕುಮಾರ ನಾಯ್ಕವಾಡೆ ಅವರನ್ನು ಗೌರವಿಸಲಾಯಿತು. ತದನಂತರ ಸಸಿ ವಿತರಣೆ ಮಾಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಈ ಸಂಧರ್ಭದಲ್ಲಿ ಶಿವಾಜಿ ಜಾಧವ, ಕನ್ನಡಪರ ಹೋರಾಟಗಾರರಾದ ಬಸವರಾಜ ಶೆಟಕಾರ, ಶರಣಪ್ಪ ಪಾಟೀಲ, ಹುಲ್ಲೆಪ್ಪ, ಅಮರಸ್ವಾಮಿ ಸ್ಥಾವರಮಠ, ಸಂತೋಷ ದ್ಯಾಡೆ, ಮಾರುತಿರೆಡ್ಡಿ ಅಳ್ಳೆ, ಮಹೇಶ ಪಸರ್ಗೆ, ವಿಶಾಲ ಬಿರಾದಾರ, ಭಾಗ್ಯವಾನ ಗಜರೆ, ವಿಕಾಸ ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


























