Home ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಂಗೀತ ಮಹೋತ್ಸವ ಯಶಸ್ವಿ: ಸಂಗೀತದ ಬೆಳವಣಿಗೆಗೆ ಗಣ್ಯರ ಕರೆ

ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಂಗೀತ ಮಹೋತ್ಸವ ಯಶಸ್ವಿ: ಸಂಗೀತದ ಬೆಳವಣಿಗೆಗೆ ಗಣ್ಯರ ಕರೆ

ಕಲಬುರಗಿ,ಜೂ.12-ಇಲ್ಲಿನ ಪಂಡಿತ್ ಡಿ.ವಿ. ಪಲುಸ್ಕರ ಸಂಗೀತ ಸಾಹಿತ್ಯ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜೂನ್ 10ರಂದು ನಗರದ ನ್ಯೂ ಭೋವಿಗಲ್ಲಿಯ ಲಂಕೇಶ್ ಹನುಮಾನ್ ಮಂದಿರದಲ್ಲಿ ‘ಕಲ್ಯಾಣ ಕರ್ನಾಟಕ ಸಂಗೀತ ಮಹೋತ್ಸವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ರೈತ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷರಾದ ದಯಾನಂದ ಸಿ. ಪಾಟೀಲ್ ಅವರು ಮಾತನಾಡಿ, “ಸಂಗೀತವು ಮನುಷ್ಯನ ಮನಸ್ಸಿಗೆ ಶಾಂತಿ ನೀಡುವ ಅತ್ಯುತ್ತಮ ಮಾಧ್ಯಮವಾಗಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಗೀತದ ಬೆಳವಣಿಗೆಗೆ ಅಪಾರ ಅವಕಾಶಗಳಿದ್ದು, ಇಂತಹ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಅಗತ್ಯವಿದೆ. ಸಂಸ್ಥೆಯು ಹಮ್ಮಿಕೊಳ್ಳುವ ಮುಂದಿನ ಎಲ್ಲಾ ಜನಪರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾನು ವೈಯಕ್ತಿಕವಾಗಿ ಮತ್ತು ಸಂಘಟನೆಯ ವತಿಯಿಂದ ಸಂಪೂರ್ಣ ಬೆಂಬಲ ಹಾಗೂ ಪೆÇ್ರೀತ್ಸಾಹ ನೀಡಲಿದ್ದೇನೆ,” ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೇಡಂ ಕನ್ನಡ ಜಾನಪದ ಪರಿಷತ್ತಿನ ಶಿವರಾವ್ ಭೋವಿ ಅವರು, ಸಂಗೀತದ ಬೆಳವಣಿಗೆ ಮತ್ತು ಇಂದಿನ ಸಮಾಜದಲ್ಲಿ ಅದರ ಪ್ರಾಮುಖ್ಯತೆಯ ಕುರಿತು ಸುದೀರ್ಘವಾಗಿ ಬೆಳಕು ಚೆಲ್ಲಿದರು. ಗ್ರಾಮೀಣ ಭಾಗದ ಕಲೆ ಹಾಗೂ ಸಂಗೀತ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಹ ಶಿಲ್ಪ ಕಲಾವಿದರಾದ ವಿಶ್ವೇಶ್ವರಯ್ಯ ಭೋವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ಜಗದೀಶ್ವರಿ ಅ. ನಾಸಿ ಹಾಗೂ ಗೌರವಾನ್ವಿತ ಅತಿಥಿಗಳಾಗಿ ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ಶ್ರೀ ರೇವಣಸಿದ್ದಪ್ಪ ವಿ., ಬಸವರಾಜ್ ತಾಂಡೂರಕರ್, ಸೂರ್ಯಕಾಂತ್ ಜೋಷಿ, ಆರ್ಯ ಸಮಾಜದ ಅಧ್ಯಕ್ಷರಾದ ಹಿರಾಲಾಲ ನಾಯಿಂದ್ರಕರ್ ಮತ್ತು ಸುರೇಶ್ ಜೋಷಿ ಉಪಸ್ಥಿತರಿದ್ದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು:
ಉದ್ಘಾಟನಾ ಸಮಾರಂಭದ ನಂತರ ನಾಡಿನ ಹೆಸರಾಂತ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಕಾಶ್ ಪೂಜಾರಿ ಅವರಿಂದ ತತ್ವಪದ, ಸಿದ್ಧಾರ್ಥ ಚಿಮ್ಮಾಇದ್ಲಾಯಿ ಅವರಿಂದ ಶಾಸ್ತ್ರೀಯ ಸಂಗೀತ, ಯಲ್ಲಾಲಿಂಗ ಡಾಂಗೆ ಅವರಿಂದ ದಾಸವಾಣಿ ಭುವನೇಶ್ವರಿ ಅವರಿಂದ ಸುಗಮ ಸಂಗೀತ ಹಾಗೂ ಸಿದ್ದಲಿಂಗ ಮಾಹೂರ ಅವರಿಂದ ವಚನ ಗಾಯನ ಪ್ರಸ್ತುತಿ ಮೂಡಿಬಂದವು. ಇವರಿಗೆ ಹಾರ್ಮೋನಿಯಂನಲ್ಲಿ ಶ್ರೀಧರ ಹೊಸಮನಿ ಹಾಗೂ ತಬಲಾ ಸಾಥ್‍ನಲ್ಲಿ ಜಗದೀಶ್ ಎಸ್. ದೇಸಾಯಿ ಕಲ್ಲೂರ ಮತ್ತು ಮಹಾಂತೇಶ ಹರವಾಳ ಸಾಥ್ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗರಾಜ ಎಮ್. ಪುರಮಕರ್ ಅವರು ಬಂದಿದ್ದ ಎಲ್ಲಾ ಗಣ್ಯರನ್ನು ಮತ್ತು ಸಂಗೀತ ಪ್ರೇಮಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಗೀತ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.