Home ಜಿಲ್ಲೆ ಬೆಂಗಳೂರು ಜಲಮಂಡಳಿಗೆ ಐಎಸ್‌ಒ ಪ್ರಮಾಣ ಪತ್ರ

ಜಲಮಂಡಳಿಗೆ ಐಎಸ್‌ಒ ಪ್ರಮಾಣ ಪತ್ರ

ಬೆಂಗಳೂರು, ಏ.೧೭: ಬೆಂಗಳೂರು ಜಲಮಂಡಳಿ ದೇಶದಲ್ಲೇ ಮೊದಲ ಬಾರಿಗೆ ಐಎಸ್‌ಒ ೫೦೦೦೧:೨೦೧೮ ಅಂತಾರಾಷ್ಟ್ರೀಯ ಪ್ರಮಾಣಪತ್ರವನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದೆ. ಇಂಧನ ನಿರ್ವಹಣಾ ವ್ಯವಸ್ಥೆಗಳಲ್ಲಿ ಉತ್ತಮತೆ ಸಾಧಿಸಿದ ಹಿನ್ನೆಲೆಯಲ್ಲಿ ಈ ಗೌರವ ದೊರೆತಿದೆ.


ಏಪ್ರಿಲ್ ೧೪ ರಂದು ಬ್ಯೂರೋ ವೆರಿಟಾಸ್ ಸಂಸ್ಥೆಯಿಂದ ಈ ಪ್ರತಿಷ್ಠಿತ ಪ್ರಮಾಣಪತ್ರವನ್ನು ಅಧಿಕೃತವಾಗಿ ನೀಡಲಾಗಿದೆ. ಟಿ.ಕೆ. ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಪ್ರದೇಶಗಳ ಬೃಹತ್ ನೀರು ಸರಬರಾಜು ಪಂಪಿಂಗ್ ಸ್ಟೇಷನ್‌ಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ನಿರ್ವಹಣೆಯನ್ನು ಅನುಸರಿಸಿರುವುದಕ್ಕೆ ಈ ಮಾನ್ಯತೆ ಲಭಿಸಿದೆ.


ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ನೇತೃತ್ವದ ತಂಡ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಪ್ರಮಾಣಪತ್ರ ಹಸ್ತಾಂತರಿಸಿ ಧನ್ಯವಾದ ಸಲ್ಲಿಸಿದರು.
ಈ ಸಾಧನೆ ಕುರಿತು ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಐಎಸ್‌ಒ ೫೦೦೦೧:೨೦೧೮ ಪ್ರಮಾಣಪತ್ರವು ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಜಲ ಮೂಲಸೌಕರ್ಯ ನಿರ್ಮಾಣದ ದಿಟ್ಟ ಹೆಜ್ಜೆಯಾಗಿದ್ದು, ನಾಗರಿಕರಿಗೆ ದಕ್ಷ ಮತ್ತು ನಿರಂತರ ನೀರು ಸರಬರಾಜು ನೀಡುವಲ್ಲಿ ಜಲಮಂಡಳಿ ಬದ್ಧತೆಯನ್ನು ತೋರಿಸುತ್ತದೆ,” ಎಂದರು.


ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು, “ಈ ಸಾಧನೆ ಸಂಸ್ಥೆಯ ಎಲ್ಲಾ ಸಿಬ್ಬಂದಿಯ ಪರಿಶ್ರಮದ ಫಲ” ಎಂದು ಅಭಿಪ್ರಾಯಪಟ್ಟರು.


ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು, “ಪ್ರತಿ ಮನೆಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವ ದಿಸೆಯಲ್ಲಿ ನಾವು ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಈ ಪ್ರಮಾಣಪತ್ರವು ನಮ್ಮ ತಂಡದ ಸಮರ್ಪಣೆಯ ಪ್ರತಿಫಲ,” ಎಂದು ಹೇಳಿದರು.
ಇದಕ್ಕೂ ಮೊದಲು, ಕೊಳವೆ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದಂತೆ ಭಾರತೀಯ ಮಾನದಂಡಗಳ ಬ್ಯೂರೋ ಪ್ರಮಾಣಪತ್ರ ಪಡೆದ ದೇಶದ ಮೊದಲ ಜಲಮಂಡಳಿ ಎಂಬ ಹೆಗ್ಗಳಿಕೆಯನ್ನು ಜಲಮಂಡಳಿ ಪಡೆದಿತ್ತು. ಇದೀಗ ಅಂತಾರಾಷ್ಟ್ರೀಯ ಐಎಸ್‌ಒ ಪ್ರಮಾಣಪತ್ರದೊಂದಿಗೆ ಸಂಸ್ಥೆಯ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ.