
ಕೆ.ಆರ್. ಪುರ,ಏ.೧೭- ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕ್ಷೇತ್ರದ ವಿವಿಧೆಡೆ ಚಾಲನೆ ನೀಡಿದ್ದಾರೆ.
ಮಹದೇವಪುರ ಕ್ಷೇತ್ರದ ನಲ್ಲೂರಹಳ್ಳಿ, ತೂಬರಹಳ್ಳಿ, ಕಾಡುಗುಡಿ, ಸೀತಾರಾಮಪಾಳ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದವರು.
ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಅನುದಾನ ನೀಡದೆ ಧೋರಣೆಯನ್ನು ಮಾಡುತ್ತಿದ್ದು ಬಂದಿರುವ ಅಲ್ಪಸ್ವಲ್ಪ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಸಾರ್ವಜನಿಕರಿಗೆ ಬಹುಮುಖ್ಯವಾಗಿ ಬೇಕಿರುವ ರಸ್ತೆ ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಲ್ಪಿಸುತ್ತೇವೆ, ಮುಂದಿನ ದಿನಗಳಲ್ಲಿ ಆದಷ್ಟು ಅನುದಾನ ಕ್ಷೇತ್ರಕ್ಕೆ ತರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುತ್ತಿದಾರರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಶೀಘ್ರ ಕಾಮಗಾರಿಯನ್ನು ಆರಂಭಿಸಿ ಯಾವುದೇ ಲೋಪ ದೋಷಗಳು ಕಂಡುಬರುವಂತೆ ಪೂರ್ಣಗೊಳಿಸಬೇಕೆಂದು ತಿಳಿಸಿದರು . ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪಿಳ್ಳಪ್ಪ,ಮುಖಂಡರಾದ ಕಾವೇರಿನಗರ ರವಿ,ಅಂಬರೀಶ್,ಪವನ್,ಶ್ರೀನಿವಾಸರಾಜು ಇದ್ದರು.






















