
ಗದಗ,ನ೧೨: ೨೦೨೬-೨೭ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆಯ ಫಲಿತಾಂಶವನ್ನು ಗಣನೀಯವಾಗಿ ಸುಧಾರಿಸುವುದರ ಜೊತೆಗೆ ರಾಜ್ಯಮಟ್ಟದಲ್ಲಿ ಮೊದಲ ಐದು ಸ್ಥಾನಗಳೊಳಗೆ ಜಿಲ್ಲೆಯನ್ನು ತರುವ ಮಹತ್ವಾಕಾಂಕ್ಷೆಯ ಗುರಿಯನ್ನು ನಾವೆಲ್ಲರೂ ಹೊಂದಬೇಕು. ಈ ಗುರಿ ಸಾಧಿಸಲು ಪ್ರತಿಯೊಬ್ಬ ಅಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಂಕಣಬದ್ಧರಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ಗದಗ ಜಿಲ್ಲೆಯ ನೂತನ ಉಪನಿರ್ದೇಶಕರಾದ ಕೆ.ಡಿ. ಬಡಿಗೇರ ಅವರು ಹೇಳಿದರು.
ಗದಗ ನಗರದ ಮಹಾವೀರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ, ಗುಣಮಟ್ಟದ ಕಲಿಕೆ ಹಾಗೂ ಶೈಕ್ಷಣಿಕ ಸಾಧನೆ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿಯೊಂದು ಶಾಲೆಯೂ ತನ್ನದೇ ಆದ ಶಾಲಾವಾರು ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಫಲಿತಾಂಶ ಸುಧಾರಣೆಗೆ ಮುಂದಾಗಬೇಕು. ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸುವುದು, ನಿರಂತರ, ಕೆಎಎಎಂಎಸ್ ವರದಿಗಳ ಸಮರ್ಪಕ ನಿರ್ವಹಣೆ, ಶಾಲಾ ಸುರಕ್ಷತೆಗೆ ಆದ್ಯತೆ, ಎಐ ತಂತ್ರಜ್ಞಾನದ ಬಳಕೆ ಹಾಗೂ ಶಿಕ್ಷಕರ ಕಾರ್ಯನಿರ್ವಹಣೆಯಲ್ಲಿ ತಂತ್ರಜ್ಞಾನ ಅಳವಡಿಕೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿ, ಪ್ರತಿಭಾವಂತ ಹಾಗೂ ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೆ ಮೇಧಾವಿ ಹಾಗೂ ಸಂಜೀವಿನಿ ವರ್ಗಗಳು ಮಿಷನ್ ೬೦+ ಅನುಷ್ಠಾನ ಕುರಿತು ತಿಳಿಸಿದರು.
ಇದಲ್ಲದೆ ಮಾದರಿ ಪ್ರಶ್ನೆಪತ್ರಿಕೆಗಳ ನಿರಂತರ ಅಭ್ಯಾಸ ಮತ್ತು ಮೌಲ್ಯಮಾಪನ, ಪೋಷಕರ ಸಹಭಾಗಿತ್ವ, ಮನೆ ಭೇಟಿ ಕಾರ್ಯಕ್ರಮ, ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸುವಿಕೆ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಕಡ್ಡಾಯ ನೋಂದಣಿ, ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆ, ಕರಿಯರ್ ಗೈಡೆನ್ಸ್, ಕಾಲಕಾಲಕ್ಕೆ ಇಲಾಖೆಯಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸುವುದು,ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಇಲಾಖೆಯ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಡಿ.ವಾಯ್.ಪಿ.ಸಿ. ಎಂ.ಎಚ್. ಕಂಬಳಿ ಅವರು ಸಮಗ್ರ ಶಿಕ್ಷಣ ಕರ್ನಾಟಕದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನ,ಸಾಮರ್ಥ್ಯ ವೃದ್ಧಿ,ಸಮುದಾಯ ಭಾಗವಹಿಸುವಿಕೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು,ಕುರಿತು ಮಾಹಿತಿ ನೀಡಿದರು. ಡಿ.ವಾಯ್.ಪಿ.ಸಿ. (ಗುಣಮಟ್ಟ) ರವಿ ಪ್ರಕಾಶ್ ಅವರು ಅನುದಾನ ಬಳಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಯ ಕುರಿತು ಮಾತನಾಡಿದರು.
SSಐಅ ನೋಡಲ್ ಅಧಿಕಾರಿಗಳಾದ ಎಚ್.ಬಿ. ರಡ್ಡೇರ ಅವರು ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿಗಳ ನೋಂದಣಿ, ಎನ್.ಎಂ.ಎA.ಎಸ್. ಸೇರಿದಂತೆ ಪ್ರಮುಖ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು. ಡಿ.ಐ.ಎ.ಟಿ. ಉಪನ್ಯಾಸಕರಾದ ಶ್ರೀಮತಿ ಸುಧಾ ಬನ್ನಿಕಲ್ ಅವರು ಈಐಓ ಕಾರ್ಯಕ್ರಮದ ಮಹತ್ವ ಮತ್ತು ಅನುಷ್ಠಾನದ ಕುರಿತು ಮಾತನಾಡಿದರು. ಂPಅಔ ಶಿವಕುಮಾರ ಕುರಿ ಅವರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಿಕೆ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳ (ಅWSಓ) ಶೈಕ್ಷಣಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಗೋಟುರ ಹಿರಿಯ ಉಪನ್ಯಾಸಕರಾದ ಬಿ.ಎಫ್. ಅರವಟಿಗಿ, ವೈ ಕೆ ಹಂದ್ರಾಳ, ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಪಿ ಪ್ರಭಯ್ಯನಮಠ, ಎನ್ ಆರ್ ನಿಡಗುಂದಿ, ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷರಾದ ಎಂ.ಕೆ. ಲಮಾಣಿ, ಕಾರ್ಯದರ್ಶಿಗಳಾದ ಆನಂದ ಪಾಟೀಲ, ಉಮೇಶ್ ಹಿರೇಮಠ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಗಂಗಾಧರ ಅಣ್ಣಿಗೇರಿ, ಉಪನಿರ್ದೇಶಕರ ಕಚೇರಿಯ ಎಂ.ಎಚ್. ಸವದತ್ತಿ ಹಾಗೂ ಆರ್.ಜಿ. ಕವಲಗೇರಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಪ್ರೌಢ ಶಿಕ್ಷಣ ಸಂಯೋಜಕರು,ಬಿ ಆರ್ ಪಿ ಗಳು ಜೊತೆಗೆ ೨೮೫ ಕ್ಕೂ ಹೆಚ್ಚು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಶೈಕ್ಷಣಿಕ ಫಲಿತಾಂಶ ಸುಧಾರಣೆಗೆ ಸಂಬAಧಿಸಿದ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಎಸ್.ಬಿ. ದೊಡ್ಡಣ್ಣವರ ಪ್ರಾರ್ಥಿಸಿದರು. ಎಚ್.ಬಿ. ರಡ್ಡೇರ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಬಡಿಗೇರ ಅವರು ವಂದಿಸಿದರು.





















