Home ಜಿಲ್ಲೆ ಕಲಬುರಗಿ ಪ.ಪೂ.ಕಾಲೇಜು ವಿದ್ಯಾರ್ಥಿಗಳ ಸಾಂಸ್ಕøತಿಕ ಸ್ಪರ್ಧೆ ಉದ್ಘಾಟನೆ

ಪ.ಪೂ.ಕಾಲೇಜು ವಿದ್ಯಾರ್ಥಿಗಳ ಸಾಂಸ್ಕøತಿಕ ಸ್ಪರ್ಧೆ ಉದ್ಘಾಟನೆ

ಕಲಬುರಗಿ,ನ.17-ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ 2026-27ನೇ ಸಾಲಿನ ಕಲಬುರ್ಗಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂÀಭವನ್ನು ಇಲಾಖೆ ಉಪನಿರ್ದೇಶಕ ದೇವನಗೌಡ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಬಂಧ , ಚರ್ಚಾ, ಜಾನಪದ ನೃತ್ಯ,ಏಕೆ ಅಭಿನಯ,ಜಾನಪದ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ, ಶಿಸ್ತು ಸಂಯಮವನ್ನು ಪಾಲಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆ ಮೇಲೆ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ.ಚಂದ್ರಶೇಖರ್ ದೊಡ್ಡಮನಿ, ರಾಜು ಗಂಗಾಧರ್, ಭೀಮರಾವ್ ಅರಕೇರಿ ,ಬಿಎಚ್ ನಿರಗುಡಿ ,ಜೋಹರಾ ಫಾತಿಮಾ, ಶಿವರಾಜ್ ನಂದಗಾವ್, ಜಯಶ್ರೀ ಪಾಟೀಲ್, ಜ್ಯೋತಿ ಕುಲಕರ್ಣಿ, ಸಂತೋಷ್ ಹೊಸಮನಿ ಇದ್ದರು. ಸರ್ಕಾರ ಪಿಯು ಕಾಲೇಜು ಪ್ರಾಂಶುಪಾಲರಾದ ದೇವಿದಾಸ ಪವಾರ್ ಪ್ರಾಸ್ತಾವಿಕ ಮಾತನಾಡಿದರು, ಮಾರುತಿ ಬೇಂದ್ರೆ ನಿರೂಪಿಸಿದರು, ವಿಜಯಕುಮಾರ್ ರೋಣದ ಪ್ರಾರ್ಥಿಸಿದರು, ಸಂತೋಷ ಕುಮಾರ ಹೊಸಮನಿ ಸ್ವಾಗತಿಸಿದರು, ಕಲ್ಬುರ್ಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಉಪಸ್ಥಿತರಿದ್ದರು