
ಲಕ್ಷೆ÷್ಮÃಶ್ವರ,ಜೂ೫: ಪಟ್ಟಣದಲ್ಲಿ ನೀರಿನ ಹಾಹಾಕಾರವಿದ್ದು ಪುರಸಭೆಯವರು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ದಿಡೀರನೆ ಪುರಸಭೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು.
ಕಳೆದ ಅನೇಕ ದಿನಗಳಿಂದ ೧೭ನೇ ವಾರ್ಡು ಸೇರಿದಂತೆ ಪಟ್ಟಣದಲ್ಲಿ ಯಾವ ಪ್ರದೇಶದಲ್ಲೂ ನೀರು ಸಮರ್ಪಕವಾಗಿ ಸಿಗುತ್ತಿಲ್ಲ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಪುರಸಭೆಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪುರಸಭೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆಗಿಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ತಾಲೂಕ ಘಟಕದ ಅಧ್ಯಕ್ಷ ಲೋಕೇಶ್ ಸುತಾರ್ ಅವರು, ಈ ತಿಂಗಳು ನೀರು ಬಿಟ್ಟಿಲ್ಲ ಈ ತಿಂಗಳ ನೀರಿನ ಕರವನ್ನು ಮನ್ನಾ ಮಾಡಬೇಕು ಮತ್ತು ಕೂಡಲೇ ಜನರಿಗೆ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಕೈಗೊಳ್ಳಬೇಕು ಇಲ್ಲದಿದ್ದರೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೀಗೆ ಪಟ್ಟು ಹಿಡಿದರು.
ಈ ವೇಳೆ ಮುಖ್ಯಾಧಿಕಾರಿಗಳು ವಾಸ್ತವ ಸತ್ಯವನ್ನು ಪ್ರತಿಭಟನಾ ಕಾರರಿಗೆ ತಿಳಿಸಿ ಅತ್ಯಂತ ಹಳೆಯದಾದ ಪೈಪುಗಳಾಗಿರುವುದರಿಂದ ಅಲ್ಲಲ್ಲಿ ನೀರು ಪೂರೈಕೆಗೆ ಅಡ್ಡಿ ಉಂಟಾಗಿದೆ. ಈ ನಿಟ್ಟಿನಲ್ಲಿ ಪುರಸಭೆ ಹೊಸ ಪೈಪ್ ಅಳವಡಿಕೆಗೆ ಕ್ರಮ ಕೈಗೊಂಡಿದ್ದು ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳದಾಗಿ ತಿಳಿಸಿದರು.
ನಂತರ ಪ್ರತಿಭಟನಾಕಾರರು ಮುಖ್ಯ ಅಧಿಕಾರಿಗಳ ಭರವಸೆಯಂತೆ ಒಪ್ಪಿಕೊಂಡು ಶಾಂತಿಯುತವಾಗಿ ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ಪ್ರವೀಣ್ ಗಾಣಿಗೇರ್ ಬಸವರಾಜ ಮಲ್ಲೂರ ಅರುಣ ಮೆಕ್ಕಿ ಗಂಗಾಧರ ಕರಜಕ್ಕಣ್ಣವರ ಗಂಗಾಧರ ಕೊಂಚಿಗೇರಿ ಮಠ ಮಂಜುನಾಥ್ ಕೊಡಳ್ಳಿ ಫಕ್ಕಿರೇಶ್ ಅಣ್ಣಿಗೇರಿ ಚನ್ನಬಸಯ್ಯ ಗಡ್ಡ ದೇವರ ಮಠ ಸಾವಿತ್ರಿ ಅತ್ತಿಗೇರಿ ಹುಲಿಗೆಮ್ಮ ಮೆವುಂಡಿ ಜಯಮ್ಮ ತುಪ್ಪದ ಲಕ್ಷ÷್ಮಕ್ಕ ಪಶುಪತಿಹಾಳ ರೇಷ್ಮಾ ಜಾದವ್ ಸಾವಕ್ಕ ಮುಳ್ಳಳ್ಳಿ ಸೇರಿದಂತೆ ಅನೇಕರಿದ್ದರು.
























