Home ಜಿಲ್ಲೆ ಕಲಬುರಗಿ ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಪರಿಸರ ಸಂರಕ್ಷಣೆ ಎಲ್ಲರ ಹೊಣೆ

ಕಲಬುರಗಿ :ಜೂ.5: ಗಿಡ-ಮರಗಳ ಕೊರತೆಯಿಂದ ಪರಿಸರದಲ್ಲಿ ಏರು-ಪೇರಾಗುತ್ತಿದೆ. ಪರಿಸರ ಉಳಿದರೆ ಮಾತ್ರ ಎಲ್ಲಾ ಜೀವಿಗಳು ಉಳಿಯಲು ಸಾಧ್ಯವಿದೆ. ಹಸಿರೇ ಉಸಿರಾಗಿರುವುದುರಿಂದ ಎಲ್ಲೆಡೆ ಗಿಡಗಳನ್ನು ನೆಟ್ಟು, ಅವುಗಳನ್ನು ಮಗುವಿನಂತೆ ಪೆÇೀಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗಿದೆ ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ದೊಡ್ಡಮನಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಶುಕ್ರವಾರ ಜರುಗಿದ “ವಿಶ್ವ ಪರಿಸರ ದಿನಾಚರಣೆ”ಯನ್ನು ಗಿಡ ನೆಡುವ ಮುಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮಿ, ಉಪನ್ಯಾಸಕ ಶಂಕರ ಹೊಸದೊಡ್ಡಿ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ, ಗಿಡ ನೆಡುವ ಕಾರ್ಯ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ಇದು ನಿರಂತರವಾಗಬೇಕು. ಹಸಿರೇ, ಉಸಿರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಅಸ್ಮಾ ಜಬೀನ್, ಮಲ್ಲಪ್ಪ ರಂಜಣಗಿ, ಕೀರ್ತಿ ಭುಜುರಕೆ, ದುಂಡಪ್ಪ ಯರಗೋಳ್, ನಿಯೋಜಿತ ಉಪನ್ಯಾಸಕಿ ಸುನಿತಾ ಶೆಟ್ಟಿ, ಪ್ರದಸ ಪ್ರೇಮಾ ಸುರಪುರ, ಅತಿಥಿ ಉಪನ್ಯಾಸಕರು, ಎನ್.ಎಸ್.ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.