Home ಜಿಲ್ಲೆ ಕಲಬುರಗಿ ರಸಗೊಬ್ಬರ ಅಕ್ರಮ ಸಂಗ್ರಹ: ಉನ್ನತಮಟ್ಟದ ತನಿಖೆಗೆ ಆಗ್ರಹ

ರಸಗೊಬ್ಬರ ಅಕ್ರಮ ಸಂಗ್ರಹ: ಉನ್ನತಮಟ್ಟದ ತನಿಖೆಗೆ ಆಗ್ರಹ

ಕಲಬುರಗಿ,ಸೆ.2: ನಗರದಲ್ಲಿ ಅಕ್ರಮವಾಗಿ ಯೂರಿಯಾ ರಸಗೊಬ್ಬರ ಸಂಗ್ರಹಿಸಿ, ಕೃತಕ ಅಭಾವ ಸೃಷ್ಟಿಸಿ ನೆರೆ ರಾಜ್ಯಗಳಿಗೆ ಕೆಮಿಕಲ್ ತಯಾರಿಕೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆನ್ನುವಂತಹ ಪ್ರಬಲ ಆರೋಪ ಬಂದಿದ್ದು ಆರೋಪಿತರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಅವರು ಕೃಷಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಆ. 23 ರಂದು ಕಲಬುರಗಿ ನಗರದ ಕಪನೂರು ಕೈಗಾರಿಕಾ ಪ್ರದೇಶದಲ್ಲಿರುವ ಒಂದು ಗೋದಾಮಿನ ಮೇಲೆ ಶ್ರೀ ರಾಮಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾಧಿ ಅವರು ನೀಡಿದ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೆÇಲೀಸರು ಜಂಟಿ ದಾಳಿ ನಡೆಸಿ, ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ಬೃಹತ್ ಪ್ರಮಾಣದ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದು, ಸಬ್ ಅರ್ಬನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದಲ್ಲಿ ಯಾವಯಾವ ಮೂಲಗಳಿಂದ (ಆಗ್ರೋಗಳಿಂದ) ಯೂರಿಯಾ ರಸಗೊಬ್ಬರ ಪಡೆಯುತ್ತಿದ್ದರು ಎನ್ನುವುದು ಮುಖ್ಯವಾಗಿದೆ. ಎಕೆಂದರೆ ಯೂರಿಯಾ ರಸಗೊಬ್ಬರದ ಮಾರಾಟ ಮಾರ್ಗವು ಪಾರದರ್ಶಕವು ಹಾಗೂ ಕಠಿಣ ಮಾರ್ಗದ ಮಾರಾಟ ಮೂಲಕ ಅನ್ನದಾತರಿಗೆ ತಲುಪಿಸುವ ಕೆಲಸವನ್ನು ಕೇಂದ್ರಸರ್ಕಾರ ಮಾಡ್ತಿದೆ.ಇಂತಹ ಕಠಿಣ ಮಾರ್ಗಗಳಿದ್ದರೂ ನೈಜ ರೈತರಿಗೆ ಸಿಗದಂತ ರಸಗೊಬ್ಬರವು ಕಾಳ ದಂಧೆ ಕೋರರಿಗೆ ಸಿಕ್ಕಿದು ಹೇಗೆ? ಇಂತಹ ಕಾಳಸಂತೆಯ ಜಾಲದಿಂದಾಗಿ ನೈಜ ರೈತರಿಗೆ ಗೊಬ್ಬರದ ಕೊರತೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಎಲ್ಲಾ ಗೋದಾಮುಗಳ ತನಿಖೆ ನಡೆಸಬೇಕು.ಹಗರಣಕ್ಕೆ ಸಂಬಂದಿಸಿದಂತೆ ಸಿಬಿಐ ತನಿಖೆ ಮಾಡಿಸಿ ಅನ್ನದಾತರಿಗೆ ನೀಡುವ 70 ಸಾವಿರ ಲಕ್ಷ ಕೋಟಿ ಸಬ್ಸಿಡಿ ನೈಜ ರೈತರಿಗೆ ಸಿಗದೆ ಕಾಳ ದಂಧೆಕೋರರ ಪಾಲಾಗುತ್ತಿರೋದು ದುರಂತ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣಶಿ.ಕ್ಷೆಯಾಗುವಂತೆ ಹಾಗೂ ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರವು ಮಾಡಬೇಕಾಗಿದೆ.ನಿರ್ಲಕ್ಷ ತೋರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ