
ಕಲಬುರಗಿ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಮನಸ್ಥಿತಿ ಬದಲಾದರೆ ಪರಿಸ್ಥಿತಿ ಬದಲಾಗಬಲ್ಲದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವನಗೌಡ ಪಾಟೀಲ ಹೇಳಿದರು.
ನಗರದ ಸ್ಟೇಶನ್ ಬಜಾರ್ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಗತ, ಎನ್‍ಎಸ್‍ಎಸ್ ಕಾರ್ಯ ಚಟುವಟಿಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸು, ಸಾಧನೆ ಸುಮ್ಮನೆ ಬರುವುದಿಲ್ಲ. ಅದಕ್ಕೆ ಸತತ ಪ್ರಯತ್ನ ಅಗತ್ಯ ಎಂದು ತಿಳಿಸಿದರು.
ಪಠ್ಯದ ಜೊತೆಗೆ ನೈತಿಕ ಶಿಕ್ಷಣ ಕೂಡ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಶಿಕ್ಷಣಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ-ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಮನುಷ್ಯನಿಗೆ ಅಕ್ಷರ, ಅನ್ನ ಹಾಗೂ ಆಶ್ರಯ ಬೇಕಿದ್ದರೆ ಶಿಕ್ಷಣ ಬಹಳ ಅಗತ್ಯವಾಗಿದ್ದು, ಶಿಕ್ಷಣದಿಂದ ಏನೆಲ್ಲವೂ ಸಾಧ್ಯ. ಮಾತೃಭಾಷೆಯ ಮೇಲಿನ ಹಿಡಿತ ಇಂಗ್ಲಿಷ್ ಕಲಿಕೆಗೆ ಸಹಾಯ ಮಾಡುತ್ತದೆ. ಮೊಬೈಲ್ ಬಳಕೆ ಅಭ್ಯಾಸಕ್ಕೆ ಎಷ್ಟು ಬೇಕೋ ಅಷ್ಟೇ ಬಳಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಸುಜಾತಾ ಎಸ್. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ. ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಸಿದ್ಧಲಿಂಗಪ್ಪ ಪೂಜಾರಿ ಸ್ವಾಗತಿಸಿದರು.
ಉಪನ್ಯಾಸಕರಾದ ಪಾಂಡು ರಾಠೋಡ್ ನಿರೂಪಿಸಿದರು ಪ್ರಜ್ಞಾ ಹೋಳ್ಕರ್ ಪ್ರಾರ್ಥಿಸಿದರು.
ಹಿರಿಯ ಉಪನ್ಯಾಸಕರಾದ ಡಾ.ಚಂದ್ರಶೇಖರ ದೊಡ್ಡಮನಿ,ಬಲರಾಮ್ ಚೌವ್ಹಾಣ . ಡಾ. ಶಿವಪ್ಪ ಎಚ್. ಹುಣಸ್ಯಾಳ, ಶ್ರೀಶೈಲ ಖರ್ದ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರೇಣುಕಾ ಚಿಕ್ಕಮೇಟಿ, ಮಹಿಬೂಬ್ ನದಾಫ್, ಶ್ರೀನಿವಾಸ ಐಜಿ, ರೋಹಿಣಿ ಕೆ.ಎಸ್,ರಾಜೇಶ್ ಕೆ.ಜೆ.,ನೇಸರ್ ಬೀಳಿಗಿಮಠ, ಲಕ್ಷ್ಮಿಕಾಂತ್ ಡೋಳೆ, ಸುಮಾ, ನಿರ್ಮಲಾ ಪವಾರ್, ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





























