Home ಜಿಲ್ಲೆ ಕಲಬುರಗಿ ಪತ್ನಿ ಬೇಗ ಬರಲಿಲ್ಲ ಎಂದು ಪತಿ ಆತ್ಮಹತ್ಯೆ

ಪತ್ನಿ ಬೇಗ ಬರಲಿಲ್ಲ ಎಂದು ಪತಿ ಆತ್ಮಹತ್ಯೆ

ಕಲಬುರಗಿ,ಮೇ.28-ಅಣ್ಣನ ಮನೆಯ ಗೃಹ ಪ್ರವೇಶಕ್ಕೆ ಹೋದ ಪತ್ನಿ ಮರಳಿ ಬರಲು ತಡಮಾಡಿದಕ್ಕೆ ಕೋಪಗೊಂಡು ಪತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಂತಾ ಕಾಲೋನಿಯಲ್ಲಿ ನಡೆದಿದೆ.
ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿದ್ದ ಶಿವಕುಮಾರ ತಂದೆ ಭಾಗಪ್ಪ ಜೇಡೆಕರ್ (30) ಆತ್ಮಹತ್ಯೆ ಮಾಡಿಕೊಂಡವರು.
ಪತ್ನಿ ಚಂದ್ರಕಲಾ ಅವರು ಮೇ.8 ರಂದು ಮಳಳೇಡದಲ್ಲಿ ತಮ್ಮ ಅಣ್ಣ ಸಂತೋಷ ಅವರ ಗೃಹ ಪ್ರವೇಶ ಇದ್ದ ಪ್ರಯುಕ್ತ ಮಕ್ಕಳೊಂದಿಗೆ ಮಳಖೇಡಗೆ ಹೋಗಿದ್ದರು. ಕಾರ್ಯಕ್ರಮ ಮುಗಿದ ಮೇಲೆ ಬರುವಂತೆ ಪತಿ ಶಿವಕುಮಾರ ತಿಳಿಸಿದ್ದ. ಮಕ್ಕಳ ಶಾಲೆಗೆ ರಜೆ ಇದ್ದ ಪ್ರಯುಕ್ತ ಅಣ್ಣನ ಮನೆಯಲ್ಲಿ ಸ್ವಲ್ಪ ದಿನ ಇದ್ದು ಬರುವುದಾಗಿ ಚಂದ್ರಕಲಾ ತಿಳಿಸಿದ್ದರು. ಮಳಖೇಡದಿಂದ ಪತ್ನಿ ಬೇಗ ಬರಲಿಲ್ಲ ಎಂಬ ಕಾರಣಕ್ಕೆ ಶಿವಕುಮಾರ ಕಾಂತಾ ಕಾಲೋನಿಯಲ್ಲಿರುವ ಬಾಡಿಗೆ ಮನೆಯ ಛತ್ತಿನ ಕೊಂಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರಗೆ ಕುಡಿತದ ಚಟವು ಇತ್ತು ಮತ್ತು ಆಗಾಗ ಪತ್ನಿಯೊಂದಿಗೆ ತಂಟೆ-ತಕರಾರು ತೆಗೆಯುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.