
ಕಲಬುರಗಿ,ಏ.28-ಬಸವ ಪ್ರಕಾಶನ ವತಿಯಿಂದ ನೀಡಲ್ಪಡುವ ಲಿಂ.ಶ್ರೀಮತಿ ಬಸಮ್ಮ ಬಿ.ಕೊನೇಕ ಅವರ ಪುಣ್ಯ ಸ್ಮರಣೋತ್ಸವ ನಿಮಿತ್ಯ ನೀಡಲ್ಪಡುವ 2026 ನೇ ಸಾಲಿನ ರಾಜ್ಯ ಮಟ್ಟದ ಬಸವ ಸಿರಿ ಪ್ರಶಸ್ತಿಗೆ ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಮಹಾಸ್ವಾಮಿಗಳು ಆಯ್ಕೆಯಾಗಿದ್ದಾರೆ.
ಬಸವತತ್ವ ಪ್ರಚಾರ ಮಾಡಿದ ಶಿವಾನಂದ ಮಹಾಸ್ವಾಮಿಗಳು ಬಸವ ತತ್ವ ಅನುಯಾಯಿಯಾಗಿ ಭಾರತ ದೇಶದ ತುಂಬಾ ಬಸವ ಪ್ರಸಾರ ಮಾಡಿದವರು. ಬೀದರ ಜಿಲ್ಲೆಯ ಪ್ರಥಮ ಆಧುನಿಕ ವಚನಕಾರರು, ಕವಿಗಳು, ಸಾಹಿತ್ಯ ಮತ್ತು ಬಸವ ತತ್ವ ಸೇವೆಗೆ ಈ ಪ್ರಶಸ್ತಿ ಸಂದಿದೆ. ಹನ್ನೊಂದು ಸಾವಿರ ನಗದು ಮತ್ತು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಪ್ರದಾನ ಮಾಡಲಾಗುವುದು.
ಮೇ.1 ರಂದು ಬೆಳಿಗ್ಗೆ 10 ಗಂಟೆಗೆ ಸೂಪರ ಮಾರ್ಕೆಟನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಸಭಾoಗಣದಲ್ಲಿ ಹಮ್ಮಿಕೊಂಡ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಆಹ್ವಾನ ನೀಡಲಾಯಿತು ಎಂದು ಬಸವರಾಜ ಕೊನೇಕ ಅವರು ತಿಳಿಸಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ.ಆರ್.ಆರ್.ಬಿರಾದಾರ, ಡಾ.ಸಿ.ಆರ್.ಚಂದ್ರಶೇಖರ ಅವರು ನಾಲ್ಕು ಹಾಗೂ ಶರಣಬಸಪ್ಪ ವಡ್ಡನಕೇರಿ ಸಂಪಾದಿತ ಕಾಯಕ ಶರಣರು ಸೇರಿದಂತೆ ಐದು ಕೃತಿಗಳ ಲೋಕಾರ್ಪಣೆ ಮಾಡಿ ಪ್ರಶಸ್ತಿ ಪ್ರದಾನ ಮಡುವರು. ಕೃತಿಗಳ ಪರಿಚಯವನ್ನು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾಡುವರು. ಮುಖ್ಯ ಅತಿಥಿ ಯಾಗಿ ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ ಆಗಮಿಸುವರು.ಪೆÇ್ರ.ಶಿವರಾಜ ಪಾಟೀಲ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕ ಡಾ.ಬಸವರಾಜ ಕೊನೇಕ ವಹಿಸುವರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ಮೂರನೇ ರಾಂಕ್ ಪಡೆದ ಕುಮಾರ ಗಣೇಶ ಸಹದೇವ ಬೋಸ್ಲೆ ಹಾಗೂ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲನೆ ರಾಂಕ್ ಪಡೆದ ಕುಮಾರಿ ಸೃಷ್ಟಿ ಪಾಟೀಲ ಅವರನ್ನು ಗೌರವಿಸಲಾಗುತ್ತಿದೆ ಎಂದು ಸಿದ್ದಲಿಂಗ ಬಿ. ಕೊನೆಕ್ ಹಾಗೂ ಶರಣು ಬಿ. ಕೊನೆಕ್ ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















