Home ಜಿಲ್ಲೆ ಚುನಾವಣೆ ಕರ್ತವ್ಯ ಜವಾಬ್ದಾರಿಯಿಂದ ನಿರ್ವಹಿಸಿ

ಚುನಾವಣೆ ಕರ್ತವ್ಯ ಜವಾಬ್ದಾರಿಯಿಂದ ನಿರ್ವಹಿಸಿ


ಗದಗ,ಅ.೧೫:ಅಕ್ಟೋಬರ್ ೧೪: ಕರ್ನಾಟಕ ಪಶ್ಚಿಮ ಪಧವಿದರ ದೈವಾರ್ಷಿಕ ಚುನಾವಣಾ೨೦೨೬ ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ, ಪಾರದರ್ಶಕವಾಗಿ ಮತ್ತು ಯಾವುದೇ ಲೋಪದೋಷಗಳಿಲ್ಲದೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-೨೦೨೬ರ ಚುನಾವಣಾ ಪ್ರಿಸೈಡಿಂಗ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ತರಬೇತಿ ಕಾರ್ಯಕ್ರಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಚುನಾವಣಾ ಕಾರ್ಯದಲ್ಲಿ ಅಧಿಕಾರಿಗಳು ನಿಖರತೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಪ್ರಕ್ರಿಯೆಯಲ್ಲಿ ಆಚಾತುರ್ಯವಾಗದಂತೆ ಕರ್ತವ್ಯ ನಿರ್ವಹಿಸಬೇಕು.
ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳ ಜವಾಬ್ದಾರಿ: ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳು ತಮ್ಮ ಜವಾಬ್ದಾರಿಗಳು ಮತ್ತು ಕರ್ತವ್ಯಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಹೇಳಿಕೊಡುವ ಪ್ರತಿಯೊಂದು ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು. ಮತದಾನದ ಅಂಕಿ-ಅAಶಗಳು ಹಾಗೂ ವರದಿಗಳನ್ನು ಸಿದ್ಧಪಡಿಸುವಾಗ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಿಖರವಾದ ಲೆಕ್ಕಾಚಾರವಿರಬೇಕು ಎಂದು ಹೇಳಿದರು.


ಚುನಾವಣಾ ಪ್ರಕ್ರಿಯೆಯಲ್ಲಿ ಸಮಯಪಾಲನೆ ಅತ್ಯಂತ ಮುಖ್ಯವಾದುದು. ಮಾಹಿತಿಯನ್ನು ಕಾಲಕಾಲಕ್ಕೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಎಚ್ಚರಿಸಿದರು.
ಕ್ಷೇತ್ರವಾರು ಶಾಸಕಾಂಗ ನಿಯಮಗಳು ಹಾಗೂ ಮತದಾನ ಕೇಂದ್ರಗಳ ನಿರ್ವಹಣೆಗೆ ಸಂಬAಧಿಸಿದAತೆ ಸಭೆಯಲ್ಲಿ ವಿಸ್ತöÈತವಾಗಿ ಚರ್ಚಿಸಲಾಯಿತು. ಎಲ್ಲಾ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಚುನಾವಣೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.


ಮಾಸ್ಟರ್ ಟ್ರೆöÊನರ್ ಬಿ.ಜಿ. ಗಿರೀತಿಮ್ಮಣ್ಣವರ ಚುನಾವಣಾ ತರಬೇತಿ ಕುರಿತು ಮಾತನಾಡಿ ಈ ಬಾರಿ ಇವಿಎಂ (ಇಗಿಒ) ಬದಲಿಗೆ ಮತಪತ್ರ (ಃಚಿಟಟoಣ Pಚಿಠಿeಡಿ) ಹಾಗೂ ಮತಪೆಟ್ಟಿಗೆಯ (ಃಚಿಟಟoಣ ಃox) ಮೂಲಕ ಚುನಾವಣೆ ನಡೆಯಲಿದೆ. ಈ ಪ್ರಕ್ರಿಯೆಯು ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು, ಸಿಬ್ಬಂದಿಗಳು ಇದರ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-೨೦೨೬ರ ಸಿದ್ಧತೆಗಳ ಭಾಗವಾಗಿ ಚುನಾವಣಾ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು ಎಂದರು.
ತರಬೇತಿಯ ಹಂತಗಳು:


ಮೊದಲ ಹಂತದ ತರಬೇತಿ: ಇದು ಪ್ರಾಥಮಿಕ ತರಬೇತಿಯಾಗಿದ್ದು, ಕೇವಲ ಪ್ರಿಸೈಡಿಂಗ್ ಆಫೀಸರ್ (Poಟಟiಟಿg ಔಜಿಜಿiಛಿeಡಿ / Pಡಿesiಜiಟಿg ಔಜಿಜಿiಛಿeಡಿ) ಮಟ್ಟದ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ.
ಎರಡನೇ ಹಂತದ ತರಬೇತಿ (ಎಕ್ಸಾಸ್ಟಿವ್ ಟ್ರೆöÊನಿಂಗ್): ಇದು ತಂಡವಾರು ನಡೆಯುವ ತರಬೇತಿಯಾಗಿದ್ದು, ಪ್ರಿಸೈಡಿಂಗ್ ಆಫೀಸರ್ ಸೇರಿದಂತೆ ಪೋಲಿಂಗ್ ಅಧಿಕಾರಿಗಳ ಸಂಪೂರ್ಣ ತಂಡವು ಒಟ್ಟಾಗಿ ಪಾಲ್ಗೊಳ್ಳಬೇಕು. ಈ ದಿನ ಕಾನೂನುಬದ್ಧ ದಾಖಲೆಗಳು, ಸ್ಟಾ÷್ಯಚುಟರಿ ಮತ್ತು ನಾನ್-ಸ್ಟಾ÷್ಯಚುಟರಿ ಕವರ್‌ಗಳು ಹಾಗೂ ಇತರೆ ಸಾಮಗ್ರಿಗಳ ಕುರಿತು ಸಮಗ್ರವಾಗಿ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.
ಸಮಯಪಾಲನೆ ಮತ್ತು ಜವಾಬ್ದಾರಿ: ಚುನಾವಣಾ ಕರ್ತವ್ಯದಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಯೂ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಮತದಾನದ ದಿನದಂದು ಬೆಳಿಗ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮತಗಟ್ಟೆಗೆ ತಲುಪಿ, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.


ಚುನಾವಣಾ ಪ್ರಕ್ರಿಯೆಯು ಯಶಸ್ವಿಯಾಗಲು ೧+೩ ಮಾದರಿಯ ಸಿಬ್ಬಂದಿ ತಂಡಗಳ (ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಮತ್ತು ಮೂವರು ಪೋಲಿಂಗ್ ಅಧಿಕಾರಿಗಳು) ಪರಸ್ಪರ ಸಹಕಾರ ಹಾಗೂ ಸಮನ್ವಯತೆ ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು.
ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ, ನಿಖರತೆ ಮತ್ತು ಪಾರದರ್ಶಕತೆಯಿಂದ ಚುನಾವಣೆ ನಡೆಸಲು ಎಲ್ಲಾ ಸಿಬ್ಬಂದಿ ಸಿದ್ಧರಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.


ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೆöÊವಾರ್ಷಿಕ ಚುನಾವಣೆ-೨೦೨೬ರ ಸಿದ್ಧತೆಯ ಭಾಗವಾಗಿ ನಡೆದ ತರಬೇತಿ ಸಭೆಯಲ್ಲಿ, ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪ್ರಥಮ, ದ್ವಿತೀಯ ಮತ್ತು ತೃತೀಯ ಪೋಲಿಂಗ್ ಅಧಿಕಾರಿಗಳ (Poಟಟiಟಿg ಔಜಿಜಿiಛಿeಡಿs) ಪಾತ್ರ ಹಾಗೂ ಜವಾಬ್ದಾರಿಗಳ ಕುರಿತು ವಿಸ್ತöÈತವಾಗಿ ವಿವರಿಸಲಾಯಿತು. ಈ ಬಾರಿ ಇವಿಎಂ ಬದಲಿಗೆ ಮತಪತ್ರಗಳ ಮೂಲಕ ಚುನಾವಣೆ ನಡೆಯುತ್ತಿರುವುದರಿಂದ, ಅಧಿಕಾರಿಗಳು ಪ್ರತಿಯೊಂದು ಹಂತದಲ್ಲೂ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.


ಮತಗಟ್ಟೆಯಲ್ಲಿ ನೋಟಾ (ಓಔಖಿಂ) ಮತ್ತು ಇತರ ಸೌಲಭ್ಯಗಳು: ಈ ಬಾರಿ ಚುನಾವಣೆಯಲ್ಲಿ ನೋಟಾ ಲಭ್ಯವಿಲ್ಲದ ಕಾರಣ, ಮತದಾರರು ಕಡ್ಡಾಯವಾಗಿ ಲಭ್ಯವಿರುವ ಅಭ್ಯರ್ಥಿಗಳಲ್ಲಿ ಯಾರಿಗಾದರೂ ಮತ ಚಲಾಯಿಸಬೇಕು ಅಥವಾ ನಿಯಮಾನುಸಾರ ಕ್ರಮ ವಹಿಸಬೇಕು. ಮತಗಟ್ಟೆಯ ಸುತ್ತಮುತ್ತ ಕಟ್ಟುನಿಟ್ಟಿನ ಭದ್ರತೆ ಹಾಗೂ ಶಾಂತಿ ಕಾಪಾಡಲು ಎಲ್ಲಾ ಸಿಬ್ಬಂದಿ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಅಕ್ಟೋಬರ್ ೨೩ ರಂದು ಬೆಳಗ್ಗೆ ೮ ಗಂಟೆಯಿAದ ಸಂಜೆ ೪ ಗಂಟೆ

ಯವರೆಗೆ ಮತದಾನ ನಡೆಯಲಿದೆ. ಈ ತರಬೇತಿ ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ, ಮತದಾನದ ದಿನದ ನಿರ್ವಹಣೆ ಹಾಗೂ ಅಧಿಕಾರಿಗಳು ಜವಾಬ್ದಾರಿಗಳ ಕುರಿತು ವಿಸ್ತöÈತವಾಗಿ ಸಂಪನ್ಮೂಲ ವ್ಯಕ್ತಿಗಳಾದ ಬಿ.ಜಿ. ಗಿರಿತಿಮ್ಮಣ್ಣವರ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಮ್, ಆಹಾರ ಇಲಾಖೆಯ ಉಪ ನಿರ್ದೇಶಕ ಎಸ್. ಡಿ. ಪಾಟೀಲ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ಡಾ. ನಂದಾ ಹಣಬರಹಟ್ಟಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.