Home ಜಿಲ್ಲೆ ಕಲಬುರಗಿ ಮನೆ ಬೀಗ ಮುರಿದು 2.96 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಮನೆ ಬೀಗ ಮುರಿದು 2.96 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಜೂ.4-ಮನೆಯವರು ಮನೆಯ ಮಾಳಿಗೆ ಮೇಲೆ ಮಲಗಿದ್ದಾಗ ಕಳ್ಳರು ಮನೆ ಬೀಗ ಮುರಿದು 2,96,150 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದ ಶಹಾಬಜಾರದ ಸುವರ್ಣ ನಗರದಲ್ಲಿ ನಡೆದಿದೆ.
ಈರಣ್ಣ ದಂಡಿ ಎಂಬುವವರ ಮನೆ ಬೀಗ ಮುರಿದು ಕಳ್ಳರು ಅವರ ಮಗಳು ಶಂಕ್ರುಬಾಯಿ ಅವರಿಗೆ ಸಂಬಂಧಿಸಿದ 24 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕಿವಿಯ ಹೂವುಗಳು, 8 ಸಾವಿರ ರೂ.ಮೌಲ್ಯದ 1 ಗ್ರಂಬಾರದ ಕಿವಿಯೋಲೆ, 8 ಸಾವಿರ ರೂ.ಮೌಲ್ಯದ ಇನ್ನೊಂದು ಕಿವಿಯೋಲೆ, 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಲಾಕೆಟ್, 24 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಕೈಗಡಗ, 8 ಸಾವಿರ ರೂ.ಮೌಲ್ಯದ 1 ಗ್ರಾಂ.ಬಂಗಾರದ ಕಿವಿಯ ಮುರು, 8 ಸಾವಿರ ರೂ.ಮೌಲ್ಯದ 1 ಗ್ರಾಂ.ಬಂಗಾರದ ಕಿವಿಯ ಮಾಟಿ, 16 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ತಾಳಿಯ ಗುಂಡುಗಳು, 2450 ರೂ.ಮೌಲ್ಯದ 35 ಗ್ರಾಂ.ಬೆಳ್ಳಿಯ ಹಾಲಗಡಗ, 700 ರೂ.ಮೌಲ್ಯದ 10 ಗ್ರಾಂ.ಬೆಳ್ಳಿಯ ಕೈಗಡಗ, 4900 ರೂ.ಮೌಲ್ಯದ 70 ಗ್ರಾಂ.ಬೆಳ್ಳಿಯ ಚೈನಾ, 2100 ರೂ.ಮೌಲ್ಯದ 30 ಗ್ರಾಂ.ಬೆಳ್ಳಿಯ ಕಾಲುಚೈನ, ಈರಣ್ಣ ದಂಡಿ ಅವರಿಗೆ ಸೇರಿದ 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಸುತ್ತುಂಗುರ, 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ತಾಳಿಸೆಟ್, 12000 ರೂ.ಮೌಲ್ಯದ 1.5 ಗ್ರಾಂ.ಬಂಗಾರದ ಕಿವಿಯೋಲೆ, 12 ಸಾವಿರ ರೂ.ಮೌಲ್ಯದ ಇನ್ನೊಂದು ಕಿವಿಯೋಲೆ ಸೇರಿ 280 ಲಕ್ಷ ರೂ.ಮೌಲ್ಯದ 35 ಗ್ರಾಂ.ಬಂಗಾರದ ಆಭರಣ, 10150 ರೂ.ಮೌಲ್ಯದ 14.5 ತೊಲೆ ಬೆಳ್ಳಿ ಆಭರಣ, 6 ಸಾವಿರ ರೂ.ನಗದು ಸೇರಿ 2,96,150 ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ. ಈರಣ್ಣ ದಂಡಿ ಅವರು ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.