
ಬಾಗಲಕೋಟೆ, ಜೂ.14:ಬಾಗಲಕೋಟೆಯ ನವನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆ ಕಳ್ಳತನ ಹಾಗೂ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ನವನಗರ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ಒಟ್ಟು ?12,49,400 ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ಹಾಗೂ 6 ಮೋಟಾರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ನವನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಜಿಲ್ಲಾ ಪೆÇಲೀಸ್ ಅಧೀಕ್ಷಕ ಸಿದ್ದಾರ್ಥ ಗೊಯೇಲ್ ಹಾಗೂ ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಎಂ. ಜಗದೀಶ್ ಅವರ ಸೂಚನೆಯಂತೆ ವಿಶೇಷ ತಂಡ ರಚಿಸಲಾಗಿತ್ತು.
ಡಿಎಸ್‍ಪಿ ಗಜಾನನ ವಾಮನ ಸುತಾರ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಅಶೋಕ ಚವ್ಹಾಣ, ಪಿಎಸ್‍ಐ ಜಿ.ಜಿ. ಬಿರಾದಾರ ಹಾಗೂ ಎನ್.ಪಿ. ನಿಂಗನೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ತನಿಖಾ ತಂಡವು ಆರೋಪಿಗಳನ್ನು ಪತ್ತೆಹಚ್ಚಿ, ಕಳುವಾಗಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ 6 ಮೋಟಾರ್ ಸೈಕಲ್‍ಗಳನ್ನು ಸಹ ಜಪ್ತಿ ಮಾಡಿದೆ. ಈ ಮೂಲಕ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ಸು ಸಾಧಿಸಿದೆ.
ಕಾರ್ಯಾಚರಣೆಯಲ್ಲಿ ಪೆÇಲೀಸ್ ಸಿಬ್ಬಂದಿಗಳಾದ ಪ್ರಕಾಶ ನಾಯಕ, ಶ್ರೀಶೈಲ ನಡಗೇರಿ, ಎಸ್.ಬಿ. ನಿಂಗೊಳ್ಳಿ, ಎಂ.ಎಂ. ಬೆಳ್ಳುಬ್ಬಿ, ಮಂಜುನಾಥ ಸಂಗೊಂದಿ, ಕೆ.ಎನ್. ದಂದರಗಿ, ಲಾಲಸಾಬ ನಧಾಫ್, ವೈ.ಎಚ್. ಭಗವತಿ, ಲಕ್ಷ್ಮಣ ತೆಗ್ಗಿ, ನಾಶೀರ್ ಬೀಳಗಿ, ಮುತ್ತು ಬಿಸನಾಳ ಹಾಗೂ ಬಸವರಾಜ ಜಗಲಿ ಭಾಗವಹಿಸಿದ್ದರು.
ತಂಡದ ಕಾರ್ಯಕ್ಷಮತೆಯನ್ನು ಜಿಲ್ಲಾ ಪೆÇಲೀಸ್ ಅಧೀಕ್ಷಕ ಸಿದ್ದಾರ್ಥ ಗೊಯೇಲ್ ಪ್ರಶಂಸಿಸಿದ್ದಾರೆ.


























