Home ಜಿಲ್ಲೆ 26ಕ್ಕೆ ಹೇಮ-ವೇಮ ಸಮುದಾಯ ಭವನ ಉದ್ಘಾಟನೆ

26ಕ್ಕೆ ಹೇಮ-ವೇಮ ಸಮುದಾಯ ಭವನ ಉದ್ಘಾಟನೆ

ಬೀದರ್: ಬೀದರನ ಹೇಮರೆಡ್ಡಿ ಮಲ್ಲಮ್ಮ ಮಂದಿರ ಆವರಣದಲ್ಲಿ ನಿರ್ಮಿಸಲಾದ ಹೇಮ-ವೇಮ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಆಗಸ್ಟ್ 26 ರಂದು ನಡೆಯಲಿದೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ಹೇಳಿದರು.
ಔರಾದ್ ಪಟ್ಟಣದಲ್ಲಿ ಶನಿವಾರ ನಡೆದ ತಾಲ್ಲೂಕು ರೆಡ್ಡಿ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.
ರೆಡ್ಡಿ ಸಮಾಜದ ಗುರುಗಳು, ರಾಜಕೀಯ ಗಣ್ಯರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿನ ರೆಡ್ಡಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ರೆಡ್ಡಿ ಸಮಾಜದ ಉಪಾಧ್ಯಕ್ಷ ರಾಜೇಂದ್ರ ರೆಡ್ಡಿ ಶೇರಿಕಾರ್, ಪ್ರಮುಖರಾದ ಓಂ ರೆಡ್ಡಿ, ಬಾಬು ರೆಡ್ಡಿ, ಸಂಜು ರೆಡ್ಡಿ ಜಂಪಾ, ನರಸಿಂಹ ರೆಡ್ಡಿ, ವಿಜಯ ರೆಡ್ಡಿ, ರವಿ ರೆಡ್ಡಿ ಮುದ್ನಾಳ್, ಪಾಂಡುರಂಗ ರೆಡ್ಡಿ, ರಾಮ ರೆಡ್ಡಿ, ಗೋಪಾಲ್ ರೆಡ್ಡಿ, ಶಿವಾ ರೆಡ್ಡಿ, ನಾಗ ರೆಡ್ಡಿ, ಗೋವಿಂದ ರೆಡ್ಡಿ, ಕೃಷ್ಣಾ ರೆಡ್ಡಿ, ಚಂದ್ರಕಾಂತ ರೆಡ್ಡಿ, ರಾಜರೆಡ್ಡಿ, ವಿಠ್ಠಲರೆಡ್ಡಿ ಮತ್ತಿತರರು ಇದ್ದರು.
ಜಿಲ್ಲಾ ರೆಡ್ಡಿ ಸಮಾಜದ ಉಪಾಧ್ಯಕ್ಷ ಜೈಪಾಲ್ ರೆಡ್ಡಿ ಸ್ವಾಗತಿಸಿದರು. ಶ್ರೀನಿವಾಸ್ ರೆಡ್ಡಿ ಮುದ್ನಾಳ್ ನಿರೂಪಿಸಿದರು. ಭರತ್ ರೆಡ್ಡಿ ವಂದಿಸಿದರು.