Home ಜಿಲ್ಲೆ ಕಲಬುರಗಿ ಕಲಬುರಗಿಯಲ್ಲಿ ಸೆ.6 ರಂದು “ಗುರುವೇ ನಮಃ” ಪ್ರೌಢ ಶಾಲಾ ಶಿಕ್ಷಕರ ಬೃಹತ್ ಸಮಾವೇಶ

ಕಲಬುರಗಿಯಲ್ಲಿ ಸೆ.6 ರಂದು “ಗುರುವೇ ನಮಃ” ಪ್ರೌಢ ಶಾಲಾ ಶಿಕ್ಷಕರ ಬೃಹತ್ ಸಮಾವೇಶ

ಕಲಬುರಗಿ,ಸೆ.5-ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಕಾಲೇಜು (ಕಲಬುರಗಿ-ರಾಯಚೂರು) ಇವುಗಳ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ “ಗುರುವೇ ನಮಃ”-ಕಲ್ಯಾಣ ಕರ್ನಾಟಕದ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಕುರಿತು “ಪ್ರೌಢ ಶಾಲಾ ಶಿಕ್ಷಕರಿಗೆ” ಪುನಃಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ನಿವೃತ್ತ ಜಿಲ್ಲಾ ನ್ಯಾಯಧೀಶರು ಹಾಗು ಪ್ರತಿಷ್ಠಾನದ ಅಧ್ಯಕ್ಷರಾದ ಎನ್.ಶರಣಪ್ಪ ಹಾಗು ಪ್ರತಿಷ್ಠಾನದ ಕಾರ್ಯದರ್ಶಿ, ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಪೆÇ್ರ.ಚನ್ನಾರೆಡ್ಡಿ ಪಾಟೀಲ ತಿಳಿಸಿದ್ದಾರೆ.
ಸೆಪ್ಟೆಂಬರ್ 6 ರಂದು ಬೆಳಗ್ಗೆ 9.30 ಕ್ಕೆ ನಗರದ ‘ಜಸ್ಟಿಸ್ ಶಿವರಾಜ ವಿ. ಪಾಟೀಲ ಸಾಂಸ್ಕøತಿಕ ಭವನ’, ಸರ್ವಜ್ಞ ಶಾಲೆಯ ಆವರಣ, ಸಾಯಿ ಮಂದಿರ ರಸ್ತೆ, ಕಲಬುರಗಿಯಲ್ಲಿ ಆಯೋಜಿಸಲಾಗಿದ್ದು, ನ್ಯಾಯಮೂರ್ತಿ ನಾಡೋಜ ಶ್ರೀ ಶಿವರಾಜ ವಿ ಪಾಟೀಲರು ಆನ್ಲೈನ್ ಮುಖಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು “ಮಾರ್ಗದರ್ಶಿ ನುಡಿ” ಗಳನ್ನಾಡಲಿದ್ದಾರೆ. ಕರ್ನಾಟಕ ಹೈಕೋಟ್ರ್ನ ನ್ಯಾಯಮೂರ್ತಿ ಟಿ.ಎನ್. ಇನವಳ್ಳಿ ಅವರು ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಎನ್. ಶರಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿನೆಮಾ ನಟ ಹಾಗೂ ‘ವೀಕೆಂಡ್ ವಿತ್ ರಮೇಶ್’ ಖ್ಯಾತಿಯ ರಮೇಶ್ ಅರವಿಂದ್ ಅವರು ಆಗಮಿಸಿ ಮೌಲಿಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಕುರಿತು ಶಿಕ್ಷಕರನ್ನು ಹುರಿದುಂಬಿಸುತ್ತಾ ಪ್ರೇರಣಾದಾಯಕ ಮಾತುಗಳನ್ನಾಡಲಿದ್ದಾರೆ.
ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸವನ್ನು ಧಾರವಾಡ ಐ.ಐ.ಟಿ.ಯ ಪ್ರಾಧ್ಯಾಪಕ, ಖ್ಯಾತ ವಿಜ್ಞಾನಿ ಹಾಗು ಭಾರತ ರತ್ನ ಡಾ. ಸಿ.ಎನ್.ಆರ್. ರಾವ್ ಅವರ ಶಿಷ್ಯರಾದ ಪೆÇ್ರ. ಎಸ್. ಎಮ್. ಶಿವಪ್ರಸಾದ ಮತ್ತು ಹ್ಯೂಮನ್ ಮೈಂಡ್ಸೆಟ್ ಖ್ಯಾತ ತರಬೇತುದಾರರಾದ ಶ್ರೀ ಮಹೇಶ್ ಮಸಾಳ ಅವರು ನೀಡಲಿದ್ದಾರೆ. ಗೌರವ ಅತಿಥಿಗಳಾಗಿ ಯಾದಗಿರಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸಿ. ಎಸ್. ಮುಧೋಳ್ ಹಾಗೂ ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಶಂಕ್ರಮ್ಮ ಢವಳಗಿ ಅವರು ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರೌಢಶಾಲಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದ್ದಾರೆ.
……………….
ಶಿಕ್ಷಕರಿಗೆ ಪ್ರೇರಣೋಪನ್ಯಾಸ
ಕಲ್ಯಾಣ ಕರ್ನಾಟಕ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಪ್ರಗತಿ ತರಲು ಶಿಕ್ಷಕರಿಗೆ ಆಧುನಿಕ ಬೋಧನಾ ಕೌಶಲ್ಯ ಮತ್ತು ನೈತಿಕ ಶಿಕ್ಷಣ ಮಹತ್ವ ಕುರಿತು ಪ್ರೇರಣೋಪನ್ಯಾಸ ನಡೆಯಲಿದೆ. ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ ಅವರ ನುಡಿಯಂತೆ “ಗುರು ಎಂಬುದು ಒಂದು ಬರೀ ಪದ ಅಥವಾ ವೃತ್ತಿಯಲ್ಲ, ತನ್ನ ಶಿಷ್ಯಂದಿರ (ವಿದ್ಯಾರ್ಥಿಗಳ ) ಬದುಕನ್ನೇ ಬದಲಾಯಿಸುವ ದಿವ್ಯ ಶಕ್ತಿ” ಹಾಗು “ಶಿಕ್ಷಣವು ಸಾರ್ಥಕ ಬದುಕಿಗೆ ದೀಕ್ಷೆ ಯಾಗಬೇಕು” ಮತ್ತು “ಶಾಲಾ -ಕಾಲೇಜುಗಳ ಗುಣಮಟ್ಟದ ಶಿಕ್ಷಣಕ್ಕೆ ಕಲ್ಲು- ಮಣ್ಣುಗಳ ಭವ್ಯ ಕಟ್ಟಡಗಳು ಸ್ವಲ್ಪ ಮಟ್ಟಿಗೆ ಅವಶ್ಯವಿದ್ದರೂ, ಬಹುಪಾಲು ದೇಶದ ಅಭಿವೃದ್ಧಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿದೆ ಎಂದು ಮಕ್ಕಳನ್ನು ಸುಸಂಸ್ಕೃತ ನಾಗರಿಕರನ್ನಾಗಿಸುವ ಅರ್ಹತೆ ಇರುವ ಶಿಕ್ಷಕರನ್ನು ಅವಲಂಬಿಸಿದೆ” ಎಂಬ ಚಿಂತನೆಯನ್ನಿಟ್ಟುಕೊಂಡು, ಸಮಾಜದ ಶಿಲ್ಪಿಗಳಾದ ಶಿಕ್ಷಕರ ಕೌಶಲ್ಯವನ್ನು ಹೆಚ್ಚಿಸುವದರ ಮೂಲಕ ಅವರನ್ನು ಗೌರವಿಸುವುದು ಈ ಸಮಾವೇಶದ ಪ್ರಮುಖ ಧ್ಯೇಯವಾಗಿದೆ. ವಿದ್ಯಾರ್ಥಿಗಳಲ್ಲಿ ಕೇವಲ ಅಂಕಗಳನ್ನಷ್ಟೇ ಅಲ್ಲದೆ, ಉತ್ತಮ ಸನ್ಮೌಲ್ಯ, ನೈತಿಕತೆಯ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ಮತ್ತಷ್ಟು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಪೆÇ್ರ. ಚನ್ನಾರೆಡ್ಡಿ ಪಾಟೀಲ ತಿಳಿಸಿದ್ದಾರೆ.