
ಕಲಬುರಗಿ.ಅ.21: ಇಲ್ಲಿನ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ನವರಾತ್ರಿ ವೈಭವದಿಂದ ಜರುಗಿತು.
ಪ್ರತಿ ದಿವಸ ಸಂಜೆ ಭಜನೆ, ಗುಂಡಾಚಾರ್ಯ ಜೋಶಿ ಅವರಿಂದ ಶ್ರೀ ವೆಂಕಟೇಶ ಮಹಾತ್ಮೆ ಪುರಾಣ, ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.
ಶ್ರೀ ಜಯತೀರ್ಥ ಭಜನಾ ಮಂಡಳಿ, ವೈಭವಲಕ್ಷ್ಮಿ ಹಾಗೂ ಚಂದ್ರಲಾಂಬ ಭಜನಾ ಮಂಡಳಿಯವರಿಂದ ಭಜನೆ ನೆರವೇರಿತು.
ಮಂಗಳವಾರ ಪುರಾಣ ಮಂಗಳ ನಂತರ ಶ್ರೀನಿವಾಸ ಕಲ್ಯಾಣೋತ್ಸವ ನಂತರ ಶಮಿ ಪೂಜೆ ಜರುಗಿತು ಎಂದು ಅರ್ಚಕರು ತಿಳಿಸಿದ್ದಾರೆ.






















