Home ಜಿಲ್ಲೆ ದವಸ ಧಾನ್ಯದ ಕಿಟ್ ವಿತರಣೆ

ದವಸ ಧಾನ್ಯದ ಕಿಟ್ ವಿತರಣೆ

ಹುಬ್ಬಳ್ಳಿ,ಅ೨೧: ದಸರಾ ಹಬ್ಬದ ಪ್ರಯುಕ್ತ ವೆಂಕಟೇಶ್ ಅಶೋಕ ಕಾಟವೆ (ವಿಎಕೆ) ಫೌಂಡೇಶನ್ ವತಿಯಿಂದ ನಗರದ ಪೌರಕಾರ್ಮಿಕರಿಗೆ ದವಸ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಕಾಟವೆ ಹಬ್ಬಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ ಹಂಚುವ ಮತ್ತು ಮಾನವೀಯ ಸಂಬAಧಗಳನ್ನು ಗಟ್ಟಿಗೊಳಿಸುವ ಸಂದರ್ಭಗಳಾಗಬೇಕು. ಬಡವರು, ಶ್ರಮಿಕರು ಹಾಗೂ ಅಗತ್ಯವಿರುವವರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಹಬ್ಬದ ಆಚರಣೆ ಎಂದು ತಿಳಿಸಿದರು.

ವಿಎಕೆ ಫೌಂಡೇಶನ್‌ನ ಆಶಯವು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಅಗತ್ಯವಿರುವ ಕುಟುಂಬಗಳಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿದೆ ಎಂದರು.

ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘದ ಅಧ್ಯಕ್ಷರು ವಿಜಯ ಗುಂಟ್ರಾಳ,ಸಚಿನ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.