
ನವಲಗುಂದ,ಮೇ.೧೬: ಗ್ರಾಮೀಣ ಸಂಸ್ಕöÈತಿ, ಭಕ್ತಿ ಮತ್ತು ಜನರ ಒಗ್ಗಟ್ಟಿನ ಪ್ರತೀಕವಾಗಿರುವ ಇಂತಹ ಜಾತ್ರಾ ಮಹೋತ್ಸವಗಳು ನಮ್ಮ ಪರಂಪರೆಯ ಜೀವಾಳವಾಗಿವೆ. ಭಕ್ತರ ಭಾವನೆ, ಸಂಭ್ರಮ ಹಾಗೂ ನಂಬಿಕೆಯಿAದ ತುಂಬಿದೆ ಎಂದು ಶಾಸಕ ಎನ್.ಎಚ್ ಕೋನರಡ್ಡಿ ಹೇಳಿದರು.
ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಶ್ರೀ ಗ್ರಾಮದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಸರಿತ್ತಿ ಗುದ್ದಲೀಶ್ವರ ಮಹಾಸ್ವಾಮಿಗಳು, ಚಿಕ್ಕುಂಬಿ ನಾಗಲಿಂಗ ಸ್ವಾಮಿಗಳು ಹಾಗೂ ಮಾನಕವಾಡ ಶ್ರೀ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಪಿಎಸ್‌ಐ ಉಮಾದೇವಿ, ಎಂ.ಎಸ್. ರೋಣದ , ಶಾಂತವ್ವ ಗುಜ್ಜಳ, ಸಂತೋಷ್ ಗುಜ್ಜಳ, ಅರುಣಕುಮಾರ್ ಮಜ್ಜಗಿ, ರಾಮಪ್ಪ ನಾಯ್ಕರ್, ಈರಪ್ಪ ಮಾಳವಾಡ್, ಎಂ.ಎA. ಗುಜ್ಜಳ, ಸಂಜೀವ ಕೇಸರಿ, ಸೋಮಲಿಂಗ ಉಡಕೇರಿ, ವೀರನಗೌಡ ಹುಡೆದ್, ನೀಲಪ್ಪ ಕುರ್ಲಗೇರಿ, ಪ್ರವೀಣ್ ನಾಯ್ಕರ್, ಮುದಕಪ್ಪ ಮುಗಳಿ, ಜಿ.ಎ. ಪಾಟೀಲ, ಪರಮೇಶ್ ಹೊಸವಾಳ, ಸುರೇಶ್ ಬೆಡಸೂರ, ಕಲ್ಮೇಶ ದಳವಾಯಿ, ಮೌಲಾಸಾಬ ಮುರ್ತೋಜಿ, ನಿಂಗಪ್ಪ ಬಡ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.























