Home ಜಿಲ್ಲೆ ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವಕ್ಕೆ ಪಾತ್ರರಾದ ಗೋಪಿಚಂದ ತಾಂದಳೆ; ಗಣ್ಯರಿಂದ ಅಭಿನಂದನೆ

ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವಕ್ಕೆ ಪಾತ್ರರಾದ ಗೋಪಿಚಂದ ತಾಂದಳೆ; ಗಣ್ಯರಿಂದ ಅಭಿನಂದನೆ

ಬೀದರ್: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ಆಯೋಜಿಸಲಾದ ‘ಫೆÇೀಕಸ್-ಆನ್-ನ್ಯೂಸ್ 2.0’ ರಾಷ್ಟ್ರಮಟ್ಟದ ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ, ಸ್ಪರ್ಧೆ ಹಾಗೂ ತರಬೇತಿ ಶಿಬಿರದಲ್ಲಿ ಬೀದರ್‍ನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಗೋಪಿಚಂದ ತಾಂದಳೆ ಅವರನ್ನು ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಅವರು ಸ್ಮರಣಿಕೆ ಹಾಗೂ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಪತ್ರಿಕಾ ವಲಯದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ ಜವಳೆ, ಪತ್ರಿಕಾ ಛಾಯಾಗ್ರಹಣವೆಂದರೆ ಕೇವಲ ಚಿತ್ರಗಳನ್ನು ಸೆರೆಹಿಡಿಯುವ ಕೆಲಸವಲ್ಲ, ಸಮಾಜದ ವಾಸ್ತವ ಚಿತ್ರಣವನ್ನು ಇತಿಹಾಸದ ದಾಖಲೆಯಾಗಿ ಉಳಿಸುವ ಅತ್ಯಂತ ಜವಾಬ್ದಾರಿಯುತ ವೃತ್ತಿಯಾಗಿದೆ ಎಂದು ಹೇಳಿದರು.

ಗೋಪಿಚಂದ ತಾಂದಳೆ ಅವರು ಹಲವು ವರ್ಷಗಳಿಂದ ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ವೃತ್ತಿಪರ ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಲಾತ್ಮಕ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರ ಬದುಕು, ಸಾಮಾಜಿಕ ಸಮಸ್ಯೆಗಳು, ಸಾಂಸ್ಕøತಿಕ ಪರಂಪರೆ ಹಾಗೂ ಸಮಕಾಲೀನ ಬೆಳವಣಿಗೆಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಅವರ ಪರಿಶ್ರಮ ಮತ್ತು ಸಮರ್ಪಣೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯಂತಹ ಪ್ರತಿಷ್ಠಿತ ಸಂಸ್ಥೆಯಿಂದ ದೊರೆತಿರುವ ಈ ಗೌರವವು ಕೇವಲ ವೈಯಕ್ತಿಕ ಸಾಧನೆಯಲ್ಲ, ಇಡೀ ಬೀದರ್ ಜಿಲ್ಲೆಯ ಪತ್ರಕರ್ತ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಅವರು ಹೇಳಿದರು.

ಗೋಪಿಚಂದ ತಾಂದಳೆ ಅವರ ಸಾಧನೆಯು ಜಿಲ್ಲೆಯ ಯುವ ಪತ್ರಿಕಾ ಛಾಯಾಗ್ರಾಹಕರಿಗೆ ಹೊಸ ಸ್ಪೂರ್ತಿ ಹಾಗೂ ಆತ್ಮವಿಶ್ವಾಸ ತುಂಬಿದ್ದು, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಪರಿಶ್ರಮ, ವೃತ್ತಿಪರ ಬದ್ಧತೆ, ಶಿಸ್ತು ಮತ್ತು ಸಮಾಜಮುಖಿ ದೃಷ್ಟಿಕೋನ ಅಗತ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರಾಜಶೇಖರ ಜವಳೆ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಹುಮನಿಕೋಟೆ ಕನ್ನಡ ದಿನಪತ್ರಿಕೆಯ ಸಂಪಾದಕ ಶಿವಕುಮಾರ ವಣಗೇರಿ, ಹಿರಿಯ ಪತ್ರಕರ್ತ ಸೋಮನಾಥ ಬಿರಾದಾರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮೇಶ್ ಗಾದಗಿ, ಜನಶಕ್ತಿ ಅಭಿವೃದ್ಧಿ ಸಂಘದ ಅಧ್ಯಕ್ಷ ಶಾಂತಕುಮಾರ ಅಲ್ಲಾಪೂರ, ಸಮಾಜಸೇವಕ ಬಸವರಾಜ ನಿಟ್ಟೂರೆ ಹಾಗೂ ಸಹಕಾರಿ ಯುವ ಮುಖಂಡ ಪರಮೇಶ್ವರ ಮುಗಟೆ ಉಪಸ್ಥಿತರಿದ್ದು, ಗೋಪಿಚಂದ ತಾಂದಳೆ ಅವರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಿ ಬೀದರ್ ಜಿಲ್ಲೆಯ ಕೀರ್ತಿಯನ್ನು ದೇಶದಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದ್ದಾರೆ.