Home ಕ್ರೈಂ ಸುದ್ದಿಗಳು 44 ಚೀಲ ಪಡಿತರ ಅಕ್ಕಿ ಸೇರಿ ರೂ.2.60 ಲಕ್ಷ ಮೌಲ್ಯದ ವಸ್ತು ಜಪ್ತಿ: ಓರ್ವನ ಬಂಧನ

44 ಚೀಲ ಪಡಿತರ ಅಕ್ಕಿ ಸೇರಿ ರೂ.2.60 ಲಕ್ಷ ಮೌಲ್ಯದ ವಸ್ತು ಜಪ್ತಿ: ಓರ್ವನ ಬಂಧನ

ಚಡಚಣ,ಸೆ 25 : ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪದ ಮೇಲೆ ಚಡಚಣ ಪೆÇಲೀಸರು ಓರ್ವನನ್ನು ಬಂಧಿಸಿ, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಡಚಣ ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಸೆ.23ರಂದು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವೇಳೆ ಆರೋಪಿಯನ್ನು ಪತ್ತೆಹಚ್ಚಲಾಗಿದೆ. ಬಂಧಿತನನ್ನು ಚಡಚಣ ನಿವಾಸಿ ಆರೀಫ್ ಖಾಜಾಸಾಬ ಪಠಾಣ (18) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಹುಸೇನಬಾಷಾ ಗೈಬೀಸಾಬ ಟಪಾಲ ಹಾಗೂ ಶುಭಂ ಭಗವಾನ ಕ್ಷತ್ರಿ ಎಂಬುವರು ಆರೋಪಿಗಳಾಗಿದ್ದು, ಇಬ್ಬರೂ ಪರಾರಿಯಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಆಹಾರ ನಿರೀಕ್ಷಕ ಶಿವಾನಂದ ಸದಾಶಿವ ಕೋಳಿ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಲೈಸನ್ಸ್ ಪಡೆಯದೇ, ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೆÇಲೀಸರು ಆರೋಪಿಯಿಂದ ಕೆಎ-30 ಎ-3031 ಸಂಖ್ಯೆಯ ಪಿಕಪ್ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ 2 ಲಕ್ಷ ಎಂದು ತಿಳಿಸಲಾಗಿದೆ. ಅಲ್ಲದೆ, ಸುಮಾರು 45-50 ಕೆ.ಜಿ. ತೂಕದ 44 ಅಕ್ಕಿ ಚೀಲಗಳು, ಒಟ್ಟು 2,290 ಕೆ.ಜಿ. ಅಕ್ಕಿ ಹಾಗೂ ಪರೀಕ್ಷೆಗಾಗಿ ಪಡೆದ 2 ಕೆ.ಜಿ. ಅಕ್ಕಿ ಮಾದರಿ ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾದ ಅಕ್ಕಿಯ ಮೌಲ್ಯ ರೂ60,914 ಎಂದು ಅಂದಾಜಿಸಲಾಗಿದ್ದು, ವಾಹನ ಸೇರಿದಂತೆ ಒಟ್ಟು ಜಪ್ತಿ ವಸ್ತುಗಳ ಮೌಲ್ಯ ರೂ2,60,967.20 ಎಂದು ಎಫ್‍ಐಆರ್‍ನಲ್ಲಿ ನಮೂದಿಸಲಾಗಿದೆ.
ಈ ಕುರಿತು ಚಡಚಣ ಪೆÇಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆ-1955ರ ಕಲಂ 3 ರೆ/ವು ಹಾಗೂ 7 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪಿಎಸ್ ಐ ಅರವಿಂದ ಅಂಗಡಿ ತಿಳಿಸಿದ್ದಾರೆ.