Home ಜಿಲ್ಲೆ ಬೆಂಗಳೂರು ಆಟೋ ಚಾಲಕರಿಗೆ ಉಚಿತ ಅಕ್ಕಿ ವಿತರಣೆ

ಆಟೋ ಚಾಲಕರಿಗೆ ಉಚಿತ ಅಕ್ಕಿ ವಿತರಣೆ

ಕೋಲಾರ,ಜೂ.೧೫- ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ಧಾಣದ ಬಳಿ ತ್ರಿಚಕ್ರ ವಾಹನ ಚಾಲಕರ ಸಂಘದ ವತಿಯಿಂದ ಉಚಿತ ಕುಡಿಯುವ ನೀರಿನ “ತಣ್ಣೀರ ಚಪ್ಪರ” ಉದ್ಘಾಟನೆಗೆ ಹಾಗೂ ಆಟೋ ಚಾಲಕರಿಗೆ ಅಕ್ಕಿ ವಿತರಣೆಯನ್ನು ಜಿ. ನವೀನ ಚಂದ್ರ ಜಿಲ್ಲಾ ನೋಡಲ್ ಅಧಿಕಾರಿಗಳು, ನಗರಾಭಿವೃದ್ಧಿ ಕೋಶ, ಇವರು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿ, ಆಟೋಚಾಲಕರು ಇತ್ತೀಚಿನ ಗಲ್ಫ್ ಯುದ್ಧದ ಪರಿಣಾಮ ತೈಲೋತ್ಫನ್ನಗಳ ಬೆಲೆ ಹೆಚ್ಚಳ ದಿಂದಾಗಿ ಆಟೋ ರಿಕ್ಷಾ ನಡೆಸುವುದು ಕಷ್ಟವಾಗಿದ್ದು, ಗೃಹ ಉಪಯೋಗಿ ಗ್ಯಾಸ್ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆ ದು:ಸ್ಥಿರದ ಪರಿಸ್ಥಿತಿಯಲ್ಲಿ ಆಟೋ ಚಾಲಕರಿಗೆ ಅಕ್ಕಿವಿತರಣೆ ಮಾಡುತ್ತಿರುವುದು ಶಾಘನೀಯ ವಾಗಿದೆ ಎಂದರು.


ಈ ಜಿಲ್ಲೆ ಎಂ.ವಿ ರವಿ ಯವರ ನಿರ್ದೇಶನದಂತೆ ಸ್ವಯಂ ಪ್ರೇರಿತರಾಗಿ ಕುಡಿಯುವ ನೀರಿನ ಘಟಕ ಪ್ರಾರಂಭಿಸಿ ವರ್ಷದ ೩೬೫ ದಿನ ಉಚಿತ ನೀರಿನ ವ್ಯವಸ್ಥೆ ಮಡಿರುವುದು ಇವರ ಸೇವಾ ಮನೋಭಾವಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನೂ ಸಹ ಆಟೋ ಚಾಲಕರ ಕುಟುಂಬದಿಂದ ಬಂದಿದ್ದು, ನಮ್ಮ ತಂದೆ ಚಿಂತಾಮಣಿಯಲ್ಲಿ ಆಟೋ ಚಾಲಕರ ಸಂಘದ ಸ್ಥಾಪಕ ಗೋಪಾಲ ಅಧ್ಯಕ್ಷರಾಗಿದ್ದು, ನಂತರ ಪುರಸಭೆಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ನನಗೆ ಹೆಮ್ಮೆ ತಂದಿದೆ ಎಂದು ಬಣ್ಣಿಸಿದರು.


ಕರ್ನಾಟಕ ರಾಜ್ಯ ಆಟೋ ಚಾಲಕರ ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ ಸುರೇಶ್ ಕುಮಾರ್ ಮಾತನಾಡಿ, ಸುಮಾರು ೪೦ ವರ್ಷ ಹೋರಾಟದ ಫಲವಾಗಿ ಸರ್ಕಾರದ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಲಕರ ಕಲ್ಯಾಣ ಮಂಡಳಿ” ರಚನೆಯಾಗಿದ್ದು, ನೋಂದಾಯಿತ ಆಟೋ ಚಾಲಕರಿಗೆ ಸರ್ಕಾರದ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಗಳು ಜಾರಿಯಾಗುತ್ತಿದ್ದು, ಇದರ ಮೂಲಕ ಗುರುತಿನ ಚೀಟಿ ಪಡೆದುಕೊಂಡ ಚಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ನರವು- ಅಫಘಾತದಿಂದ ಆಸ್ಪತ್ರೆ ಚಿಕಿತ್ಸೆಗೆ ೨ ಲಕ್ಷ ರೂಗಳ ವರೆಗೆ ನೆರವು- ಅಫಘಾತದಿಂದ ಮರಣ ಹೊಂದಿದರೆ ೫ ಲಕ್ಷ ರೂಗಳ ವರೆಗೆ ಪರಿಹಾರ- ಸಹಜ ಮರಣ ಹೊಂದಿದರೆ ೨೫ ಸಾವಿರ ರೂಗಳ ಅಂತ್ಯ ಕ್ರಿಯೆಗೆ ನೆರವು ಮತ್ತು ೬೫ ವರ್ಷ ವಯಸ್ಸು ದಾಟಿದ ಚಲಕರಿಗೆ ಪ್ರತಿ ತಿಂಗಳು, ಪಿಂಚಣಿ ಯೋಜನೆ ಜಾರಿಯಲ್ಲಿದ್ದು, ಆಟೋ ಚಾಲಕರು ಕಡ್ಡಾಯವಾಗಿ ಚಾಲನಾಪರವಾನಗಿ ಹೊಂದಿದ್ದು, ನೋಂದಣಿ ಮಾಡಿಕೊಳ್ಳಬೇಕೆಂದು ಕರೆನೀಡಿದರು-
ಕೋಲಾರ ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ತಣ್ಣೀರ ಚಪ್ಪರ ನಿರ್ಮಿಸಿ ಸಾರ್ಮಜನಿಕರ ಉಪಯೋಗಗಳು ನೀಡಿರುವುದಾಗಿ ತಿಳಿಸಿದರು.


ಕರ್ನಾಟಕ ಸರ್ಕಾರ ” ಕರೋನಾ” ಸಂದರ್ಭದಲ್ಲಿದಂತೆ ಈ ಜಾಗತಿಕ ಯುದ್ಧ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳವಾಗಿರುವುದರಿಂದ ಚಾಲಕರಿಗೆ ೧೦ ಸಾವಿರ ರೂಗಳ ನೆರವು ನೀಡಿವುವ ಮೂಲಕ ಚಾಲಕರ ಕುಟುಂಬದ ಪೋಷಣೆಯ ನೆರವಿಗೆ ಭಾವಿಸಬೇಕೆಂದು ಆಗ್ರಹಿಸಿದರು.


ನಗರಸಭಾ ಮಾಜಿ ಸದಸ್ಯ ಕೆ.ವಿ ಮಂಜುನಾಥ ರವರು ಮಾತನಾಡಿ ಚಾಲಕರಿಗೆ ನಿವೇಶನಗಳನ್ನು ವಿತರಿಸಬೇಕೆಂದು ಸಹಕಾರ ಸಂಘ ಪ್ರಾರಂಭಿಸಲು ಸಲಹೆ ನೀಡಿದರು.


ಮಾಜಿ ನಗರಸಭಾ ಸದಸ್ಯಡೆಕೊರೇಷನ್ ಕೃಷ್ಣ,, ಎನ್ ಮುನಿಸ್ವಾಮಿ, ತ್ರಿ. ಚ.ವಾ.ಚಾ.ಅಧ್ಯಕ್ಷ ಜೆ. ಮಂಜುನಾಥ, ಪ್ರಧಾನ ಕಾರ್ಯಾದರ್ಶಿ ಪಿ. ಸುಧಾಕರ, ಮುಖ್ಯ ಕರಾದ ಸೂರಿ-ಒಖಿಅ ಮಂಜು ಹಾಗೂ ಮುರಳಿ, ಮಲ್ಲಿಕಾರ್ಜುನ, ಹರೀಷ್, ಸತೀಶ ಮತ್ತು ಮುಂತಾದ ಎಲ್ಲಾ ಆಟೋ ಚಾಲಕರು ಭಾಗವಹಿಸಿದ್ದರು.