
ಬೀದರ್: ಮೇ.5:ಕಿರಿಯ ವಯಸ್ಸಿನಲ್ಲೇ ಕರಾಟೆಯಲ್ಲಿ ಅಮೋಘ ಸಾಧನೆಗೈದ ಹೈದರಾಬಾದನ
ಕಿಶನ್‍ಬಾಗ್‍ನ ಬಹಾದ್ದೂರಪುರದ ಸಬಾ ಮಾಹೀನ್ ಖಾಜಾ ಮೊಯಿನುದ್ದೀನ್ ಅವರಿಗೆ ಇಲ್ಲಿಯ
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಉಚಿತವಾಗಿ
ನೀಡುವುದಾಗಿ ಘೋಷಿಸಿದೆ.
ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಚೇರಿಗೆ ಭಾನುವಾರ
ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಿದ ಸಬಾ ಮಾಹೀನ್ ಅವರಿಗೆ ಸಮೂಹದ ಅಧ್ಯಕ್ಷ ಡಾ.
ಅಬ್ದುಲ್ ಖದೀರ್ ಅವರು ಶೈಕ್ಷಣಿಕ ನೆÀರವಿನ ಭರವಸೆ ನೀಡಿದರು.
ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಸಂಪೂರ್ಣ ಉಚಿತವಾಗಿ ಕೊಡಲಾಗುವುದು. ವೈದ್ಯಳಾಗಲು
ಬಯಸಿದ್ದಲ್ಲಿ ನೀಟ್ ತರಬೇತಿಯನ್ನೂ ನೀಡಲಾಗುವುದು ಎಂದು ತಿಳಿಸಿದರು.
ಹೈದರಾಬಾದನ ಗ್ರೇಸ್ ಎಕ್ಸೆಲ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಅಗ್ರಶ್ರೇಣಿಯಲ್ಲಿ
ತೇರ್ಗಡೆಯಾಗಿರುವ ಸಬಾ ಮಾಹೀನ್ ತೆಲಂಗಾಣ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ 22,
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಜಯಿಸಿದ್ದಾರೆ. ಮೇ 8 ರಿಂದ 10 ರ
ವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 22ನೇ ವಿಶ್ವ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಗೆ
ಆಯ್ಕೆಯಾಗಿದ್ದಾರೆ. ಅವರ ಸಾಧನೆ ಬಾಲಕಿಯರಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ ಎಂದು
ಹೇಳಿದರು.
ವಿದ್ಯಾರ್ಥಿನಿ ತಂದೆ ಖಾಜಾ ಮೊಯಿನುದ್ದೀನ್, ಕೋಚ್ ಮಾಸ್ಟರ್ ಮೊಹಮ್ಮದ್ ಉಮರ್ ಇದ್ದರು.

























