Home ಜಿಲ್ಲೆ ಜೂ. ೭ ರಂದು ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿಉಚಿತ ಆಯುರ್ವೇದ ಔಷಧ ವಿತರಣೆ

ಜೂ. ೭ ರಂದು ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿಉಚಿತ ಆಯುರ್ವೇದ ಔಷಧ ವಿತರಣೆ

ಬೀದರ್: ಜೂ.೬:ತಾಲ್ಲೂಕಿನ ಚಾಂಬೋಳ್ ಸಮೀಪದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಆಯುರ್ವೇದ ಆಸ್ಪತ್ರೆಯಾದ ಜ್ಞಾನಸುಧಾ ಎ.ಕೆ. ಆಸ್ಪತ್ರೆಯಲ್ಲಿ ಜೂನ್ ೭ ರಂದು (ರವಿವಾರ) ಉಚಿತ ಆಯುರ್ವೇದ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂನ್ ೭ ರಂದು ಮಿರುಗಿನ ದಿನವಾದ (ಮೃಗಶಿರ ನಕ್ಷತ್ರ) ಕಾರಣ ಈ ಆಯುರ್ವೇದ ಔಷಧ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೮ ರಿಂದ ಸಾಯಂಕಾಲ ೮ ಗಂಟೆಯವರೆಗೆ ಔಷಧಿಯನ್ನು ನೀಡಲಾಗುವುದು.
‘ಅಲರ್ಜಿ, ಅಸ್ತಮಾ, ಕೆಮ್ಮು, ಶೀತ ಹಾಗೂ ಇತರ ಶ್ವಾಸಕೋಶಕ್ಕೆ ಸಂಬAಧಪಟ್ಟ ರೋಗಗಳಿಗೆ ಈ ಆಯುರ್ವೇದ ಔಷಧವನ್ನು ಬಾಳೆ ಹಣ್ಣಿನೊಂದಿಗೆ ವಿತರಿಸಲಾಗುವುದು. ಈ ಔಷಧ ಸೇವನೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಎರಡು ವರ್ಷ ಮೇಲ್ಪಟ್ಟವರು ಔಷಧ ಸೇವಿಸಬಹುದು’ ಎಂದು ಜ್ಞಾನಸುಧಾ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ. ಮುನೇಶ್ವರ ಲಾಖಾ ಅವರು ತಿಳಿಸಿದ್ದಾರೆ.
‘ಈ ಔಷಧ ಕಹಿಯಿಲ್ಲದೆ ರುಚಿಕರವಾದ ಶುದ್ಧ ಆಯುರ್ವೇದ ಔಷಧವಾಗಿದ್ದು, ಉಸಿರಾಟದ ತೊಂದರೆಯಿಲ್ಲದವರೂ ಸಹ ತಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಔಷಧ ತೆಗೆದುಕೊಳ್ಳಬಹುದು. ಈ ರೀತಿಯ ಔಷಧ ವರ್ಷಕ್ಕೆ ಒಂದು ಬಾರಿ ಮಾತ್ರ ನೀಡಲಾಗುತ್ತಿದೆ. ಆಸ್ಪತ್ರೆಗೆ ಸುಲಭವಾಗಿ ಆಗಮಿಸಲು ಬೀದರ್ ಹೊಸ ಬಸ್ ನಿಲ್ದಾಣ ಎದುರು ಇರುವ ವಿಜಯ ಗಾರ್ಮೆಂಟ್ ಸಮೀಪದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಆದ್ದರಿಂದ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಸುಧಾ ಎ.ಕೆ. ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಔಷಧ ನೀಡುವ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ ೬೩೬೨೯೦೧೧೧೫ / ೯೦೦೮೫೪೪೨೭ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.