Home ಜಿಲ್ಲೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ..!ಜಾಗೃತಿಗೆ ಗುರುವಾರದಿಂದ ಜಾಥಾ: ಜಿಲ್ಲಾ ನ್ಯಾಯಾಧೀಶ ಮರುಳಸಿದ್ದರಾಧ್ಯ

ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ..!ಜಾಗೃತಿಗೆ ಗುರುವಾರದಿಂದ ಜಾಥಾ: ಜಿಲ್ಲಾ ನ್ಯಾಯಾಧೀಶ ಮರುಳಸಿದ್ದರಾಧ್ಯ

ಯಾದಗಿರಿ: ಅಪ್ರಾಪ್ತರಿಗೆ ವಾಹನ ನೀಡುವುದು, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್, ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಹಾಗೂ ನೋ-ಪಾಕಿರ್ಂಗ್‍ನಲ್ಲಿ ವಾಹನ ನಿಲುಗಡೆ ಸೇರಿದಂತೆ ಸಂಚಾರ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಯಾದಗಿರಿಯಲ್ಲಿ ಗುರುವಾರದಿಂದ ಜಾಗೃತಿ ಜಾಥಾ ಆರಂಭಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮರುಳಸಿದ್ದರಾಧ್ಯ ಹೇಳಿದರು.

ಮಂಗಳವಾರ ಜಿಲ್ಲಾ ನ್ಯಾಯಾಂಗ ಸಭಾಂಗಣದಲ್ಲಿ ವಿವಿಧ ಚಾಲಕರ ಸಂಘಗಳ ಅಧ್ಯಕ್ಷರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಗೇರ್ ವಾಹನಗಳನ್ನು ನೀಡಬಾರದು. ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಕ್ಕೀಡಾದರೆ ವಿಮೆ ಸೇರಿದಂತೆ ಹಲವು ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಅಥವಾ ನಾಲ್ವರು ಸಂಚರಿಸುವುದು ಹಾಗೂ ಆಟೊಗಳಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಪ್ಪಿಸಬೇಕು ಎಂದು ಹೇಳಿದರು.

ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್ ನಿರ್ಲಕ್ಷ್ಯ, ಚಾಲನಾ ಪರವಾನಗಿ ಮತ್ತು ವಿಮೆ ಇಲ್ಲದೆ ವಾಹನ ಚಲಾಯಿಸುವುದು, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು, ಅತಿವೇಗದ ಚಾಲನೆ ಹಾಗೂ ಮಾರ್ಪಡಿಸಿದ ಸೈಲೆನ್ಸರ್‍ಗಳಿಂದ ಶಬ್ದ ಮಾಲಿನ್ಯ ಉಂಟುಮಾಡುವುದನ್ನು ತಡೆಯಬೇಕು ಎಂದು ತಿಳಿಸಿದರು.

“ನಮ್ಮ ಉದ್ದೇಶ ಯಾರಿಗೂ ತೊಂದರೆ ನೀಡುವುದಲ್ಲ. ಮೊದಲ ಹಂತದಲ್ಲಿ ಜಾಗೃತಿ ಮೂಡಿಸಲಾಗುವುದು. ಅಗತ್ಯವಿದ್ದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುವುದು” ಎಂದು ಹೇಳಿದರು.

ಪೆÇಲೀಸ್ ಇಲಾಖೆ, ವಕೀಲರ ಸಂಘ, ಹೋಂಗಾರ್ಡ್, ಸಾರಿಗೆ ಇಲಾಖೆ, ಆಟೊ ಚಾಲಕರ ಸಂಘ ಹಾಗೂ ಮಾಧ್ಯಮಗಳು ಕೈಜೋಡಿಸಿ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

“ಸಂಚಾರ ನಿಯಮ ಪಾಲನೆ ಕೇವಲ ದಂಡದಿಂದ ತಪ್ಪಿಸಿಕೊಳ್ಳಲು ಮಾತ್ರವಲ್ಲ. ಪ್ರತಿಯೊಬ್ಬರೂ ನಿಯಮ ಪಾಲಿಸಿದರೆ ಅಪಘಾತಗಳನ್ನು ತಡೆಯಬಹುದು. ಲೈಸೆನ್ಸ್ ಮತ್ತು ವಿಮೆ ಇಲ್ಲದೆ ವಾಹನ ಚಲಾಯಿಸುವುದು, ಅತಿವೇಗ, ಸಿಗ್ನಲ್ ಜಂಪ್ ಸೇರಿದಂತೆ ನಿಯಮ ಉಲ್ಲಂಘನೆಗಳಿಂದ ಅಪಾಯ ಎದುರಾಗುತ್ತದೆ. ನಿಯಮ ಪಾಲಿಸುವ ಮೂಲಕ ನಮ್ಮ ಜೀವ, ಕುಟುಂಬ ಹಾಗೂ ಸಮಾಜವನ್ನು ರಕ್ಷಿಸೋಣ. ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.”

  • ಮರುಳಸಿದ್ದರಾಧ್ಯ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ