Home ಕ್ರೈಂ ಸುದ್ದಿಗಳು ವಿಜಯಪುರದಲ್ಲಿ ಹಾಡ ಹಗಲೇ ಪೈನಾನ್ಸ್ ಉದ್ಯಮಿ ಬರ್ಬರ ಹತ್ಯೆ

ವಿಜಯಪುರದಲ್ಲಿ ಹಾಡ ಹಗಲೇ ಪೈನಾನ್ಸ್ ಉದ್ಯಮಿ ಬರ್ಬರ ಹತ್ಯೆ

ವಿಜಯಪುರ, ಆ.8: ನಗರದಲ್ಲಿ ಶುಕ್ರವಾರ ಸಂಜೆ ಹಾಡಹಗಲೇ ನಡೆದ ಓರ್ವನ ಭೀಕರ ಹತ್ಯೆ ನಗರವನ್ನು ಬೆಚ್ಚಿಬೀಳಿಸಿದೆ.
ಪೈನಾನ್ಸ್ ಉದ್ಯಮಿ ಶರಣು (ಶರಣಪ್ಪ) ಮಲ್ಲೇಶಪ್ಪ ಜೀವರ್ಗಿ (48) ಕೊಲೆಗೀಡಾದ ವ್ಯಕ್ತಿ.
ನಗರದ ಮುಬಾರಕ್ ಚೌಕ್ ಸಮೀಪ ಪಿಗ್ಮಿ ಕಲೆಕ್ಷನ್‍ಗೆ ತೆರಳಿದ್ದ ಶರಣು ಅವರನ್ನು ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಮನಬಂದಂತೆ ಕೊಚ್ಚಿ, ಬಳಿಕ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕಾಳಿಕಾ ನಗರದ ನಿವಾಸಿಯಾಗಿದ್ದ ಶರಣಪ್ಪ ಜೀವರ್ಗಿ ಹಲವು ವರ್ಷಗಳಿಂದ ಸ್ವಂತ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಪ್ರತಿದಿನದಂತೆ ಶುಕ್ರವಾರ ಸಂಜೆ ಪಿಗ್ಮಿ ಕಲೆಕ್ಷನ್‍ಗಾಗಿ ಮುಬಾರಕ್ ಚೌಕ್ ಪ್ರದೇಶಕ್ಕೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಪೂರ್ವಯೋಜಿತವಾಗಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ತೀವ್ರ ಹಲ್ಲೆಯಿಂದ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ವ್ಯಾಪಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಜನನಿಬಿಡ ಪ್ರದೇಶದಲ್ಲೇ ಹಾಡಹಗಲೇ ನಡೆದ ಈ ಭೀಕರ ಕೃತ್ಯದಿಂದ ನಗರ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಮಾಹಿತಿ ತಿಳಿದು ಗೋಲಗುಂಬಜ್ ಪೆÇಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಹಿರಿಯ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಅಥವಾ ಇತರೆ ಕಾರಣಗಳ ಹಿನ್ನೆಲೆಯಲ್ಲಿ ಪೆÇಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.
ಈ ಘಟನೆ ವಿಜಯಪುರದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಭೇದಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.