Home ಮುಖಪುಟ ಸುದ್ದಿ ಇರಾನ್-ಇಸ್ರೇಲ್ ನಡುವೆ ಭೀಕರ ಕ್ಷಿಪಣಿ ದಾಳಿ

ಇರಾನ್-ಇಸ್ರೇಲ್ ನಡುವೆ ಭೀಕರ ಕ್ಷಿಪಣಿ ದಾಳಿ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ

ಟೆಹ್ರಾನ್/ಜೆರೂಸಲಂ.ಜೂ೮: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು ತೀವ್ರ ಸ್ವರೂಪಕ್ಕೆ ತಿರುಗಿದ್ದು, ಉಭಯ ದೇಶಗಳು ಪರಸ್ಪರ ಭೀಕರ ಕ್ಷಿಪಣಿ ದಾಳಿಗಳನ್ನು ನಡೆಸಿವೆ.


ಇರಾನ್‌ನ ಇತ್ತೀಚಿನ ದಾಳಿಯ ಬೆನ್ನಲ್ಲೇ ಆತಂಕಗೊಂಡಿರುವ ಕೇಂದ್ರ ಸರ್ಕಾರವು ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ತಕ್ಷಣವೇ ದೇಶ ತೊರೆಯುವಂತೆ ತುರ್ತು ಮಾರ್ಗಸೂಚಿ ಹೊರಡಿಸಿದೆ. ಇರಾನ್‌ನಿಂದ ಇಸ್ರೇಲ್ ಮೇಲೆ ೩ ಹಂತಗಳಲ್ಲಿ ಭೀಕರ ಕ್ಷಿಪಣಿ ಮಳೆ; ಇಸ್ರೇಲ್‌ನಿಂದ ಇರಾನ್‌ನ ಪೆಟ್ರೋಕೆಮಿಕಲ್ ತಾಣಗಳ ಮೇಲೆ ವಾಯುದಾಳಿ ನಡೆಸಿದ್ದು ಇರಾನ್‌ನಲ್ಲಿರುವ ಭಾರತೀಯರು ಲಭ್ಯವಿರುವ ಸಾರಿಗೆ ಸಂಪರ್ಕ ಬಳಸಿ ತಕ್ಷಣ ದೇಶ ಬಿಡಲು ಸೂಚನೆ ನೀಡಿದೆ.
ಇದರಿಂದ ಕಚ್ಚಾ ತೈಲ ದರ ಶೇ. ೩ ರಷ್ಟು ಏರಿಕೆ; ಭಾರತೀಯ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ. ಭಾರತೀಯ ರಾಯಭಾರ ಕಚೇರಿಯ ತುರ್ತು ಸೂಚನೆ ನೀಡಿದೆ. ಇರಾನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ನಾಗರಿಕರಿಗೆ ಇರಾನ್ ತೊರೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.


“ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣವೇ ದೇಶದಿಂದ ಹೊರಡಬೇಕು ಮತ್ತು ಮುಂದಿನ ಆದೇಶದವರೆಗೆ ಯಾರೂ ಇರಾನ್‌ಗೆ ಪ್ರಯಾಣ ಬೆಳೆಸಬಾರದು,” ಎಂದು ಭಾರತ ಸರ್ಕಾರ ವಿನಂತಿಸಿದೆ.

ಬನಾನ್ ಮತ್ತು ಬೈರೂತ್ ಮೇಲಿನ ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಸ್ರೇಲ್‌ನ ಪ್ರಮುಖ ವಾಯುನೆಲೆಗಳಾದ ’ನೆವಾಟಿಮ್’ ಮತ್ತು ’ತೆಲ್ ನೋಫ್’ ಮೇಲೆ ಮೂರು ಹಂತಗಳಲ್ಲಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಜೆರೂಸಲಂ ಆಕಾಶದಲ್ಲಿ ಭಾರಿ ಸ್ಫೋಟದ ಸೌಂಡ್‌ಗಳು ಕೇಳಿಬಂದಿವೆ.
ಇರಾನ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ರಕ್ಷಣಾ ಪಡೆ ಪಶ್ಚಿಮ ಮತ್ತು ಮಧ್ಯ ಇರಾನ್‌ನಲ್ಲಿ ಭೀಕರ ದಾಳಿ ಸಂಘಟಿಸಿದೆ. ವಿಶೇಷವಾಗಿ ಇರಾನ್‌ನ ನೈಋತ್ಯ ಭಾಗದಲ್ಲಿರುವ ಮಹ್‌ಶಹರ್‌ನ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲೆ ಇಸ್ರೇಲ್ ಯುದ್ಧವಿಮಾನಗಳು ದಾಳಿ ನಡೆಸಿ ಧ್ವಂಸಗೊಳಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ತನ್ನ ವಾಯುನೆಲೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಒಂದೆಡೆ ಪರಿಸ್ಥಿತಿ ಕೈಮೀರುತ್ತಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆಗೆ ಒತ್ತು ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕರೆ ಮಾಡಿರುವ ಟ್ರಂಪ್, “ಇಸ್ರೇಲ್ ತನ್ನ ದಾಳಿ ಮಾಡಿದೆ, ಇರಾನ್ ಕೂಡ ತಿರುಗೇಟು ನೀಡಿದೆ. ಇಲ್ಲಿಗೆ ಸಾಕು, ಮತ್ತೆ ಪ್ರತಿದಾಳಿ ನಡೆಸಿ ಶಾಂತಿ ಒಪ್ಪಂದವನ್ನು ಹಾಳು ಮಾಡಬೇಡಿ,” ಟ್ರಂಪ್ ಎಂದು ಮನವಿ ಮಾಡಿದ್ದಾರೆ ಹಾಗೂ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಸದ್ಯದಲ್ಲೇ ಸಹಿಯಾಗಲಿದೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

. ಹಿಜ್ಬುಲ್ಲಾ ಮತ್ತು ಹೌತಿಗಳ ಪ್ರವೇಶ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿದ್ದು, ಕೆಂಪು ಸಮುದ್ರದಲ್ಲಿ ಇಸ್ರೇಲ್ ಸಂಬಂಧಿತ ಹಡಗುಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಘೋಷಿಸಿದ್ದಾರೆ. ಆರ್ಥಿಕತೆ ಮೇಲಿನ ಭೀಕರ ಪರಿಣಾಮಯುದ್ಧದ ಕಿಡಿಯು ಜಾಗತಿಕ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. ೩.೨೯ ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ಗೆ ೯೬.೧೫ ಅಮೆರಿಕನ್ ಡಾಲರ್ ತಲುಪಿದೆ. ಇದರ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲಾಗಿದ್ದು, ಮುಂಬೈ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ೭೨೪ ಪಾಯಿಂಟ್ಸ್ ಕುಸಿತ ಕಂಡು ೭೩,೫೧೮ ಕ್ಕೆ ತಲುಪಿದರೆ, ನಿಫ್ಟಿ ೨೨೨ ಪಾಯಿಂಟ್ಸ್ ಕುಸಿದಿದೆ. ಇತ್ತ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ೧೭ ಪೈಸೆ ಕುಸಿತ ಕಂಡು ೯೫.೩೫ ರೂ. ಗಳ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.