
ಕಲಬುರಗಿ,ಜೂ.8-ವಿಶ್ವ ಪರಿಸರ ದಿನದ ನಿಮಿತ್ಯವಾಗಿ ಮಿಣಜಗಿಯ ಶ್ರೀ ದತ್ತಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಹಸಿರೇ ಉಸಿರು ಎಂಬ ನಿಟ್ಟಿನಲ್ಲಿ ಕಡಣಿ, ಹಡಿಗಿಲ್ ಹಾರೂತಿ,ಮಿಣಜಗಿ, ತಾಡತೆಗನೂರು, ಗರೂರ(ಬಿ), ಕವಲಗಾ (ಬಿ), ಬಿದನೂರ್, ಬಸವಪಟ್ಟಣ, ಇನ್ನು ಅನೇಕ ಸರ್ಕಾರಿ ಶಾಲೆಗಳಿಗೆ ಸಸಿ ನೀಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಕಡಣಿಯಲ್ಲಿ ಕಲಬುರಗಿಯ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ , ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಅಂಬರೀಶ್ ಪಾಟೀಲ್, ಶಿಕ್ಷಣ ಸಂಯೋಜಕರಾದ ಸುಧಾಕರ್ ಸರ್, ಶಾಲೆಯ ಮುಖ್ಯ ಗುರುಗಳಾದ ಅಮೋಘಪ್ಪ ಪೂಜಾರಿ, ಶ್ರೀ ದತ್ತಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳಾದ ಸಂಗಮನಾಥ ಡಿ.ನಾಟೀಕಾರ್, ವ್ಯವಸ್ಥಾಪಕರಾದ ಅನಿಲ ಆರ್. ನೈಕೋಡಿ, ಶಿಕ್ಷಕರಾದ ವಿರೇಶ, ಶಾಲೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






















